ನೀವು ಮೊಟ್ಟೆ ಪ್ರಿಯರಾ...? ಒಳ್ಳೆಯ ಮೊಟ್ಟೆಯಯನ್ನು ಆಯ್ಕೆ ಮಾಡುವ ಸಂದಿಗ್ಧತೆಗೆ ನೀವು ಹಲವು ಬಾರಿ ಸಿಲುಕಿರುತ್ತೀರಿ.

ಶಾಪಿಂಗ್ ಹೋದಾಗ, ರುಚಿ ಮತ್ತು ಆರೋಗ್ಯದ ಪ್ರಯೋಜನಗಳ ವಿಷಯದಲ್ಲಿ ಉತ್ತಮವಾದದನ್ನು ಆರಿಸುವುದು ಕಷ್ಟದ ಕೆಲಸ.

ಎಲ್ಲರಿಗೂ ತಿಳಿದಿರುವಂತೆ ಮೊಟ್ಟೆಗಳು ಪ್ರೋಟೀನ್‌ಗಳ ಶಕ್ತಿ ಕೇಂದ್ರ. ಸ್ನಾಯುಗಳ ಬಲ ಹೆಚ್ಚಿಸಲು ಮತ್ತು ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸಲು ಮೊಟ್ಟೆ ಸಹಕಾರಿ. ಇದು ಮುಖ್ಯ ಆಹಾರ ಪದಾರ್ಥವಾಗಿದ್ದು, ಹೊಸ ಖಾದ್ಯವನ್ನು ತಯಾರಿಸುವಾಗಲೂ ಮೊಟ್ಟೆಯನ್ನು ಬೇರೆ ಯಾವುದೇ ಆಹಾರದೊಂದಿಗೆ ಸೇರಿಸಬಹುದು. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ. ಇದು ನಿಮಗೆ ಇಡೀ ದಿನ ಶಕ್ತಿ ಒದಗಿಸುತ್ತದೆ.

ಬಿಳಿ ಮೊಟ್ಟೆ ಮತ್ತು ಕಂದು ಮೊಟ್ಟೆಗಳ ಬಗ್ಗೆ ಯಾವಾಗಲೂ ದೊಡ್ಡ ಗೊಂದಲವಿದೆ. ಯಾವುದೇ ಆಹಾರ ಪದಾರ್ಥದ ಕಂದು ಬಣ್ಣವನ್ನು ಬಿಳಿಗಿಂತ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಅದು ಕಂದು ಅಕ್ಕಿ ಅಥವಾ ಕಂದು ಬ್ರೆಡ್ ಆಗಿರಬಹುದು. ಕಂದು ಮೊಟ್ಟೆಗಳು ಮತ್ತು ಬಿಳಿ ಮೊಟ್ಟೆಗಳ ನಡುವಿನ ಕೆಲವು ವ್ಯತ್ಯಾಸಗಳು ಇಲ್ಲಿವೆ:

ಬಣ್ಣದಲ್ಲಿನ ವ್ಯತ್ಯಾಸ: ಮೊಟ್ಟೆಯ ಬಣ್ಣವು ಕೋಳಿಯ ಆರೋಗ್ಯ ಮತ್ತು ವಾತಾವರಣವನ್ನು ಅವಲಂಬಿಸಿರುತ್ತದೆ. ಮೊಟ್ಟೆಯಿಡುವ ಕೋಳಿಯ ತಳಿಯಿಂದಲೂ ಇದನ್ನು ನಿರ್ಧರಿಸಲಾಗುತ್ತದೆ.

ಕೋಳಿ ಪ್ರಭೇದ: ಕೆಂಪು ಇಯರ್‌ಲೋಬ್‌ಗಳು ಮತ್ತು ಕಂದು ಬಣ್ಣದ ಗರಿಗಳನ್ನು ಹೊಂದಿರುವ ಕೋಳಿ ಕಂದು ಮೊಟ್ಟೆಗಳನ್ನು ಇಡುತ್ತದೆ ಎಂದು ಹೇಳಲಾಗುತ್ತದೆ. ಬಿಳಿ ಮೊಟ್ಟೆಗಳು ತಿಳಿ ಬಣ್ಣದ ಇಯರ್‌ಲೋಬ್ ಮತ್ತು ಬಿಳಿ ಗರಿಗಳನ್ನು ಹೊಂದಿರುವ ಕೋಳಿಯಿಂದ ಬರುತ್ತವೆ.

