ನಿದ್ರೆಗೂ ಬೆಸ್ಟ್, ಮೂತ್ರದ ಸೋಂಕಿಗೂ ಔಷಧಿ ಈ ಜಾಯಿಕಾಯಿ

First Published Apr 6, 2021, 4:11 PM IST

ಭಾರತೀಯ ಔಷಧಿಗಳ ಬಳಕೆಯ ವಿಧಾನವು ಇಂದು ಪ್ರಪಂಚದಾದ್ಯಂತ ತಿಳಿದಿದೆ. ಆಯುರ್ವೇದವು ಪ್ರಪಂಚದಾದ್ಯಂತ ಹಲವು ರೋಗಗಳನ್ನು ಯಶಸ್ವಿಯಾಗಿ ಗುಣಪಡಿಸಿದೆ,   ಆಯುರ್ವೇದದ ಪ್ರಕಾರ, ಪ್ರತಿ ಔಷಧಿಯು ತನ್ನದೇ ಆದ ಮೌಲ್ಯವನ್ನು ಹೊಂದಿದೆ ಮತ್ತು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜಾಯಿಕಾಯಿ ಭಾರತ ಸೇರಿ ವಿಶ್ವದ ಪೂರ್ವ ಭಾಗದಲ್ಲಿ ಕಂಡುಬರುವ ಒಂದು ಮರ. ಆಯುರ್ವೇದದಲ್ಲಿನ ಜಾಯಿಕಾಯಿ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ

ಮೊಡವೆ ತೆಗೆದುಹಾಕುತ್ತದೆಚರ್ಮದ ಆರೈಕೆಯಲ್ಲಿ ಜಾಯಿಕಾಯಿ ಖಂಡಿತವಾಗಿಯೂ ಸೌಂದರ್ಯ ದಿನಚರಿಯ ಒಂದು ಭಾಗವಾಗಿರಬೇಕು. ಹೌದು, ಸ್ವಲ್ಪ ಹಾಲಿನಲ್ಲಿ ಜಾಯಿಕಾಯಿ ರುಬ್ಬಿ ಮುಖಕ್ಕೆ ಪೇಸ್ಟ್ ಆಗಿ ಹಚ್ಚುವುದರಿಂದ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ.
undefined
ಮೊಡವೆ ಸಮಸ್ಯೆಯಿಂದ ದೀರ್ಘಕಾಲ ತೊಂದರೆಗೀಡಾಗಿದ್ದರೆ, ಇಂದು ಈ ಆಯುರ್ವೇದ ವಿಧಾನವನ್ನು ಪ್ರಯತ್ನಿಸಿ. ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುತ್ತದೆ.
undefined
ಉತ್ತಮ ನಿದ್ರೆ ಬರುತ್ತದೆರಾತ್ರಿಯಲ್ಲಿ ಎಚ್ಚರಗೊಳ್ಳುವ ಅಭ್ಯಾಸವಿದ್ದರೆ, ಮುಂದಿನ ಬಾರಿ ಮಲಗುವ ಮೊದಲುಹಾಲಿನೊಂದಿಗೆ ಬೆರೆಸಿದ ಜಾಯಿಕಾಯಿ ಪುಡಿಯನ್ನು ಕುಡಿಯಿರಿ. ಇದನ್ನು ಮಾಡುವುದರಿಂದ ಉತ್ತಮ ನಿದ್ರೆ ಬರುತ್ತದೆ.
undefined
ಜಾಯಿಕಾಯಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕುಡಿದು ನೋಡಿ
undefined
ಮಗುವಿಗೆ ಹಾಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಜಾಯಿಕಾಯಿ ಸೇರಿಸಿಎದೆ ಹಾಲು ಕುಡಿಯುವ ಮಗು ಇದ್ದರೆ ಅಥವಾ ಬಾಟಲ್ ಹಾಲು ಕುಡಿಯುತ್ತಿದ್ದರೆ ಆಗ ಅವರು ಹಾಲನ್ನು ಜೀರ್ಣಿಸಿಕೊಳ್ಳಲು ಅನೇಕ ಬಾರಿ ತೊಂದರೆ ಅನುಭವಿಸಬಹುದು. ಈ ಸಂದರ್ಭದಲ್ಲಿ ಜಾಯಿಕಾಯಿ ಸಹಾಯ ಮಾಡುತ್ತದೆ.
undefined
ಅರ್ಧ ಭಾಗ ನೀರು ಮತ್ತು ಅರ್ಧ ಜಾಯಿಕಾಯಿ ಪುಡಿ ಹಾಲಿನಲ್ಲಿ ಕುದಿಸಿ ಅದನ್ನು ಫಿಲ್ಟರ್ ಮಾಡಿ ಮತ್ತು ಮಗುವಿಗೆ ಕುಡಿಯಲು ನೀಡಿ. ಇದನ್ನು ಮಾಡುವುದರಿಂದ ಮಗು ಹಾಲು ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
undefined
ಯುಟಿಐ ಸಮಸ್ಯೆಗೆ ಜಾಯಿಕಾಯಿ ಪ್ರಯೋಜನಕಾರಿಮೂತ್ರದಲ್ಲಿ ಸುಡುವ ಸಂವೇದನೆ, ಉರಿ ಮೂತ್ರ , ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ ಅಥವಾ ಯಾವುದೇ ರೀತಿಯ ಮೂತ್ರದ ಸೋಂಕಿನಿಂದ ಬಳಲುತ್ತಿದ್ದರೆ, ಜಾಯಿಕಾಯಿ ಸೇವನೆನಿಜವಾಗಿಯೂ ಪ್ರಯೋಜನಕಾರಿ.
undefined
ತಣ್ಣಗಿನ ಹಾಲು ಅಥವಾ ನೀರಿಗೆ ಜಾಯಿಕಾಯಿ ಪುಡಿಯನ್ನು ಸೇರಿಸುವ ಮೂಲಕ ಸುಲಭವಾಗಿ ಸೋಂಕನ್ನು ನಿವಾರಿಸಬಹುದು.
undefined
ಜಾಯಿಕಾಯಿ ಸ್ನಾಯು ನೋವನ್ನು ನಿವಾರಿಸುತ್ತದೆಜಾಯಿಕಾಯಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಅದು ಕೀಲು ಮತ್ತು ಸ್ನಾಯು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
ಸಂಧಿವಾತ ಮತ್ತು ಸ್ನಾಯುವಿನ ಗಾಯದಿಂದ ಬಳಲುತ್ತಿರುವ ಜನರಿಗೆ ಜಾಯಿಕಾಯಿತುಂಬಾ ಪ್ರಯೋಜನಕಾರಿ.
undefined
click me!