ಕಾಲಿನ ನಡುವೆ ದಿಂಬು ಇಟ್ಟು ಮಲಗೋದರಿಂದ ಇವೆ ಲಾಭ

First Published Feb 25, 2024, 4:43 PM IST

ರಾತ್ರಿ ಸರಿಯಾಗಿ ನಿದ್ರೆ ಬಾರದೆ ಸಮಸ್ಯೆ ಅನುಭವಿಸುತ್ತಿದ್ದೀರಾ? ಹಾಗಿದ್ರೆ ಕಾಲುಗಳ ನಡುವೆ ದಿಂಬು ಇಟ್ಟು ಮಲಗೋದರಿಂದ ಎಷ್ಟೊಂದು ಪ್ರಯೋಜನಗಳಿವೆ ಅನ್ನೋದು ಗೊತ್ತಾ? ನೀವು ಅದನ್ನು ಟ್ರೈ ಮಾಡಿ ನೋಡಿ. 
 

ದಿನವಿಡೀ ಕಚೇರಿ ಮತ್ತು ಮನೆ ಕೆಲಸಗಳನ್ನು ಮಾಡಿದ ನಂತರ, ಪ್ರತಿಯೊಬ್ಬ ಮಹಿಳೆ ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಬಯಸುತ್ತಾಳೆ. ಆದರೆ ಅನೇಕ ಬಾರಿ ಬೆನ್ನು ನೋವು, ಒತ್ತಡ ಮತ್ತು ಆಯಾಸದಿಂದಾಗಿ, ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕಾಲ ನಡುವೆ ದಿಂಬನ್ನು (pillow in between leg) ಇಟ್ಟುಕೊಂಡು ಮಲಗಿದರೆ, ಅದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರ ಬಗ್ಗೆ ಕಲಿಯೋಣ.
 

ಸೊಂಟ ನೋವಿನಿಂದ ಮುಕ್ತಿ 
ರಾತ್ರಿ ಹೊತ್ತು ಕಾಲಿನ ನಡುವೆ ದಿಂಬು ಇಟ್ಟು ಮಲಗೋದರಿಂದ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಇದರಿಂದ ಸೊಂಟ ನೋವಿನಿಂದ (back pain) ಹೆಚ್ಚಿನ ಆರಾಮ ಸಿಗುತ್ತದೆ.

ಪಿರಿಯಡ್ಸ್‌ನಲ್ಲಿ ಆರಾಮ ಸಿಗುತ್ತೆ
ನಿಮಗೂ ಸಹ ಪಿರಿಯಡ್ಸ್ (periods) ನಿಂದ ಉಂಟಾಗುವ ಇರಿಟೇಶನ್ ಮತ್ತು ನೋವಿನಿಂದ ಮುಕ್ತಿ ಪಡೆಯಲು ನೀವು ಬಯಸಿದರೆ ಕಾಲಿನ ನಡುವೆ ದಿಂಬನ್ನು ಇಟ್ಟು ಮಲಗೋದು ಒಳ್ಳೆಯದು. ಇದರಿಂದ ಆರಾಮದಾಯಕ ನಿದ್ರೆ ಬರುತ್ತದೆ. 

ಪ್ರೆಗ್ನೆಂಟ್ ಮಹಿಳೆಯರಿಗೆ ಉತ್ತಮ
ಕಾಲಿನ ನಡುವೆ ದಿಂಬು ಇಟ್ಟು ಒಂದು ಬದಿಗೆ ವಾಲಿ ಮಲಗೋದರಿಂದ ಪ್ರೆಗ್ನೆಂಟ್ ಮಹಿಳೆಯರಿಗೆ (pregnant women) ಆರಾಮವಾಗಿರಲು ಸಹಾಯ ಮಾಡುತ್ತದೆ. ಅಷ್ಟೇ ಆಲ್ಲ ಇದರಿಂದ ಹೊಟ್ಟೆಯಲ್ಲಿನ ನರದ ಮೇಲೆ ಒತ್ತಡ ಉಂಟಾಗದಂತೆ ಕಾಪಾಡಬಹುದು. 

ಹಿಪ್ಸ್ ನೋವು (hips pain)
ಒಂದು ವೇಳೆ ನಿಮಗೆ ರಾತ್ರಿ ಮಲಗುವ ಸಮಯದಲ್ಲಿ ಹಿಪ್ಸ್ ನೋವು ಕಾಣಿಸಿಕೊಂಡರೆ, ನೀವು ಕಾಲಿನ ಮಧ್ಯೆ ದಿಂಬು ಇಟ್ಟು ಮಲಗಿದರೆ ನೋವು ನಿವಾರಣೆಯಾಗುತ್ತೆ, ಆರಾಮ ಸಿಗುತ್ತೆ. 

ಆಯಾಸ ಕಡಿಮೆಯಾಗುತ್ತೆ
ದಿನ ಪೂರ್ತಿ ಕೆಲಸ ಮಾಡಿ ಆಯಾಸದಿಂದ (tiredness) ಮೈ ಕೈ ಎಲ್ಲಾ ನೋವು ಆಗುತ್ತಿದ್ದರೆ ದಿಂಬನ್ನು ಕಾಲಿನ ಮಧ್ಯೆ ಇಟ್ಟು ಮಲಗಿ, ಇದರಿಂದ ಆಯಾಸವೆಲ್ಲಾ ದೂರ ಆಗುತ್ತದೆ, ಆರಾಮದಾಯಕ ನಿದ್ರೆ ಬರುತ್ತದೆ. 

ಚೆನ್ನಾಗಿ ನಿದ್ರೆ ಬರುತ್ತೆ
ಕಾಲಿನ ಮಧ್ಯೆ ದಿಂಬು ಇಟ್ಟು ಮಲಗೋದರಿಂದ ಚಡಪಡಿಕೆ ದೂರವಾಗುತ್ತದೆ. ಇದರಿಂದ ಶಾಂತಿಯುತ ನಿದ್ರೆ (healthy sleep) ಮಾಡಲು ಸಾಧ್ಯವಾಗುತ್ತದೆ. ಬೆಳಗ್ಗೆ ತಾಜಾತನದ ಅನುಭವ ಆಗುತ್ತದೆ. 

ಬ್ಲಡ್ ಸರ್ಕ್ಯುಲೇಶನ್ ಸುಧಾರಿಸುತ್ತೆ
ರಾತ್ರಿ ಸಮಯದಲ್ಲಿ ಕಾಲಿನ ನಡುವೆ ದಿಂಬನ್ನು ಇಟ್ಟು ಮಲಗೋದರಿಂದ ರಕ್ತ ಪರಿಚಲನೆ (blood circulation) ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಜೊತೆಗೆ ಸ್ಪೈನ್ ಅಲೈನ್ ಮೆಂಟ್ ಸುಧಾರಿಸಲು ಸಹಾಯ ಮಾಡುತ್ತದೆ. 

click me!