ಈರುಳ್ಳಿಗೂ (Onion) ಆಯುರ್ವೇದಕ್ಕೂ ಬಹಳ ಹಳೆಯ ಸಂಬಂಧವಿದೆ. ಇದು ಫೈಬರ್, ರಂಜಕ, ಪೊಟ್ಯಾಷಿಯಮ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ದೇಹವನ್ನು ಆರೋಗ್ಯಕರವಾಗಿಡಲು ಅವಶ್ಯಕ. ಮಲಗುವ ಮೊದಲು 1 ಈರುಳ್ಳಿಯನ್ನು ಸಾಕ್ಸ್ನಲ್ಲಿ ಹಾಕಿ ಕಾಲಿಗೆ ಧರಿಸೋದರಿಂದ ಎಷ್ಟು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?
ಏನು ಈರುಳ್ಳಿಯನ್ನು ಸಾಕ್ಸ್‌ಗೆ (socks) ಹಾಕಿ ಕಾಲಿಗೆ ಹಾಕೋದೆ? ಹೀಗೆಲ್ಲಾ ಮಾಡೋದ್ರಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನು ತಿಳಿಯಬೇಕೆ? ಹಾಗಿದ್ರೆ ನೀವು ಇದನ್ನ ಪೂರ್ತಿಯಾಗಿ ಓದಲೇಬೇಕು. ಯಾಕಂದ್ರೆ ಇದರಿಂದ ಸಮಸ್ಯೆಗಳು ದೂರವಾಗುತ್ತೆ.. ಏನೇನು ಆಗುತ್ತೆ ನೋಡೋಣ.
ಬ್ಯಾಕ್ಟೀರಿಯಾಗಳು ದೂರ ಉಳಿಯುತ್ತವೆ
ಈರುಳ್ಳಿ ಬ್ಯಾಕ್ಟೀರಿಯಾ ವಿರೋಧಿ(anti bacterial) ಮತ್ತು ವೈರಲ್ ವಿರೋಧಿ (anti viral) ಗುಣಗಳನ್ನು ಹೊಂದಿದೆ. ಸಾಕ್ಸ್‌ನಲ್ಲಿ ಈರುಳ್ಳಿ ಹಾಕಿ ಅದೇ ಸಾಕ್ಸ್ ಧರಿಸಿ ಮಲಗೋದ್ರಿಂದ, ಈರುಳ್ಳಿ ಪಾದಗಳ ಮೇಲೆ ಒತ್ತಡ ಏರುತ್ತೆ, ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.
ರಕ್ತವನ್ನು ಸ್ವಚ್ಛಗೊಳಿಸುತ್ತೆ
ಈರುಳ್ಳಿಯಲ್ಲಿ ಫಾಸ್ಪರಿಕ್ ಆಮ್ಲವಿದೆ. ಈ ಆಮ್ಲವು ಚರ್ಮದ ಮೂಲಕ ಹೀರಲ್ಪಟ್ಟಾಗ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಸಾಕ್ಸ್‌ನಲ್ಲಿ ಈರುಳ್ಳಿ ಹಾಕಿ ಮಲಗಿದ್ರೆ ರಕ್ತ ಶುದ್ದಿಯಾಗುತ್ತೆ (blood purify).
ಪಾದಗಳ ವಾಸನೆ
ಈರುಳ್ಳಿ ತುಂಡುಗಳನ್ನು ಕತ್ತರಿಸಿ ಅವುಗಳನ್ನು ಸಾಕ್ಸಿನಲ್ಲಿ ತುಂಬಿಸಿ ನಂತರ ಅವುಗಳನ್ನು ಧರಿಸಿ. ಇದನ್ನು ಮಾಡುವುದರಿಂದ ನೀವು ಸಾಕಷ್ಟು ಆರಾಮವನ್ನು ಪಡೆಯುತ್ತೀರಿ. ಇದರೊಂದಿಗೆ, ಪಾದಗಳ ವಾಸನೆ ಸಹ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತೆ.
ಹೃದಯ ಮತ್ತು ಹೊಟ್ಟೆಗೆ ಪ್ರಯೋಜನಕಾರಿ
ಮಲಗುವ ಮೊದಲು ಈರುಳ್ಳಿಯನ್ನು ಸಾಕ್ಸ್ನಲ್ಲಿ ಹಾಕಿ ಅದನ್ನ ಕಾಲಿಗೆ ಹಾಕಿ ಮಲಗೋದು ಹೊಟ್ಟೆ ಮತ್ತು ಹೃದಯಕ್ಕೆ (healthy heart) ತುಂಬಾ ಪ್ರಯೋಜನಕಾರಿ. ಇದನ್ನು ಬಳಸುವುದರಿಂದ ಹೃದಯಾಘಾತದಂತಹ (Heart Attack) ಸಮಸ್ಯೆಗಳನ್ನು ತೊಡೆದುಹಾಕಬಹುದು.
ಶೀತ (Cold) ಮತ್ತು ಕೆಮ್ಮಿನಿಂದ (Cough) ಪರಿಹಾರ
ಚಳಿಗಾಲದಲ್ಲಿ ನಿಮಗೆ ಶೀತ ಮತ್ತು ಕೆಮ್ಮಿನ ಸಮಸ್ಯೆ ಇದ್ದರೆ, ಈರುಳ್ಳಿಯನ್ನು ಸಾಕ್ಸ್ನಲ್ಲಿ ತುಂಬಿಸಿ ಅದನ್ನು ಧರಿಸಿ ಮಲಗಿ. ಇದು ಬೆಳಿಗ್ಗೆಯವರೆಗೆ ಶೀತ ಮತ್ತು ಕೆಮ್ಮಿನಿಂದ ನಿಮಗೆ ಸಾಕಷ್ಟು ಆರಾಮ ನೀಡುತ್ತದೆ.
ಗಾಳಿಯನ್ನು ಶುದ್ಧೀಕರಿಸುತ್ತೆ
ನೀವು ಸಾಕ್ಸ್ ನಲ್ಲಿ ಈರುಳ್ಳಿ ಹಾಕಿ ಮಲಗಿದರೆ, ಅದು ನಿಮ್ಮ ದೇಹ ಮತ್ತು ನಿಮ್ಮ ಸುತ್ತಲಿನ ಗಾಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ವಚ್ಛವಾಗಿರಿಸುತ್ತದೆ. ಇದರಿಂದ ರಾತ್ರಿ ವೇಳೆ ಶುದ್ಧ ಗಾಳಿ ಪಡೆಯಲು ಸಹಾಯವಾಗುತ್ತೆ.
ಸಾಕ್ಸ್ ನಲ್ಲಿ ಈರುಳ್ಳಿ ಹಾಕುವುದು ಹೇಗೆ?
ಈರುಳ್ಳಿಯನ್ನು ತುಂಡುಗಳಾಗಿ ಕತ್ತರಿಸಿ ಸಾಕ್ಸ್ ನಲ್ಲಿ ಹಾಕಿ, ಅದನ್ನು ಕಾಲಿಗೆ ಹಾಕಿ ಮಲಗಿ. ಇದಕ್ಕಾಗಿ, ನೀವು ಸಾವಯವ ಈರುಳ್ಳಿಯನ್ನು ಮಾತ್ರ ಬಳಸಬೇಕು. ಈರುಳ್ಳಿಯನ್ನು ಚಪ್ಪಟೆ ತುಂಡುಗಳಾಗಿ ಕತ್ತರಿಸಬೇಕು ಎಂಬುದನ್ನು ನೆನಪಿನಲ್ಲಿಡಿ.