ಮನೆಯಲ್ಲಿ ತಯಾರಿಸಿ ಈ ದೇಸಿ ಎಣ್ಣೆ, ಉಪಯೋಗ ಮಾತ್ರ ಒಂದೆರಡಲ್ಲ!

First Published Apr 13, 2021, 11:57 AM IST

ಸಕಾರಾತ್ಮಕ ಕಂಪನಗಳನ್ನು ಕಾಪಾಡಿಕೊಳ್ಳಲು ಬಹುತೇಕ ಮನೆಗಳಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಕರ್ಪೂರ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕುತ್ತದೆ. ಆದ್ದರಿಂದ ಪೂಜೆಯಲ್ಲಿ ಜನರು ಕರ್ಪೂರವನ್ನು ಸುಡುತ್ತಾರೆ ಮತ್ತು ಮನೆಯನ್ನು ಶುದ್ಧೀಕರಿಸುತ್ತಾರೆ. ಆದರೆ ಕರ್ಪೂರದ ಬಗ್ಗೆ ಕೆಲವೇ ಜನರಿಗೆ ತಿಳಿದಿರುವ ಅನೇಕ ಅನುಕೂಲಗಳಿವೆ. ಚರ್ಮ ಮತ್ತು ಆರೋಗ್ಯಕ್ಕೆ ಮಾಂತ್ರಿಕ ಔಷಧಿಗಿಂತ ಕಡಿಮೆಯಿಲ್ಲದ ಕರ್ಪೂರ ಎಣ್ಣೆಯ ಪ್ರಯೋಜನಗಳನ್ನು ನೋಡೋಣ.. 

