ಹುಣಸೆ ಮಾತ್ರವಲ್ಲ, ಅದರ ಬೀಜ, ಸೊಪ್ಪಲ್ಲೂ ಇವೆ ನೂರಾರು ಪ್ರಯೋಜನ!

Suvarna News   | Asianet News
Published : Apr 05, 2021, 06:19 PM IST

ಹುಣಸೆ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಶಾಲಾ ದಿನಗಳಲ್ಲಿ ಬಾಲ್ಯದಲ್ಲಿ ಹೆಚ್ಚಿನವರ ಆಯ್ಕೆ ಇದಾಗಿರುತ್ತಿತ್ತು. ಮನೆಯವರ ಕಣ್ಣು ತಪ್ಪಿಸಿ, ಅದೆಷ್ಟು ಬಾರಿ ಕದ್ದು ತಿಂದಿದೆಯೋ ಕಾಣೆ, ಆದರೆ ಹುಣಸೆಹಣ್ಣು ತಿನ್ನುವುದನ್ನು ತಡೆಯುವುದು ಅಷ್ಟು ಸುಲಭವಲ್ಲ. ಚಟ್ನಿ ಅಥವಾ ರಸಂ ಅಥವಾ ಸಾಂಬಾರ್ ಇರಲಿ, ವಿವಿಧ ಬಗೆಯ ಖಾದ್ಯಗಳಲ್ಲಿ ಇದು ವಿಶೇಷ ಪಾತ್ರ ವಹಿಸುತ್ತದೆ. ಆದರೆ ರುಚಿ ಮಾತ್ರವಲ್ಲ, ಆರೋಗ್ಯ ರಕ್ಷಣೆಯಲ್ಲೂ ಹುಣಸೆ ಹಣ್ಣು ವಿಶೇಷ ಪಾತ್ರ ವಹಿಸುತ್ತದೆ ಎಂಬುದು ಗೊತ್ತೇ?

PREV
19
ಹುಣಸೆ ಮಾತ್ರವಲ್ಲ, ಅದರ ಬೀಜ, ಸೊಪ್ಪಲ್ಲೂ ಇವೆ ನೂರಾರು ಪ್ರಯೋಜನ!

ಆರೋಗ್ಯಕ್ಕೆ ಉತ್ತಮವಾಗಿರುವುದು ಹುಣಸೆ ಹಣ್ಣು ಮಾತ್ರವಲ್ಲ ಬೀಜ, ಹೂವು, ಎಲೆಗಳೂ ಸಹ ತುಂಬಾ ಪ್ರಯೋಜನಕಾರಿ. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್-ಎ, ಫಾಸ್ಪರಸ್, ಪೊಟಾಷಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ.

29

ತೂಕ ಇಳಿಕೆ
ತೂಕ ಇಳಿಕೆಗೆ ಹುಣಸೆ ಹಣ್ಣು ಸೇವನೆಯೂ ಸಹಕಾರಿ. ಹುಣಸೆ ಹಣ್ಣಿನಲ್ಲಿ ಹೈಡ್ರಾಕ್ಸಿಲ್ ಆಮ್ಲವಿದ್ದು, ಇದು ದೇಹದ ಹೆಚ್ಚುವರಿ ಕೊಬ್ಬನ್ನು ದಹಿಸುವ ಮೂಲಕ ಕಿಣ್ವವನ್ನು ಹೆಚ್ಚಿಸುತ್ತದೆ, ಇದು ತೂಕವನ್ನು ಕಡಿಮೆ ಮಾಡುತ್ತದೆ. 

39

ರಕ್ತಹೀನತೆಯನ್ನು ನಿವಾರಿಸುತ್ತದೆ
ರಕ್ತಹೀನತೆಯನ್ನು ಎದುರಿಸಲು ಹುಣಸೆಹಣ್ಣು ಸೇವಿಸಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವಿದ್ದು, ಇದು ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುವ ಮೂಲಕ ರಕ್ತ ವನ್ನು ಕಳೆದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

49

ಸೈನಸ್ ಕಡಿಮೆ ಮಾಡಲು ಸಹಾಯಕಾರಿ
ಹುಣಸೆ ಎಲೆಯ ರಸವನ್ನು ಸೈನಸ್ ನ ಆರಂಭಿಕ ಹಂತದಲ್ಲಿಯೇ ಸೇವಿಸಿದರೆ, ಇದು ಸೈನಸ್ ನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

59

ಟಾನ್ಸಿಲ್ ಗಳನ್ನು ನಿವಾರಿಸುತ್ತದೆ
ಟಾನ್ಸಿಲ್ ಗಳ ಸಮಸ್ಯೆಯನ್ನು ಕಡಿಮೆ ಮಾಡಲು ಹುಣಸೆ ನೀರು ಗಾರ್ಗಲ್ ಮಾಡಬಹುದು. ಹುಣಸೆ ಹಣ್ಣು ಗಂಟಲಿನ ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿದ್ದು ಟಾನ್ಸಿಲ್ ಗಳನ್ನು ಗುಣಪಡಿಸಲು ನೆರವಾಗುತ್ತದೆ.

69

ಕಾಮಾಲೆ ನಿವಾರಣೆಗೆ ಸಹಾಯ ಮಾಡುತ್ತದೆ
ಕಾಮಾಲೆ ರೋಗ ನಿವಾರಣೆಗೆ ಹುಣಸೆ ಹಣ್ಣಿನ ನೀರನ್ನು ಸೇವಿಸಬಹುದು. ಇದು ಯಕೃತ್ನ ಜೀವಕೋಶಗಳನ್ನು ಸರಿಯಾಗಿ ಇಡುವ ಗುಣ ಹೊಂದಿದ್ದು ಕಾಮಾಲೆ ರೋಗವನ್ನು ಗುಣಪಡಿಸಲು ನೆರವಾಗುತ್ತದೆ.

79

ಹುಣಿಸೇಹಣ್ಣಿನಿಂದ ಜೀರ್ಣಕಾರಿ ಪ್ರಕ್ರಿಯೆ
ಹುಣಿಸೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಜೊತೆಗೆ ಇದನ್ನು ತಿನ್ನುವುದರಿಂದ ಮಲಬದ್ಧತೆ, ಆಮ್ಲೀಯತೆ, ಗ್ಯಾಸ್  ಅಥವಾ ಅಲ್ಸರ್ಗಳಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

89

ಪೈಲ್ಸ್ ಸಮಸ್ಯೆ ನಿವಾರಣೆ
ಹುಣಸೆ ಹೂಗಳು ಮೂಲವ್ಯಾಧಿ ಸಮಸ್ಯೆಯಿಂದ ಹೊರಬರಲು ನೆರವಾಗುತ್ತವೆ. ಇದಕ್ಕಾಗಿ 5-10 ಎಂಎಲ್ ಹುಣಸೆ ಹಣ್ಣಿನ ರಸ ದಿನಕ್ಕೆ ಎರಡು-ಮೂರು ಬಾರಿ ಕುಡಿಯಬಹುದು.

99

ಹೊಟ್ಟೆಯ ತೊಂದರೆಗಳನ್ನು ಕಡಿಮೆ ಮಾಡುವುದು
ಮೃದುವಾದ ಹುಣಸೆ ಎಲೆ ಮತ್ತು ಹೂವನ್ನು ಆಹಾರದೊಂದಿಗೆ ಸೇವಿಸಿದರೆ ಹೊಟ್ಟೆಯ ಕಿರಿಕಿರಿ ಮತ್ತು ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ.  

click me!

Recommended Stories