Health Tips: ದಾಳಿಂಬೆ ಸಿಪ್ಪೆಯಲ್ಲಿ ಅಡಗಿದೆ ನೀವರಿಯದ ಅದ್ಭುತ ಪ್ರಯೋಜನ

Suvarna News   | Asianet News
Published : Jul 06, 2021, 04:44 PM IST

ದಾಳಿಂಬೆ ಎಲ್ಲರಿಗೂ ಇಷ್ಟವಾಗುವ ಹಣ್ಣು. ಹಣ್ಣು ಬಿಡಿಸುವುದು ಕೊಂಚ ತಡವಾದರೂ, ಸ್ವಲ್ಪ ರಗಳೆಯಾದರೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಉತ್ತಮ ಹಣ್ಣು. ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ವೈದ್ಯರು ಈ ಹಣ್ಣನ್ನು ಹೆಚ್ಚು ತಿನ್ನಲು ಹೇಳುತ್ತಾರೆ. ಆದರೆ ಅದೆಷ್ಟೋ ಜನರಿಗೆ ಗೊತ್ತಿಲ್ಲ ದಾಳಿಂಬೆ ಹಣ್ಣಿನ ಜೊತೆಗೆ ಅದರ ಸಿಪ್ಪೆಯಿಂದಲೂ ಹೆಚ್ಚು ಪ್ರಯೋಜನಗಳಿವೆ ಎಂದು. ಸಾಮಾನ್ಯವಾಗಿ ದಾಳಿಂಬೆ ಹಣ್ಣನ್ನು ತಿಂದು ಅದರ ಸಿಪ್ಪೆ ಕಸದ ತೊಟ್ಟಿಗೆ ಹಾಕುತ್ತಾರೆ. ಆದರೆ ಎಸೆಯುವ ಮುನ್ನಾ ಅದರಲ್ಲಿರುವ ಪ್ರಯೋಜಕಾರಿ ಅಂಶಗಳನ್ನು ತಿಳಿದುಕೊಳ್ಳಬೇಕು.

PREV
19
Health Tips: ದಾಳಿಂಬೆ ಸಿಪ್ಪೆಯಲ್ಲಿ ಅಡಗಿದೆ ನೀವರಿಯದ ಅದ್ಭುತ ಪ್ರಯೋಜನ

ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ: ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಧ್ಯಯನದ ಪ್ರಕಾರ, ದಾಳಿಂಬೆ ಸಿಪ್ಪೆಯಲ್ಲಿರುವ ಮೆಥನಾಲ್ ಸಾರವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

29

ಬಾಯಿಯಲ್ಲಿ ಹರಡುವ ರೋಗಾಣು ವಿರುದ್ಧ ಹೋರಾಟ: ದಾಳಿಂಬೆ ಸಿಪ್ಪೆಗಳಲ್ಲಿ ಪಾಲಿಫೆನಾಲಿಕ್ ಫ್ಲೇವನಾಯ್ಡ್ಗಳಿವೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುತ್ತದೆ. ಬಾಯಿಯಲ್ಲಿ ಹರಡುವ ರೋಗಾಣುಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. 

39

ಕೆಟ್ಟ ಉಸಿರಾಟದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ದಾಳಿಂಬೆ ಸಿಪ್ಪೆಯನ್ನು ಬಾಯಿ ಫ್ರೆಶರ್ನಂತೆ ಬಳಸಬಹುದು. ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ. ಒಂದು ಚಮಚ ದಾಳಿಂಬೆ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಕುಡಿಯಿರಿ.

49

ಮುಟ್ಟಿನ ನೋವು ನಿವಾರಣೆ: ಇತ್ತೀಚೆಗೆ ಬಹಳಷ್ಟು ಹೆಣ್ಣು ಮಕ್ಕಳು ಅನಿಯಮಿತ ಮುಟ್ಟಿನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದಾರೆ. ಮುಟ್ಟಾದಾಗ ವಿಪರೀತ ಹೊಟ್ಟೆ ನೋವಾಗುವುದು. ಆ ನೋವಿಗೆ ದಾಳಿಂಬೆ ಸಿಪ್ಪೆ ಮದ್ದಾಗಿದೆ.

59

ಒಂದು ಲೋಟದ ನೀರಿಗೆ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಹಾಕಿ, ಬೆರೆಸಿ ಕುಡಿಯಬೇಕು. ಇದರಿಂದ ಹೊಟ್ಟೆ ನೋವು ಕಡಿಮೆಯಾಗುವ ಜೊತೆಗೆ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೂ ನಿಯಂತ್ರಣಕ್ಕೆ ತರುವುದು.

69

ಮುಖದ ಸುಕ್ಕು: ಮುಖದಲ್ಲಿ ಸುಕ್ಕು, ನೆರಿಗೆಯಿಂದ ವಯಸ್ಸಾದಂತೆ ಕಾಣುತ್ತಾರೆ. ಹಾಗಾಗಿ ಮುಖದ ಮೇಲಿರುವ ಸುಕ್ಕನ್ನು ಕಡಿಮೆ ಮಾಡಲು ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. 

79

ದಾಳಿಂಬೆ ಸಿಪ್ಪೆಯ ಪುಡಿಯನ್ನು ರೋಸ್ ವಾಟರ್ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ರೆಡಿಯಾದ ಪೇಸ್ಟ್ನ ಮುಖಕ್ಕೆ ಹಚ್ಚಿ.  ಪೇಸ್ಟ್ ಒಣಗಿದ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

89

ಸನ್ ಟ್ಯಾನ್ ಗೆ ಪರಿಹಾರ: ಬಿಸಿಲಿಗೆ ಹೋದರೆ ಟ್ಯಾನ್ ಆಗುವುದು ಸಹಜ. ಟ್ಯಾನ್ ಆದರೆ ಸೌಂದರ್ಯ ಕಡಿಮೆಯಾಗುವುದು ನಿಜ. ಟ್ಯಾನ್ ಆಯ್ತು ಅಂತ ಭಯಪಡುವ ಅಗತ್ಯವಿಲ್ಲ. ಇದಕ್ಕೆ ಪರಿಹಾರ ಮನೆಯಲ್ಲೆ ಇದೆ. 

99

ದಾಳಿಂಬೆ ಸಿಪ್ಪೆಯನ್ನು ಸನ್ ಸ್ಕ್ರೀನ್ನಂತೆ ಬಳಸಬಹುದು. ಒಣ ಸಿಪ್ಪೆಯನ್ನು ಪುಡಿ ಮಾಡಿ ಎಣ್ಣೆಯೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಬೇಕು. ಇದರಿಂದ ಟ್ಯಾನ್ ಕಡಿಮೆಯಾಗುತ್ತದೆ.

click me!

Recommended Stories