ನುಗ್ಗೆ ಸೊಪ್ಪು ಅಂತಿಂಥ ಸೊಪ್ಪಲ್ಲ… ಇದರ ಜ್ಯೂಸ್ ಮಾಡಿ ಕುಡಿದ್ರೆ ಆರೋಗ್ಯ ಕೆಡೋದೇ ಇಲ್ಲ

First Published | Jun 30, 2024, 4:55 PM IST

ನುಗ್ಗೆ ಮತ್ತು ನೆಲ್ಲಿಕಾಯಿ ಇವೆರಡು ಆಯುರ್ವೇದದಲ್ಲಿ ಬಹಳ ಮಹತ್ವ ಪಡೆದಿದೆ. ಎರಡೂ ಸಹ ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತೆ. ಪಿತ್ತಜನಕಾಂಗದ ಕಾರ್ಯವನ್ನು ಸುಧಾರಿಸುವ ಮೂಲಕ, ಜೀವಾಣುಗಳನ್ನು ದೇಹದಿಂದ ಹೊರ ಹಾಕಲು, ಆರೋಗ್ಯ ಉತ್ತಮವಾಗಿರಲು ಇದು ಸಹಾಯ ಮಾಡುತ್ತೆ. 
 

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ದೇಹವನ್ನು ನಿರ್ವಿಷಗೊಳಿಸುವುದು (body detox) ತುಂಬಾನೆ ಮುಖ್ಯ. ದೇಹವನ್ನು ನಿರ್ವಿಷಗೊಳಿಸಲು, ಬಿಸಿ ನೀರು, ಜೀರಿಗೆ ನೀರು, ಜೇನುತುಪ್ಪ, ನಿಂಬೆ ರಸ ಮತ್ತು ಅನೇಕ ಪಾನೀಯಗಳಿವೆ. ಇದಲ್ಲದೇ ನೀವು ನುಗ್ಗೆ ಸೊಪ್ಪು ಮತ್ತು ನೆಲ್ಲಿಕಾಯಿ ರಸ ಬೆರೆಸಿ ಕುಡಿಯೋದ್ರಿಂದ ಕೂಡ ದೇಹವನ್ನು ಡಿಟಾಕ್ಸ್ ಮಾಡಬಹುದು. 
 

ನುಗ್ಗೆ ಸೊಪ್ಪು ನಿಮಗೆ ಹೇಗೆ ಪ್ರಯೋಜನ ನೀಡುತ್ತೆ? 
ಪವಾಡ ಸದೃಶ ಮರ ಎಂದೇ ಕರೆಯಲ್ಪಡುವ ನುಗ್ಗೆ ಸೊಪ್ಪು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಮರದ ಪ್ರತಿಯೊಂದು ಭಾಗವೂ, ಅದರ ಎಲೆಗಳಿಂದ ಅದರ ಕಾಯಿಗಳವರೆಗೆ, ಆರೋಗ್ಯಕ್ಕೆ ತುಂಬಾನೆ ಉತ್ತಮ. ನುಗ್ಗೆ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಇ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಅವು ಕ್ವೆರ್ಸೆಟಿನ್ ಮತ್ತು ಕ್ಲೋರೊಜೆನಿಕ್ ಆಮ್ಲದಂತಹ ಶಕ್ತಿಯುತ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ, ಇದು ಜೀವಕೋಶಗಳಿಗೆ ಹಾನಿಯಾಗೋದನ್ನು ತಡೆಯುತ್ತೆ. 

Tap to resize

ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ಕ್ಲೋರೊಫಿಲ್ ಇದ್ದು, ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಕ್ಲೋರೊಫಿಲ್ ರಕ್ತದಿಂದ ವಿಷಯುಕ್ತ ಪದಾರ್ಥಗಳನ್ನು ಹೊರ ತೆಗೆಯುವ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತದೆ. ಅಷ್ಟೇ ಅಲ್ಲ ಇದು ಲಿವರ್ ಆರೋಗ್ಯಯುತವಾಗಿರಲು, ನಿರ್ವಿಷಗೊಳಿಸುವ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. 

ಅಷ್ಟೇ ಅಲ್ಲ ನುಗ್ಗೆ ಸೊಪ್ಪು ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ, ಇದು ನಿರ್ವಿಷೀಕರಣದ ಪ್ರಮುಖ ಭಾಗವ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು (digestion system) ದೇಹದಿಂದ ವಿಷವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತದೆ. ನುಗ್ಗೆಕಾಯಿಯಲ್ಲಿರುವ ಫೈಬರ್ ನಿಯಮಿತ ಕರುಳಿನ ಚಲನೆಗೆ ಸಹಾಯ ಮಾಡಿ, ಹೊಟ್ಟೆಯನ್ನು ಶುದ್ಧೀಕರಿಸುತ್ತದೆ.
 