ಗಾತ್ರದಲ್ಲಿ ವ್ಯತ್ಯಾಸ: ಕಂದು ಮೊಟ್ಟೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ ಮತ್ತು ಮೊಟ್ಟೆಯ ಹಳದಿ ಭಾಗ ಬಿಳಿ ಮೊಟ್ಟೆಯ ಹಳದಿಭಾಗಕ್ಕಿಂತ ಗಾಢವಾಗಿರುತ್ತದೆ.

ಪೌಷ್ಠಿಕಾಂಶದ ವ್ಯತ್ಯಾಸ: ಕ್ಯಾಲೊರಿಗಳ ವಿಷಯಕ್ಕೆ ಬಂದರೆ, ಇವೆರಡೂ ಸಮಾನವಾಗಿರುತ್ತದೆ. ಆದರೆ ಮೊಟ್ಟೆಗಳ ಒಟ್ಟಾರೆ ಪೋಷಕಾಂಶ ಮೌಲ್ಯ ಕೋಳಿ ಇದ್ದ ವಾತಾವರಣವನ್ನು ಅವಲಂಬಿಸಿರುತ್ತದೆ. ಕಂದು ಮೊಟ್ಟೆಗಳು ಒಮೆಗಾ -3 ವಿಷಯದಲ್ಲಿ ಬಿಳಿ ಬಣ್ಣಕ್ಕಿಂತ ಸ್ವಲ್ಪ ಉತ್ಕೃಷ್ಟವಾಗಿವೆ. ಎರಡೂ ಮೊಟ್ಟೆಗಳ ಪ್ರೋಟೀನ್ ಮತ್ತು ಕೊಲೆಸ್ಟ್ರಾಲ್ ಅಂಶವು ಸಮಾನವಾಗಿರುತ್ತದೆ.

ಭಿನ್ನ ರುಚಿ: ಇವೆರಡೂ ಒಂದೇ ರೀತಿಯ ರುಚಿಯನ್ನು ಹೊಂದಿವೆ. ಆದರೆ ಕಂದು ಮೊಟ್ಟೆಗಳು ಬಿಳಿ ಬಣ್ಣಕ್ಕೆ ಹೋಲಿಸಿದರೆ ಬಹಳಷ್ಟು ಜನರಿಗೆ ಸ್ವಲ್ಪ ಹೆಚ್ಚೇ ರುಚಿ ಎನಿಸುತ್ತದೆ. ಇದು ಮೊಟ್ಟೆಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಇನ್ನು ಮೊಟ್ಟೆಯ ತಾಜಾತನವನ್ನು ಅವಲಂಬಿಸಿದೆ.

ವಿವಿಧ ಕಾರಣಗಳಿಂದಾಗಿ ಮೊಟ್ಟೆಗಳನ್ನು ಸೂಪರ್ ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗುತ್ತದೆ. ಅದು ಕಂದು ಅಥವಾ ಬಿಳಿಯಾಗಿರಲಿ, ಅದರ ಪ್ರಯೋಜನಗಳು ಮಾತ್ರ ಅಪಾರ. ನಿಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಬೇಕು. ಎರಡೂ ಮೊಟ್ಟೆಗಳ ಪೌಷ್ಟಿಕಾಂಶದ ಮೌಲ್ಯದಲ್ಲಿ ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ಆದರೆ ಅದರ ರುಚಿ ಮತ್ತು ದೊಡ್ಡ ಗಾತ್ರಕ್ಕಾಗಿ ನೀವು ಕಂದು ಬಣ್ಣದ ಮೊಟ್ಟೆಯನ್ನು ಆರಿಸಿಕೊಳ್ಲಬಹುದು.