ವಿಟಮಿನ್ ಆಗರವಾಗಿರುವ ಸೀತಾಫಲವನ್ನು ಸೇವಸಿದರೇನು ಫಲ?
First Published | Apr 12, 2021, 6:37 PM ISTಸೀತಾಫಲಗಳು ವಿಟಮಿನ್ ಸಿ ಯಂತಹ ಆ್ಯಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ, ಇದು ನಮ್ಮ ದೇಹದಲ್ಲಿ ಮುಕ್ತ radicleಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿ ಪೊಟ್ಯಾಷಿಯಮ್ ಮತ್ತು ಮೆಗ್ನಿಷಿಯಮ್ ಕೂಡ ಅಧಿಕವಾಗಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಹೃದಯವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೀತಾಫಲದಲ್ಲಿ ವಿಟಮಿನ್ ಎ ಇದೆ, ಇದು ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣು ಕಣ್ಣುಗಳಿಗೆ ಉತ್ತಮ. ಮತ್ತು ಅಜೀರ್ಣ ಸಮಸ್ಯೆಗೂ ಮದ್ದು. ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ, ಏಕೆಂದರೆ ತಾಮ್ರದ ಅಂಶ ಮಲಬದ್ಧತೆಯನ್ನು ಗುಣಪಡಿಸಲು ಸಹಕರಿಸುತ್ತದೆ. ಅತಿಸಾರ ಮತ್ತು ಭೇದಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.