ತೂಕ ಇಳಿಕೆಯಿಂದ, ಮೂಳೆಗಳನ್ನು ಬಲಪಡಿಸುವವರೆಗೂ ಕಪ್ಪು ಉಪ್ಪು ಪರಿಣಾಮಕಾರಿ
ಬಿಳಿ ಉಪ್ಪನ್ನು ಎಲ್ಲರೂ ಬಳಸುತ್ತಾರೆ. ಬಿಳಿ ಉಪ್ಪಿನ ಲಾಭ ನಷ್ಟಗಳ ಬಗ್ಗೆ ತಿಳಿದಿರಬಹುದು, ಆದರೆ ಇಂದು ಕಪ್ಪು ಉಪ್ಪಿನ ಪ್ರಯೋಜನಗಳನ್ನು ತಿಳಿಯೋಣ. ಕಪ್ಪು ಉಪ್ಪು ಅನೇಕ ಗಂಭೀರ ಕಾಯಿಲೆಗಳಿಂದ ಮುಕ್ತಗೊಳಿಸುತ್ತದೆ. ಇದನ್ನು ಹಿಮಾಲಯನ್ ಉಪ್ಪು ಎಂದೂ ಕರೆಯುತ್ತಾರೆ. ಇದು ಮುಖ್ಯವಾಗಿ ಹಿಮಾಲಯದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಇತ್ಯಾದಿ ಸ್ಥಳಗಳ ಗಣಿಗಳಲ್ಲಿ ಕಂಡುಬರುತ್ತದೆ.