ಆಹಾರಕ್ಕೆ ಮೇಲುಪ್ಪು ಹಾಕೋ ಅಭ್ಯಾಸ ಇದೆಯೆ? ಎಚ್ಚರ !

Published : Jul 18, 2022, 05:45 PM IST

ನೀವು ತಿನ್ನುವ ಪ್ರತಿಯೊಂದರಲ್ಲೂ ಮೇಲಿನಿಂದ ಉಪ್ಪನ್ನು ಹಾಕುವ ಅಭ್ಯಾಸವಿದ್ದರೆ, ಜಾಗರೂಕರಾಗಿರಿ, ಏಕೆಂದರೆ 5 ಲಕ್ಷ ಜನರ ಮೇಲೆ ನಡೆಸಿದ ಇತ್ತೀಚಿನ ಸಂಶೋಧನೆಯು ಪ್ರತಿದಿನ ತಮ್ಮ ಆಹಾರಕ್ಕೆ ಉಪ್ಪನ್ನು ಸೇರಿಸುವವರು ಸಾಮಾನ್ಯ ಜನರಿಗಿಂತ 28% ಹೆಚ್ಚು ಅಕಾಲಿಕ ಮರಣದ ಅಪಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹಾಗಂತ, ನೀವು ಉಪ್ಪಿನಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಇದರ ಅರ್ಥವಲ್ಲ. ಏಕೆಂದರೆ ದೇಹಕ್ಕೆ ನೀರು ಮತ್ತು ಆಹಾರದ ಅಗತ್ಯ ಎಷ್ಟು ಮಹತ್ವದ್ದಾಗಿದೆಯೋ?. ಅದೇ ರೀತಿ, ಉಪ್ಪಿನ ಸರಿಯಾದ ಅನುಪಾತವು ದೇಹಕ್ಕೆ ತುಂಬಾ ಅವಶ್ಯಕವಾಗಿದೆ. ಇಲ್ಲಿ ನಾವು ನಿಮಗೆ ಹೆಚ್ಚು ಉಪ್ಪನ್ನು ಸೇವಿಸೋದ್ರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಮತ್ತು ಅದರ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಲಿದ್ದೇವೆ.

PREV
19
ಆಹಾರಕ್ಕೆ ಮೇಲುಪ್ಪು ಹಾಕೋ ಅಭ್ಯಾಸ ಇದೆಯೆ? ಎಚ್ಚರ !

ಜೀವನದಲ್ಲಿ ಉಪ್ಪು ಕಡಿಮೆ ಇರಬಾರದು ಎಂದು ಹೇಳಲಾಗುತ್ತದೆ, ಆದರೆ ನಿಮ್ಮ ಆಹಾರದ ತಟ್ಟೆಯಲ್ಲಿ ಉಪ್ಪು ಕಡಿಮೆ (less salt) ಇದ್ದರೆ ಒಳ್ಳೆಯದು. ಉಪ್ಪು ಪ್ರತಿಯೊಬ್ಬರಿಗೂ ಮುಖ್ಯ. ಆದರೆ ಅದರ ಅತಿಯಾದ ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  

29

ಉಪ್ಪು ಸೋಡಿಯಂ (Sodium) ಮತ್ತು ಪೊಟ್ಯಾಸಿಯಮ್ (Potasium) ಎರಡನ್ನೂ ಹೊಂದಿರುತ್ತದೆ. ಸೋಡಿಯಂ ಎಲ್ಲಾ ಅಗರ್ನ್ ಗಳಿಗೆ ಆಮ್ಲಜನಕ (oxygen) ಮತ್ತು ಇತರ ಪೋಷಕಾಂಶಗಳನ್ನು ತಲುಪಿಸಲು ಮತ್ತು ಮಾನವ ದೇಹದಲ್ಲಿ ಸರಿಯಾದ ಮಟ್ಟದ ನೀರನ್ನು ಸೃಷ್ಟಿಸಲು ಸಹಾಯ ಮಾಡುತ್ತೆ. ಈ ಕಾರಣದಿಂದಾಗಿ, ನಮ್ಮ ನರಗಳಲ್ಲಿ ಬಲ ವೃದ್ಧಿಯಾಗಿರುತ್ತೆ. ಆದರೆ ಒಂದು ದಿನದಲ್ಲಿ ಎಷ್ಟು ಉಪ್ಪನ್ನು ತಿನ್ನಬೇಕು ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತದೆ. 

39

ಪ್ರತಿಯೊಬ್ಬ ಮನುಷ್ಯನು ದಿನಕ್ಕೆ ಕೇವಲ 5 ಗ್ರಾಂ ಉಪ್ಪನ್ನು ಮಾತ್ರ ತಿನ್ನಬೇಕು ಎಂದು ತಜ್ಞರು ನಂಬುತ್ತಾರೆ. ಅಂದರೆ, ನೀವು ಯಾವುದೇ ಆಹಾರವನ್ನು ತಯಾರಿಸಿದರೂ, ಒಂದು ಸಣ್ಣ ಚಮಚ ಉಪ್ಪು ಸಾಕು. ಒಂದು ದಿನದಲ್ಲಿ ನೀವು ಕೇವಲ 2.3 ಗ್ರಾಂ ಸೋಡಿಯಂ (sodium) ಅನ್ನು ಮಾತ್ರ ತೆಗೆದುಕೊಳ್ಳಬೇಕು, ಅದನ್ನು ನೀವು 5 ಗ್ರಾಂ ಉಪ್ಪಿನಲ್ಲಿ ಪಡೆಯುತ್ತೀರಿ ಅನ್ನೋದನ್ನು ನೆನಪಿನಲ್ಲಿಡಬೇಕು. 

