ಡೇಟಿಗೂ ಮುನ್ನ ಡೆಲಿವರಿ ಆದ್ರೆ, ಹೀಗ್ ಮಾಡಿ ಅಂತಾರೆ ಸಂಶೋಧಕರು!

First Published | Nov 17, 2023, 4:20 PM IST

ಹೆರಿಗೆ ನಂತರ ನವಜಾತ ಶಿಶುವಿಗೆ ಸಂಬಂಧಿಸಿದ ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಇದರಿಂದ ಮಗು ಉಳಿಯುವ ಸಾಧ್ಯತೆ ಹೆಚ್ಚುತ್ತಂತೆ. ಹಾಗಿದ್ರೆ ಅವಧಿ ಪೂರ್ವ ಹೆರಿಗೆಯಾದಾಗ ಏನನ್ನು ಮಾಡಬೇಕು ಅನ್ನೋದನ್ನು ಸಂಶೋಧನೆ ಹೇಳುತ್ತೆ ನೋಡೋಣ…. 
 

ಇತ್ತೀಚಿಗೆ ಅವಧಿಗೆ ಪೂರ್ವ ಮಗು (premature delivery) ಜನನವಾಗೋದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಹೆಚ್ಚಿನವು ಇವೆ. ನಮ್ಮ ಜೀವನ ಶೈಲಿ ಒಂದು ಹಂತದಲ್ಲಿ ಕಾರಣವಾದರೆ, ಮತ್ತೊಂದು ತಾಯಿಯ ಸರಿಯಾದ ಆರೈಕೆ ಇಲ್ಲದ ಕಾರಣ ಅಥವಾ ಆರೋಗ್ಯಪರಿಸ್ಥಿತಿಯಿಂದಾಗಿ ಅವಧಿ ಪೂರ್ವ ಹೆರಿಗೆಯಾಗುತ್ತದೆ. 
 

ಅವಧಿ ಪೂರ್ವ ಹೆರಿಗೆಯಾಗೋದರ ಭಯ ಎಂದರೆ ಮಗು ಉಳಿಯುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ಯಾಕಂದ್ರೆ ಮಗುವಿನ ಬೆಳವಣಿಗೆ ಚೆನ್ನಾಗಿ ಆಗಿರದೇ ಇದ್ದರೆ, ಇದರಿಂದ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಆದರೆ ನಿಮಗೆ ಗೊತ್ತಾ? ಹೊಕ್ಕುಳ ಬಳ್ಳಿಯನ್ನು (umbilical cord) ತಡವಾಗಿ ಕತ್ತರಿಸೋದರಿಂದ ಮಗು ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತಂತೆ. 

Tap to resize

ಸಾಮಾನ್ಯವಾಗಿ ಮಗು ಜನಿಸಿದ ಕೂಡಲೇ ಹೊಕ್ಕುಳ ಬಳ್ಳಿಯನ್ನು ಕತ್ತರಿಸುವುದನ್ನು ನಾವು ನೋಡುತ್ತೇವೆ. ಆದರೆ ಅವಧಿಗೂ ಮುನ್ನ ಜನಿಸಿದ ಮಕ್ಕಳ ಹೊಕ್ಕುಳ ಬಳ್ಳಿಯನ್ನು ಎರಡು ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರ ಕತ್ತರಿಸಿದರೆ, ಅವರ ಸಾವಿನ ಅಪಾಯವು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ.

ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಎರಡು ಇತ್ತೀಚಿನ ಅಧ್ಯಯನಗಳಲ್ಲಿ, 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಶೋಧಕರು 9,000 ಅವಧಿ ಪೂರ್ವ ಜನಿಸಿದ ಮಕ್ಕಳ ಕ್ಲಿನಿಕಲ್ ಪರೀಕ್ಷಾ ಡೇಟಾವನ್ನು (clinical test data) ಪರೀಕ್ಷಿಸುವ ಮೂಲಕ ಇದನ್ನು ತೀರ್ಮಾನಿಸಿದ್ದಾರೆ. 
 

ಮಗು ಹುಟ್ಟಿದ ನಂತರ ತಡವಾಗಿ ಹೊಕ್ಕುಳ ಬಳ್ಳಿ ಕತ್ತರಿಸುವುದು ಮಗುವಿನ ದೇಹದಲ್ಲಿ ರಕ್ತ ಪರಿಚಲನೆಯನ್ನು (blood circulation) ಹೆಚ್ಚಿಸುತ್ತದೆ ಮತ್ತು ಮಗುವಿನ ಶ್ವಾಸಕೋಶವನ್ನು (Lungs) ಗಾಳಿಯಿಂದ ತುಂಬುತ್ತದೆ ಎಂದು ಅಧ್ಯಯನ ಕಂಡು ಹಿಡಿದಿದೆ. ಇದು ನವಜಾತ ಶಿಶುವಿನಲ್ಲಿ (Infants) ಉಸಿರಾಟದ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ.
 

ಪ್ರತಿ ವರ್ಷ, ಜಗತ್ತಿನಲ್ಲಿ 13 ಮಿಲಿಯನ್ ಶಿಶುಗಳು ಅಕಾಲಿಕವಾಗಿ ಜನಿಸುತ್ತವೆ, ಮತ್ತು ದುರದೃಷ್ಟವಶಾತ್ ಅವುಗಳಲ್ಲಿ ಒಂದು ಮಿಲಿಯನ್ ಶಿಶುಗಳು ಹುಟ್ಟಿದ ಸ್ವಲ್ಪ ಸಮಯದಲ್ಲೇ ಸಾಯುತ್ತವೆ" ಎಂದು ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಎನ್ಎಚ್ಎಂಆರ್ಸಿ ಕ್ಲಿನಿಕಲ್ ಟ್ರಯಲ್ ಸೆಂಟರ್ನ ವೈದ್ಯರು ತಿಳಿಸಿದ್ದರು..

ಹೊಕ್ಕುಳ ಬಳ್ಳಿಯನ್ನು ತಡವಾಗಿ ಕತ್ತರಿಸಿದರೆ, ಅವುಗಳ ಸಾವಿನ ಅಪಾಯವು ತುಲನಾತ್ಮಕವಾಗಿ ಕಡಿಮೆಯಾಗುತ್ತದೆ ಎಂದು ಡಾ. ಅನ್ನಾ ಹೇಳಿದರು. ಅಕಾಲಿಕ ಮಗುವಿನ (newborn baby) ಹೊಕ್ಕುಳ ಬಳ್ಳಿಯನ್ನು ಜನನದ ಎರಡು ನಿಮಿಷದ ನಂತರ ಕತ್ತರಿಸಿದರೆ, ಇದರಿಂದ ಮಗು ಸಾವನ್ನಪ್ಪುವ ಸಾಧ್ಯತೆ ತುಂಬಾನೆ ಕಡಿಮೆ ಇರುತ್ತೆ ಎಂದು ತಿಳಿದು ಬಂದಿದೆ. 

Latest Videos

click me!