ಕರ್ಪೂರ ತೈಲವು ಅನನ್ಯ ಪ್ರಯೋಜನಗಳನ್ನು ಹೊಂದಿದೆ-1. ತಲೆಹೊಟ್ಟು ಮತ್ತು ಹೇನುಗಳು ಕೂದಲಿನಿಂದ ದೂರವಾಗುತ್ತವೆಕರ್ಪೂರದ ಎಣ್ಣೆಯು ಕೂದಲಿಗೆ ಅತ್ಯಂತ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕರ್ಪೂರ ಮತ್ತು ಕೊಬ್ಬರಿ ಎಣ್ಣೆಯನ್ನು ಒಟ್ಟಿಗೆ ಸೇರಿಸಿ,ನಂತರ ರಾತ್ರಿ ತಲೆಗೆ ಮಸಾಜ್ ಮಾಡಿ ಮತ್ತು ಬೆಳಿಗ್ಗೆ ಶಾಂಪೂ ಮಾಡಿ. ಇದರಿಂದ ತಲೆಹೊಟ್ಟು ಮತ್ತು ಹೇನುಗಳು ದೂರವಾಗುತ್ತವೆ.
undefined
2. ಮುಖಕ್ಕೆ ಹೊಳಪನ್ನು ತರಲು ಸಹಾಯ ಮಾಡುತ್ತದೆಮುಖದ ಕಳೆದುಹೋದ ಹೊಳಪನ್ನು ಮರಳಿ ತರಲು ಕರ್ಪೂರದ ಎಣ್ಣೆಯೂ ಸಹಾಯಕವಾಗಬಹುದು. ಕರ್ಪೂರದ ಎಣ್ಣೆಗೆ ರೋಸ್ ವಾಟರ್ ಸೇರಿಸಿ ನಂತರ ದಪ್ಪನೆಯ ಪೇಸ್ಟ್ ತಯಾರಿಸಿ ಫೇಸ್ ಪ್ಯಾಕ್‌ನಂತೆ ಹಚ್ಚಿ. ಒಣಗಿದ ತಕ್ಷಣ ತಣ್ಣೀರಿನಿಂದ ಫೇಸ್ ವಾಶ್ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಮುಖವು ಉತ್ತಮವಾಗಿ ಕಾಣುತ್ತದೆ.
undefined
3. ಕಲೆಗಳು ಸಹ ನಿವಾರಣೆಯಾಗುತ್ತವೆಕರ್ಪೂರದ ಎಣ್ಣೆ ಮುಖದ ಕಲೆಗಳನ್ನು ಸಹ ತೆಗೆದುಹಾಕುತ್ತದೆ. ಇದಕ್ಕೆ ಕೊಬ್ಬರಿ ಎಣ್ಣೆ ಮತ್ತು ಕರ್ಪೂರವೂ ಉಪಯುಕ್ತ. ಸ್ವಲ್ಪ ಸಮಯದವರೆಗೆ ಅದನ್ನು ಮುಖದ ಮೇಲೆ ಮಸಾಜ್ ಮಾಡಿ ನೋಡಿ.
undefined
4. ಮೊಡವೆಗಳು ದೂರವಾಗುತ್ತದೆಕರ್ಪೂರದ ಎಣ್ಣೆಯು ಮುಖದ ಮೊಡವೆಗಳನ್ನು ನಿವಾರಿಸಲು ಸಾಕಷ್ಟು ಪ್ರಯೋಜನಕಾರಿ. ಹತ್ತಿಉಂಡೆಯ ಸಹಾಯದಿಂದ ಮುಖಕ್ಕೆ ಕರ್ಪೂರದ ಎಣ್ಣೆಯನ್ನು ಹಚ್ಚಿ. ಇದರಿಂದ ಮೊಡವೆ ತೊಲಗುತ್ತದೆ.
undefined
5. ಬಿರುಕು ಬಿಟ್ಟ ಹಿಮ್ಮಡಿಗಳನ್ನು ಸಹ ರಿಪೇರಿ ಮಾಡುತ್ತದೆಬಿರುಕು ಬಿಟ್ಟ ಹಿಮ್ಮಡಿಗಳನ್ನು ಸರಿಪಡಿಸಲು ಎರಡು ಟೀ ಚಮಚ ಕರ್ಪೂರದ ಎಣ್ಣೆಯನ್ನು ತೆಗೆದುಕೊಳ್ಳುವುದು ಮತ್ತು ಟಬ್ ಗೆ ಸ್ವಲ್ಪ ನೀರನ್ನು ಸೇರಿಸುವುದು. ನಂತರ ಸುಮಾರು 20 ನಿಮಿಷಗಳ ಕಾಲ ಟಬ್ ನಲ್ಲಿ ಕಾಲುಗಳನ್ನು ಹಾಕಿ ಕುಳಿತುಕೊಳ್ಳಿ. ಹಿಮ್ಮಡಿಗಳು ಸರಿಯಾಗುತ್ತವೆ.
undefined
6. ಶಾಖವನ್ನು ಅನುಭವಿಸಿದಾಗಲೂ ಕೆಲಸಕ್ಕೆ ಬರುತ್ತದೆಕರ್ಪೂರ ಶಾಖದಿಂದ ಪರಿಹಾರ ಪಡೆಯಲು ಪರಿಣಾಮಕಾರಿ ಮಾರ್ಗ. ಇದಕ್ಕಾಗಿ ಕೊಬ್ಬರಿ ಎಣ್ಣೆಯೊಂದಿಗೆ ಕರ್ಪೂರವನ್ನು ಬೆರೆಸಿ, ಈ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿ. ಇದು ದೇಹವನ್ನು ತಂಪಾಗಿರಿಸುತ್ತದೆ.
undefined
7. ಕಿರಿಕಿರಿಗೆ ಪರಿಹಾರವನ್ನೂ ನೀಡುತ್ತದೆಕರ್ಪೂರ ತಣ್ಣಗಿರುತ್ತದೆ. ಆದ್ದರಿಂದ ತಿಳಿ ನೀರಿನೊಂದಿಗೆ ಕರ್ಪೂರದ ಎಣ್ಣೆಯನ್ನು ಹಚ್ಚುವುದರಿಂದ ಪರಿಹಾರಲಭ್ಯ. ಇದಕ್ಕಾಗಿ ಕರ್ಪೂರದ ಎಣ್ಣೆಯಲ್ಲಿ ಶ್ರೀಗಂಧದ ಪುಡಿಯನ್ನು ಬೆರೆಸಿ. ನಂತರ ಬಾಧಿತ ಪ್ರದೇಶದ ಮೇಲೆ ಇದನ್ನು ಹಚ್ಚಿ . ಇದರಿಂದ ಕಿರಿಕಿರಿ ಕಡಿಮೆಯಾಗುತ್ತದೆ.
undefined
ಕರ್ಪೂರದ ಎಣ್ಣೆಯನ್ನು ಮನೆಯಲ್ಲಿಯೂ ಮಾಡಬಹುದುಕರ್ಪೂರದ ಎಣ್ಣೆ ತಯಾರಿಸುವ ವಿಧಾನ ಬಹಳ ಸುಲಭ. ನೀವು ಮಾಡಬೇಕಾಗಿರುವುದು 50 ಗ್ರಾಂ ಕರ್ಪೂರವನ್ನು ತೆಗೆದುಕೊಂಡು ಉಗುರು ಬೆಚ್ಚಗಿನ 100 ಗ್ರಾಂ ತೆಂಗಿನಕಾಯಿಯ ಎಣ್ಣೆಯಲ್ಲಿ ಹಾಕಿ. ನಂತರ ಬಾಟಲಿಯನ್ನು ರಾತ್ರಿಯಿಡೀ ಬಿಟ್ಟು ಬೆಳಿಗ್ಗೆ ಬಾಟಲಿಯನ್ನು ಅಲುಗಾಡಿಸಿ. ಕರ್ಪೂರದ ಎಣ್ಣೆ ರೆಡಿ.
undefined
click me!