ನವರಾತ್ರಿಯ ಸಂದರ್ಭದಲ್ಲಿ ಉಪವಾಸವನ್ನು (Fasting) ಮಾಡಲಾಗುತ್ತದೆ. ಸಾತ್ವಿಕ ಆಹಾರವನ್ನು ತಿನ್ನಲಾಗುತ್ತದೆ. ಇವೆಲ್ಲವೂ ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತವೆ. ದುರ್ಗಾ ದೇವಿಯ ವಿಗ್ರಹವನ್ನು ನೀವು ಎಂದಾದರೂ ನೋಡಿದ್ದೀರಾ? ಅವರ ಎರಡೂ ಕೈಗಳನ್ನು ಮೇಲಕ್ಕೆ ಎತ್ತಲಾಗಿದೆ. ಕಾಲುಗಳು ಮತ್ತು ಸೊಂಟವು ಮಧ್ಯ ಭಾಗದಿಂದ ಹಿಗ್ಗಿರುವಂತೆ ಇರುತ್ತದೆ. ಒಂಭತ್ತು ರೂಪದಲ್ಲಿ ದೇವಿಯನ್ನು ಪೂಜಿಸಿದರೂ ದೇವಿಯ ದೇಹದ ರೂಪ ಎಲ್ಲಾ ಕಡೆಗಳಲ್ಲೂ ಒಂದೇ ರೀತಿಯಾಗಿರುತ್ತದೆ. ಇದನ್ನೇ ದೇವಿ ಆಸನ ಎಂದು ಕರೆಯಲಾಗುತ್ತದೆ.
ಏನಿದು ದೇವಿ ಆಸನ (Goddess pose), ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಬಗ್ಗೆ ನೀವು ತಿಳಿಯಬೇಕು ಮತ್ತು ಪ್ರತಿದಿನ ದೇವಿ ಆಸನ ಮಾಡುವ ಮೂಲಕ ನಿಮ್ಮ ಫಿಟ್ನೆಸ್ ಕಾಯ್ಡುಕೊಳ್ಳುವುದು ಮುಖ್ಯ. ಅದಕ್ಕಾಗಿ ಏನೆಲ್ಲಾ ಮಾಡಬೇಕು ಅನ್ನೋದನ್ನು ತಿಳಿಯೋಣ.
ದೇವಿ ಆಸನವನ್ನು ಹೇಗೆ ಮಾಡಲಾಗುತ್ತದೆ?
ಮೊದಲನೆಯದಾಗಿ, ತಾಡಾಸನದ ಸ್ಥಾನಕ್ಕೆ ಬನ್ನಿ, ಅಂದರೆ ಪರ್ವತ ಭಂಗಿ ಅಥವಾ ತಾಳೆ ಮರದ ಭಂಗಿ.
ನಿಮ್ಮ ತೋಳುಗಳನ್ನು ಕಾಲುಗಳ ಪಕ್ಕದಲ್ಲಿ ವಿಶ್ರಾಂತಿ ಭಂಗಿಯಲ್ಲಿ ಇರಿಸಿ.
ನಿಮ್ಮ ಕಾಲುಗಳನ್ನು ವಿಸ್ತರಿಸಿ ಮತ್ತು ಮೂರು - ನಾಲ್ಕು ಅಡಿ ಅಂತರವನ್ನು ಕಾಪಾಡಿಕೊಳ್ಳಿ.
ಈಗ ಎರಡೂ ಪಾದಗಳ ಕಾಲ್ಬೆರಳುಗಳನ್ನು ಹೊರಕ್ಕೆ ಬಗ್ಗಿಸಿ ಆಳವಾದ ಉಸಿರನ್ನು ತೆಗೆದುಕೊಳ್ಳಿ.
ನೀವು ಉಸಿರನ್ನು ಹೊರಹಾಕುವ ಸಮಯದಲ್ಲಿ, ಮೊಣಕಾಲುಗಳನ್ನು ಬಗ್ಗಿಸಿ
ನಮಸ್ತೆ ಭಂಗಿ ಕೂಡ ಮುಖ್ಯ
ತೋಳುಗಳನ್ನು ಭುಜಗಳ ಬದಿಗಳಿಗೆ ಚಾಚಿ. ತೋಳುಗಳನ್ನು ಭುಜದ ಎತ್ತರದಲ್ಲಿ ಇರಿಸಲು ಪ್ರಯತ್ನಿಸಿ.
