egg
ಮೊಟ್ಟೆಯನ್ನು ಬೇಯಿಸಿದ ನಂತರ, ನಾವು ನೀರನ್ನು ಎಸೆಯುತ್ತೇವೆ. ಆದರೆ ಇದನ್ನು ಬಳಸುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದರ ಜೊತೆಗೆ ಮೊಟ್ಟೆಯ ಸಿಪ್ಪೆಯಿಂದ ಸಹ ಸಾಕಷ್ಟು ಪ್ರಯೋಜನ ಇದೆ.
ಮೊಟ್ಟೆಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ರಂಜಕ ಸಮೃದ್ಧವಾಗಿವೆ. ಇದಲ್ಲದೆ, ಮೆಗ್ನೀಸಿಯಮ್ ಮತ್ತು ಸೋಡಿಯಂ ಕೂಡ ಇದೆ. ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಿದಾಗ, ಈ ಅಂಶಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ.
ಮೊಟ್ಟೆ ಬೇಯಿಸಿದ ನೀರು ಗಿಡಗಳಿಗೆ ಬೆಸ್ಟ್. ಬೇಯಿಸಿದ ಮೊಟ್ಟೆಯ ನೀರನ್ನು ಗಿಡಗಳಿಗೆ ಹಾಕಿ. ಗಿಡಗಳು ಬೆಳೆಯಲು ಈ ಎಲ್ಲಾ ಪೋಷಕಾಂಶಗಳು ಅಗತ್ಯವಿದೆ. ಆದ್ದರಿಂದ, ಬೇಯಿಸಿದ ಮೊಟ್ಟೆಯ ನೀರನ್ನು ಎಸೆಯುವ ಬದಲು, ಅದನ್ನು ಗಿಡಗಳಿಗೆ ಬಳಿಸಿ.
egg in microwave
ಮೊಟ್ಟೆ ಬೇಯಿಸಿದ ನೀರು ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನವೊಂದರಲ್ಲಿ ದೃಢಪಟ್ಟಿದೆ. ಈ ಅಧ್ಯಯನವನ್ನು ಹ್ಯಾಮಿಲ್ಟನ್‌ನ ಮಾಸ್ಟರ್ಸ್ ಗಾರ್ಡನರ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮೊಟ್ಟೆಯನ್ನು ಕುದಿಸಿದ ನಂತರ ಮೊಟ್ಟೆಯ ಪೋಷಕಾಂಶಗಳು ನೀರಿಗೆ ಬರುತ್ತವೆ ಎಂದು ಹೇಳಲಾಗಿದೆ. ಅದನ್ನು ಗಿಡಕ್ಕೆ ಹಾಕುವುದರಿಂದ ಪ್ರಯೋಜನ ಪಡೆಯುತ್ತಾರೆ.
ಸೂರ್ಯನ ಬೆಳಕಿನ ಕೊರತೆಯಿಂದ ಹಾಳಾಗುವ ಸಸ್ಯಗಳು ಮೊಟ್ಟೆಯ ಕುದಿಸಿದ ನೀರನ್ನು ಅವುಗಳಲ್ಲಿ ಸುರಿಯುವುದರಿಂದ ಜೀವ ಪಡೆಯುತ್ತವೆ. ಇದು ಟೊಮೆಟೊ ಮತ್ತು ಮೆಣಸಿನಕಾಯಿ ಸಸ್ಯಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಅದೇ ಸಮಯದಲ್ಲಿ ಮೊಟ್ಟೆಯ ಸಿಪ್ಪೆ ಚರ್ಮಕ್ಕೆ ಪ್ರಯೋಜನಕಾರಿ. ಇದರಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮೊಟ್ಟೆಯ ಚಿಪ್ಪನ್ನು ಪುಡಿಮಾಡಿ ಮತ್ತು ಜೇನುತುಪ್ಪದೊಂದಿಗೆ ಮುಖಕ್ಕೆ ಹಚ್ಚುವುದರಿಂದ ಹೊಳೆಯುವ ಚರ್ಮವನ್ನು ನೀಡುತ್ತದೆ. ಇದು ಮೊಡವೆಗಳು, ಟ್ಯಾನಿಂಗ್, ಕಲೆಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ.
ಇದಲ್ಲದೆ, ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ವಿನೆಗರ್ ಅಥವಾ ನಿಂಬೆ ರಸದ ಜೊತೆ ಸಹ ಅಪ್ಲೇ ಮಾಡಬಹುದು. ಇದು ಮುಖದಲ್ಲಿರುವ ಹಳೆಯ ಕಲೆಗಳನ್ನೂ ನಿವಾರಿಸುತ್ತದೆ. ಮೊಟ್ಟೆ ಕೇವಲ ಆರೋಗ್ಯ, ಸೌಂದರ್ಯ ನೀಡುವುದಷ್ಟೇ ಅಲ್ಲ, ಗಿಡಗಳಿಗೂ ಜೀವ ತುಂಬುವ ಕೆಲಸ ಮಾಡುತ್ತದೆ.