ಉತ್ತಮ ಆರೋಗ್ಯಕ್ಕೆ ನ್ಯೂಟ್ರಿಶನಿಸ್ಟ್ ನೀಡಿದ ಸರಳ ಸಲಹೆಗಳು

First Published Sep 4, 2020, 5:44 PM IST

ರುಜುತಾ ದಿವೇಕರ್ ಹೆಸರಾಂತ ನ್ಯೂಟ್ರಿಶನಿಸ್ಟ್. ಬಾಲಿವುಡ್‌ನ ಸೆಲೆಬ್ರಿಟಿಗಳೆಲ್ಲ ರುಜುತಾ ಬಳಿ ಡಯಟ್ ಹಾಗೂ ವರ್ಕೌಟ್ ಪ್ಲ್ಯಾನ್‌ಗಾಗಿ ಮುಗಿ ಬೀಳುತ್ತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಮಾನ್ಯರಿಗೂ ಸದಾ ಸಲಹೆಗಳನ್ನು ನೀಡುತ್ತ ಪ್ರೋತ್ಸಾಹಿಸುತ್ತಲೇ ಇರುತ್ತಾರೆ ರುಜುತಾ. ಈ ಬಾರಿ ಉತ್ತಮ ಆರೋಗ್ಯಕ್ಕಾಗಿ 10 ಟಿಪ್ಸ್‌ಗಳನ್ನು ಅವರು ನೀಡಿದ್ದಾರೆ. ಈ ಸಲಹೆಗಳು ಎಷ್ಟೊಂದು ಸರಳವಾಗಿವೆ ಎಂದರೆ ಪ್ರತಿಯೊಬ್ಬರೂ ಇವನ್ನು ಫಾಲೋ ಮಾಡಬಹುದು. ಅಲ್ಪಸ್ವಲ್ಪ ಬದಲಾವಣೆಗಳಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂದರೆ ಪಾಲಿಸಿ ನೋಡಲೇನಡ್ಡಿ ಅಲ್ಲವೇ?

ಮೊಸರನ್ನು ಮನೆಯಲ್ಲೇ ಪ್ರತಿದಿನ ತಯಾರಿಸಿ ಬಳಸಿ.
undefined
ಪ್ರತಿದಿನ ಬೆಳಗ್ಗೆ ಸ್ವಲ್ಪ ಬಾದಾಮಿ, ಮಧ್ಯಾಹ್ನದ ಬಳಿಕ ಗೋಡಂಬಿ ಅಥವಾ ಕಡ್ಲೆ ಸೇವಿಸಿ.
undefined
ಯಾವ ಕಾಲದಲ್ಲಿ ಯಾವ ಸೊಪ್ಪು ತರಕಾರಿ ಬೆಳೆಯಲಾಗುತ್ತದೋ ಅದನ್ನು ಚೆನ್ನಾಗಿ ಬಳಸಿ.
undefined
ರಾತ್ರಿ ಮಲಗಲು ಹಾಗೂ ಬೆಳಗ್ಗೆ ಏಳಲು ಸಮಯ ನಿಗದಿಪಡಿಸಿಕೊಳ್ಳಿ.
undefined
ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಮಿಲೆಟ್‌ಗಳನ್ನು ಆಹಾರದಲ್ಲಿ ಸಾಧ್ಯವಾದಷ್ಟು ಸೇರಿಸಿ.
undefined
ದಿನಕ್ಕೆ 30 ನಿಮಿಷ ವ್ಯಾಯಾಮ ಬೇಕೇ ಬೇಕು. ಉಳಿದಂತೆಯೂ ಚಟುವಟಿಕೆಯಿಂದಿರಿ.
undefined
ಕುಳಿತು ಊಟ ಮಾಡಿ. ಚಮಚ ಬಳಸದೆ ಕೈಯಿಂದಲೇ ಊಟ ಮಾಡಿ ಹಾಗೂ ಚೆನ್ನಾಗಿ ಅಗಿಯಿರಿ.
undefined
ಊಟ ಮಾಡುವಾಗ ಯಾವುದೇ ಗ್ಯಾಡ್ಜೆಟ್ ಬಳಕೆ ಬೇಡ.
undefined
ಮೂರು ಹೊತ್ತಿನ ಆಹಾರದಲ್ಲೂ ಒಂದು ಚಮಚ ತುಪ್ಪ ಬಳಸುವುದನ್ನು ಮರೆಯಬೇಡಿ.
undefined
ಸ್ಕ್ರೀನ್ ಟೈಂ ಸಾಧ್ಯವಾದಷ್ಟು ಕಡಿಮೆ ಮಾಡಿ.
undefined
click me!