49

ಕೆಲವು ಜನರು ಆಹಾರದಲ್ಲಿ ಮೇಲಿನಿಂದ ಹೆಚ್ಚುವರಿ ಉಪ್ಪನ್ನು ಚಿಮುಕಿಸುವ (sprinkling salt) ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಇದರ ಬಗ್ಗೆ ತಿಳಿದಿಲ್ಲವಾದರೂ, ಹಾಗೆ ಮಾಡುವುದು ಜನರ ಆರೋಗ್ಯಕ್ಕೆ ಅಪಾಯಕಾರಿ ಎಂದು ಸಾಬೀತಾಗಿದೆ. ಆದುದರಿಂದ ಹೆಚ್ಚಿನ ಉಪ್ಪನ್ನ ಸೇವಿಸಬೇಡಿ. 

59

ಅತಿಯಾದ ಉಪ್ಪಿನ ಸೇವನೆಯಿಂದ (consuming too much salt) ಉಂಟಾಗುವ ಹಾನಿ ಬಗ್ಗೆ ತಿಳಿದುಕೊಳ್ಳೋಣ 
• ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಹೃದಯ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳು (kidney problem) ಉಂಟಾಗಬಹುದು.

69

• ಹೆಚ್ಚಿನ ಉಪ್ಪು ಸೇವಿಸೋದ್ರಿಂದ ರಕ್ತಪರಿಚಲನಾ ವ್ಯವಸ್ಥೆ ಮತ್ತು ನರವ್ಯೂಹವನ್ನು ಹಾನಿಗೊಳಿಸಬಹುದು. 
• ರಕ್ತದೊತ್ತಡ (blood pressure) ಹೆಚ್ಚಾಗುತ್ತದೆ, ಇದು ಪಾರ್ಶ್ವವಾಯು ಮತ್ತು ಇತರ ರೋಗಗಳಿಗೆ ಕಾರಣವಾಗಬಹುದು.

79

ಕಚ್ಚಾ ಉಪ್ಪು ಹೆಚ್ಚು ಹಾನಿಕಾರಕ ಅಥವಾ ಆಹಾರದೊಂದಿಗೆ ಉಪ್ಪನ್ನು ಬೇಯಿಸಿದಾಗ, ಉಪ್ಪನ್ನು ಆಹಾರ ಹೀರಿಕೊಳ್ಳುತ್ತದೆ. ಆದರೆ ಮೇಲಿನಿಂದ ಉಪ್ಪು ಹಾಕಿದಾಗ, ಅದರ ರಚನೆ ಬದಲಾಗೋದಿಲ್ಲ. ಇದನ್ನು ದೇಹವು ಬಹಳ ನಿಧಾನವಾಗಿ ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ ಕಚ್ಚಾ ಉಪ್ಪು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ.

89

 • ಕಡಿಮೆ ಉಪ್ಪನ್ನು ತಿನ್ನುವುದರಿಂದ ಆಗುವ ಅನಾನುಕೂಲಗಳು 
ಉಪ್ಪನ್ನು ಅತಿಯಾಗಿ ಸೇವಿಸುವಂತೆ, ಅದರ ಕೊರತೆಯು ಸಹ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಇದರಿಂದ, ನೀವು ಕಡಿಮೆ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹದ ರೋಗಿಯಾಗಬಹುದು. ಉಪ್ಪಿನ ಕೊರತೆಯು ನಿಮ್ಮ ಮೆದುಳು ಮತ್ತು ಹೃದಯದಲ್ಲಿ ಊತಕ್ಕೆ ಕಾರಣವಾಗಬಹುದು. ಇದರಿಂದಾಗಿ ತಲೆನೋವು, ಸೆಳೆತಗಳು ಸಹ ಬರಬಹುದು. 

99

ಉಪ್ಪಿನ ಕೊರತೆ ಮತ್ತೊಂದು ಅಡ್ಡ ಪರಿಣಾಮವೆಂದರೆ ದೇಹದ ಅಂಗವು ತನಗೆ ಅಗತ್ಯವಿರುವಷ್ಟು ರಕ್ತವನ್ನು ತಲುಪುವುದಿಲ್ಲ. ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ 4.6% ನಷ್ಟು ಹೆಚ್ಚಾಗುತ್ತದೆ. ಇದಲ್ಲದೆ, ದೇಹದಲ್ಲಿ ಉಪ್ಪಿನ ಕೊರತೆಯಿಂದ, ಆಲಸ್ಯ ಮತ್ತು ವಾಂತಿ ಸಮಸ್ಯೆಯೂ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಉಪ್ಪನ್ನು ಪ್ರತಿದಿನ ಸೇವಿಸಿ.  

Read more Photos on
click me!

Recommended Stories