ಜೇನು, ಲವಂಗ ಸೇವಿಸಿದರೆ ಆರೋಗ್ಯಕ್ಕಿಲ್ಲ ಆಪತ್ತು

First Published | Apr 9, 2021, 5:09 PM IST

ಜೇನು ಮತ್ತು ಲವಂಗ ಹೆಚ್ಚಿನ ಮನೆಗಳಲ್ಲಿ ಬಳಸಲಾಗುತ್ತದೆ. ಜೇನು ಮತ್ತು ಲವಂಗದಲ್ಲಿ ಕಂಡು ಬರುವ ಎಲ್ಲಾ ಗುಣಗಳ ಬಗ್ಗೆಯೂ ತಿಳಿದಿರಬಹುದು. ಆಯುರ್ವೇದದಲ್ಲಿ ಇವೆರಡನ್ನೂ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಆರೋಗ್ಯಕ್ಕೆ ಅನುಕೂಲವಾಗುವ ಹಲವು ರೀತಿಯ ಔಷಧೀಯ ಗುಣಗಳನ್ನು ಇವು ಹೊಂದಿವೆ. ಆದರೆ ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳು ಏನು ಗೊತ್ತಾ? 

ಲವಂಗ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ದೇಹದ ಅನೇಕ ರೋಗಗಳು ಸಹ ವಾಸಿಯಾಗುತ್ತವೆ. ಆದ್ದರಿಂದ ಲವಂಗ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ನೋಡೋಣ...
1. ಮೊಡವೆಗಳನ್ನು ತೆಗೆದುಹಾಕಿಲವಂಗ ಮತ್ತು ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ, ಇದು ಚರ್ಮವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮೊಡವೆಗಳನ್ನೂ ನಿವಾರಿಸುತ್ತದೆ.
Tap to resize

ಹೇಗೆ ಬಳಸುವುದು?ಇದಕ್ಕಾಗಿ ಅರ್ಧ ಚಿಟಿಕೆ ಲವಂಗದ ಪುಡಿಗೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ. ಈಗ ಈ ಪೇಸ್ಟ್ ಅನ್ನು ಮಲಗುವ ಮುನ್ನ ಮೊಡವೆಗಳ ಮೇಲೆ ಹಚ್ಚಿ. ಬೆಳಗ್ಗೆ ಎದ್ದು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಿಂದ ಮಾಯವಾಗುತ್ತದೆ.
2. ಚರ್ಮವು ಆರೋಗ್ಯವಾಗಿರುವುದುಲವಂಗವು ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿ. ಇದು ಸೂಕ್ಷ್ಮಜೀವಿ ವಿರೋಧಿ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಬ್ಯಾಕ್ಟೀರಿಯಾದಿಂದ ಚರ್ಮವನ್ನು ರಕ್ಷಿಸುತ್ತದೆ. ಮತ್ತೊಂದೆಡೆ, ಜೇನುತುಪ್ಪಮುಖವನ್ನು ತೇವಾಂಶದಿಂದ ಇರಿಸಲು ಸಹಾಯ ಮಾಡುತ್ತದೆ. ಒಣ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಇದು ವರದಾನವಾಗಿದೆ.
ಹೇಗೆ ಬಳಸುವುದು?ಇದಕ್ಕಾಗಿ ಒಂದು ಟೀ ಚಮಚ ಜೇನುತುಪ್ಪಕ್ಕೆ ಲವಂಗದ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ವಾರದಲ್ಲಿ 4 ಬಾರಿ ಇದನ್ನು ಬಳಸುವುದರಿಂದ ಮುಖವು ಹೊಳೆಯುತ್ತದೆ.
3. ಗಂಟಲು ನೋವಿನಲ್ಲಿ ಆರಾಮದಾಯಕಬದಲಾಗುತ್ತಿರುವ ಹವಾಮಾನದಲ್ಲಿ ಗಂಟಲು ನೋವಿನ ದೂರುಗಳು ಅತ್ಯಂತ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಜೇನು ಮತ್ತು ಲವಂಗದ ಮಿಶ್ರಣವನ್ನು ಸೇವಿಸುವುದರಿಂದ ಸೋಂಕು ಮತ್ತು ನೋವನ್ನು ನಿವಾರಿಸಬಹುದು.
ಬಳಸುವುದು ಹೇಗೆ?ಇದಕ್ಕಾಗಿ ಮೂರು ಲವಂಗದ ಮೊಗ್ಗುಗಳು ಮತ್ತು ಒಂದು ಟೀ ಚಮಚ ಜೇನುತುಪ್ಪ ಬೇಕಾಗುತ್ತದೆ. ಲವಂಗವನ್ನು ಪುಡಿ ಮಾಡಿ ನಂತರ ಇದಕ್ಕೆ ಜೇನುತುಪ್ಪವನ್ನು ಸೇರಿಸಿ. ಸುಮಾರು 5 ಗಂಟೆಗಳ ಕಾಲ ಬಿಡಿ. ಈಗ ಲವಂಗವನ್ನು ತೆಗೆದು ಜೇನುತುಪ್ಪವನ್ನು ನೆಕ್ಕಿರಿ. ನಂತರ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
4. ಬಾಯಿ ಹುಣ್ಣಿನ ಸಮಸ್ಯೆ ನಿವಾರಿಸಿಬಾಯಿ ಹುಣ್ಣು ಸಾಮಾನ್ಯ ಸಮಸ್ಯೆಯಾಗಿದೆ. ಲವಂಗ ಮತ್ತು ಜೇನುತುಪ್ಪವನ್ನು ಬೆರೆಸಿಕೊಳ್ಳುವುದು ಪ್ರಯೋಜನಕಾರಿ. ಅವು ಉರಿಯೂತ ನಿವಾರಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿವೆ, ಇದು ಬಾಯಿ ಹುಣ್ಣುಗಳನ್ನು ತೆಗೆದುಹಾಕುತ್ತದೆ.
ಬಳಸುವುದು ಹೇಗೆ?ಒಂದು ಟೀ ಚಮಚ ಜೇನುತುಪ್ಪಕ್ಕೆ ಅರ್ಧ ಟೀ ಚಮಚ ಲವಂಗದ ಪುಡಿಯನ್ನು ಸೇರಿಸಿ. ನಂತರ ಇದನ್ನು ಗುಳ್ಳೆಗಳ ಮೇಲೆ ಹಚ್ಚಿ. ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತೊಳೆಯಿರಿ. ಉತ್ತಮ ಫಲಿತಾಂಶಗಳಿಗಾಗಿ ದಿನಕ್ಕೆ ಮೂರು ಬಾರಿ ಇದನ್ನು ಹಚ್ಚಿ.

Latest Videos

click me!