ಅಂಗೈಗಳು ಕೆಳಮುಖವಾಗಿರಬೇಕು.
ಇದರ ನಂತರ, ನಿಧಾನವಾಗಿ ಅಂಗೈಗಳನ್ನು ಒಟ್ಟಿಗೆ ಇರಿಸಿ ಮತ್ತು ನಮಸ್ತೆ ಭಂಗಿಯನ್ನು (Namasthe pose)ಮಾಡಿ. ಅವುಗಳನ್ನು ಎದೆಯ ಬಳಿ ಇರಿಸಿ.
ಆ ಸಮಯದಲ್ಲಿ ಮುಂಭಾಗದ ತೋಳನ್ನು 90 ಡಿಗ್ರಿ ಕೋನದಲ್ಲಿ ಇರಿಸಿ.
ಮೊಣಕಾಲುಗಳು ಕಾಲ್ಬೆರಳುಗಳಿಗೆ ಸಮಾನಾಂತರವಾಗಿರಬೇಕು. ಈ ಭಂಗಿಯಲ್ಲಿ ಸುಮಾರು 30 ರಿಂದ 60 ಸೆಕೆಂಡುಗಳ ಕಾಲ ಇರಿ.
ಅಹಿತಕರವೆನಿಸಿದಾಗ, ನಿಧಾನವಾಗಿ ತೋಳುಗಳನ್ನು ಕೆಳಗಿಳಿಸಿ ಮತ್ತು ತಾಡಾಸನದ ಪ್ರಾರಂಭದ ಸ್ಥಾನಕ್ಕೆ ಹಿಂತಿರುಗಿ. ಇದನ್ನು 4 ರಿಂದ 6 ಬಾರಿ ಪುನರಾವರ್ತಿಸಿ.
ದೇವಿ ಆಸನ ಅಥವಾ ದೇವಿಯ ಭಂಗಿಯ 9 ಪ್ರಯೋಜನಗಳು
1. ಸೊಂಟ, ಬೆನ್ನು ಮತ್ತು ಎದೆಯನ್ನು ಹಿಗ್ಗಿಸುತ್ತದೆ.
2. ಇದು ದೇಹದ ಪ್ರಮುಖ ಸ್ನಾಯುಗಳನ್ನು ಬಲಪಡಿಸುತ್ತದೆ.
3. ನಿಮ್ಮ ಒಳ ತೊಡೆ ಮತ್ತು ಕ್ವಾಡ್ರಿಸೆಪ್ಸ್ ಸ್ನಾಯುಗಳನ್ನು ಬಲಪಡಿಸುತ್ತದೆ.
4. ತೋಳುಗಳು, ಬೆನ್ನು ಮತ್ತು ಭುಜಗಳನ್ನು ಬಲಪಡಿಸುತ್ತದೆ.
5. ಈ ಆಸನವು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
6. ದೇವಿ ಆಸನವು ಸೊಂಟವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ಹೆರಿಗೆಯ ಸಮಯದಲ್ಲಿ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ.
7. ಇದು ಚಕ್ರವನ್ನು ಸಮತೋಲನಗೊಳಿಸುವುದರಿಂದ ಫರ್ಟಿಲಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.
8. ಇದು ವ್ಯಕ್ತಿಯನ್ನು ಒತ್ತಡದಿಂದ ಮುಕ್ತಗೊಳಿಸುವ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಭಾವನಾತ್ಮಕ ಸ್ಥಿರತೆಯನ್ನು ಸಹ ಸೃಷ್ಟಿಸುತ್ತದೆ.
9. ಹೊಟ್ಟೆಯ ಕೊಬ್ಬನ್ನು (belly fat) ಕಡಿಮೆ ಮಾಡಲು ಸಹಾಯ ಮಾಡಲು ಉತ್ಕಟ ಕೋನಾಸನ ಅಥವಾ ದೇವಿ ಆಸನವನ್ನು ನಿಯಮಿತವಾಗಿ ಮಾಡುವುದು ಉತ್ತಮ.