ನೆಲ್ಲಿಕಾಯಿ ಪ್ರಯೋಜನಗಳನ್ನು ತಿಳಿಯೋಣ
ನೆಲ್ಲಿಕಾಯಿ ಪೋಷಕಾಂಶಗಳ ಭಂಡಾರ. ಇದು ವಿಟಮಿನ್ ಸಿ (Vitamin C)ಯ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ, ಉತ್ಕರ್ಷಣ ನಿರೋಧಕವೂ ಆಗಿದೆ. ವಿಟಮಿನ್ ಸಿ ದೇಹದಲ್ಲಿನ ಹಾನಿಕಾರಕ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸುತ್ತದೆ. ನೆಲ್ಲಿಕಾಯಿಯಲ್ಲಿ ಫ್ಲೇವನಾಯ್ಡ್ಸ್ ಮತ್ತು ಟ್ಯಾನಿನ್ಸ್ ಸೇರಿದಂತೆ ಅನೇಕ ಇತರ ಉತ್ಕರ್ಷಣ ನಿರೋಧಕಗಳಿವೆ, ಇದು ದೇಹದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.

ಆಮ್ಲಾ ವಿಶೇಷವಾಗಿ ಯಕೃತ್ತಿನ ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿ. ಯಕೃತ್ತು ರಕ್ತದಿಂದ ಕೆಟ್ಟ ವಸ್ತುಗಳನ್ನು ತೆಗೆದು ಹಾಕುವ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತೆ. ಇದರಿಂದ ಆರೋಗ್ಯ ಉತ್ತಮವಾಗಿರುತ್ತೆ. ಈವಾಗ ನುಗ್ಗೆ ಸೊಪ್ಪು ಮತ್ತು ನೆಲ್ಲಿಕಾಯಿ ರಸದಿಂದ ದೇಹವನ್ನು ಹೇಗೆ ನಿರ್ವಿಷಗೊಳಿಸೋದು ನೋಡೋಣ. 
 

ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತೆ
ನುಗ್ಗೆ ಮತ್ತು ನೆಲ್ಲಿಕಾಯಿ ಎರಡೂ ಪಿತ್ತಜನಕಾಂಗವನ್ನು (liver) ಆರೋಗ್ಯಕರವಾಗಿಡಲು ಸಹಾಯ ಮಾಡುತ್ತೆ. ಪಿತ್ತಜನಕಾಂಗದ ಕಾರ್ಯವನ್ನು ಸುಧಾರಿಸುವ ಮೂಲಕ, ದೇಹವನ್ನು ನಿರ್ವಿಷಗೊಳಿಸುತ್ತೆ. 

ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ
ನುಗ್ಗೆ ಸೊಪ್ಪು ಮತ್ತು ನೆಲ್ಲಿಕಾಯಿಯಲ್ಲಿರುವ ಫೈಬರ್ ಮತ್ತು ಜೀರ್ಣಕಾರಿ ಪ್ರಯೋಜನಗಳು ಆರೋಗ್ಯಕರ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ದೇಹದಿಂದ ಕೆಟ್ಟ ವಿಷವನ್ನು ಸಕಾಲದಲ್ಲಿ ತೆಗೆದುಹಾಕಲು, ದೇಹ ಆರೋಗ್ಯದಿಂದ ಕಾರ್ಯ ನಿರ್ವಹಿಸಲು ಇದು ಸಹಾಯ ಮಾಡುತ್ತದೆ. 

ನುಗ್ಗೆ ಸೊಪ್ಪು ಮತ್ತು ನೆಲ್ಲಿಕಾಯಿ ರಸವನ್ನು ತಯಾರಿಸುವುದು ಹೇಗೆ?
ನಿಮಗೆ ಅಗತ್ಯವಿರುವ ಜ್ಯೂಸ್ ತಯಾರಿಸಲು ತಾಜಾ ನುಗ್ಗೆ ಎಲೆಗಳು, ತಾಜಾ ಆಮ್ಲಾ, ನೀರು, ಜೇನುತುಪ್ಪ ಬೇಕು. 

ನುಗ್ಗೆ ಮತ್ತು ನೆಲ್ಲಿಕಾಯಿ ಜ್ಯೂಸ್ ತಯಾರಿಸುವುದು ಹೇಗೆ?
ಮೊದಲಿಗೆ ನುಗ್ಗೆ ಎಲೆಗಳು ಮತ್ತು ನೆಲ್ಲಿಕಾಯಿಗಳನ್ನು ಚೆನ್ನಾಗಿ ತೊಳೆಯಿರಿ.
ನುಗ್ಗೆ ಎಲೆಗಳು ಮತ್ತು ನೆಲ್ಲಿಕಾಯಿ ಮಿಶ್ರಣಕ್ಕೆ ನೀರು ಹಾಕಿ ನಯವಾಗುವವರೆಗೆ ಮಿಕ್ಸಿ ಮಾಡಿ.
ನಂತರ ಅದನ್ನು ಸೋಸಿ, ಈ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯಿರಿ. 

Latest Videos

click me!