ಜಗತ್ತು ಅಪಾಯಕಾರಿ ಸಾಂಕ್ರಾಮಿಕ (pandemic) ರೋಗವನ್ನು ಸಮೀಪಿಸುತ್ತಿದೆ. ಈ ಸಾಂಕ್ರಾಮಿಕ ರೋಗದ ವೈರಸ್ ಅನ್ನು ಕೋವಿಡ್ -19 ಗಿಂತ ನೂರು ಪಟ್ಟು ಹೆಚ್ಚು ಅಪಾಯಕಾರಿ ಮತ್ತು ಮಾರಕ ಎಂದು ಹೇಳಲಾಗುತ್ತಿದೆ. ಏಕೆಂದರೆ ಅದರ ಸೋಂಕಿಗೆ ಒಳಗಾದ ಅರ್ಧದಷ್ಟು ಜನರು ಸಾವನ್ನಪ್ಪಲಿದ್ದಾರೆ ಎನ್ನಲಾಗುತ್ತಿದೆ.
ಜಗತ್ತಿನಲ್ಲಿ ಮತ್ತೆ ಕೋವಿಡ್ -19 (Covid 19)ನಂತಹ ಸಾಂಕ್ರಾಮಿಕ ರೋಗ ಬರಲಿದೆಯೇ? ಈ ಪ್ರಶ್ನೆ ಹೊಸದೇನಲ್ಲ. ಐದು ವರ್ಷಗಳ ಹಿಂದೆ, ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ ಜನರನ್ನು ಬಲಿಪಡೆದಿತ್ತು, ಅಂತಹ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಾನವಕುಲವು ಸಿದ್ಧವಾಗಿಲ್ಲ ಎಂದು ಜಗತ್ತಿಗೆ ಅನಿಸುವಂತೆ ಮಾಡಿತ್ತು. ಆದರೆ ಇದೀಗ ಭಯಾನಕ ಸುದ್ದಿಯೊಂದು ಹೊರ ಬಂದಿದೆ, ಅದೇನೆಂದರೆ, ತಜ್ಞರ ಪ್ರಕಾರ, ಜಗತ್ತು ಮತ್ತೊಂದು ಮಹಾಮಾರಿಯ ಅಪಾಯವನ್ನು ಎದುರಿಸಲಿದೆ.
ಜಗತ್ತು ಮುಂದಿನ ಅಪಾಯಕಾರಿಯಾಗಿ ಸಾಂಕ್ರಾಮಿಕ ರೋಗಕ್ಕೆ ಹತ್ತಿರದಲ್ಲಿರುವ ಸೂಚನೆ ದೊರೆತಿರುವುದರಿಂದ ಇದನ್ನು ಈಗ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದಕ್ಕೆ ಕಾರಣ ಪಕ್ಷಿಗಳಿಂದ ಹರಡುವ ಹಕ್ಕಿ ವೈರಾಣು, (bird virus) ಇದು ಈಗಾಗಲೇ ಜಗತ್ತಿನಲ್ಲಿ ಪರಿಣಾಮವನ್ನು ತೋರಿಸಲು ಪ್ರಾರಂಭಿಸಿದೆ. ಇದನ್ನು ತಡೆಯದಿದ್ದರೆ, ಕೂಡಲೇ ಇದು ಪ್ರಪಂಚದಾದ್ಯಂತ ಹರಡುವ ಸಾಧ್ಯತೆ ಇದೆ.
ಪ್ರಸ್ತುತ, ವಿಶ್ವಾದ್ಯಂತ ಮಾನವರಲ್ಲಿ ಹಕ್ಕಿ ಜ್ವರದ (bird flue) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇತ್ತೀಚೆಗೆ, ಅಮೆರಿಕದ ಟೆಕ್ಸಾಸ್ನಲ್ಲಿ ಹೊಸ ಪ್ರಕರಣ ಹೊರಹೊಮ್ಮಿದೆ, ಇದು ದೇಶದ ವೈದ್ಯಕೀಯ ವೃತ್ತಿಪರರಲ್ಲಿ ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಎಚ್ 5 ಎನ್ 1 (H5N1)ತಳಿಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಅದಕ್ಕಾಗಿಯೇ ಪಿಟ್ಸ್ಬರ್ಗ್ನ ಬರ್ಡ್ ಫೀವರ್ ಸಂಶೋಧಕ ಡಾ.ಸುರೇಶ್ ಕೂಚಿಪುಡಿ ಮುಂದಿನ ಸಾಂಕ್ರಾಮಿಕ ರೋಗವು ತುಂಬಾನೆ ಹತ್ತಿರದಲ್ಲಿದೆ ಎಂದು ಎಚ್ಚರಿಸುತಿದ್ದಾರೆ.
ಇದಕ್ಕೆ ಕಾರಣವೆಂದರೆ ಈ ವೈರಸ್ ಸೋಂಕಿತ ಜನರಲ್ಲಿ ಅರ್ಧದಷ್ಟು ಜನರಿಗೆ ಇದು ಮಾರಕವಾಗಬಹುದು. ಅಂದರೆ ಸಾವು ಸಂಭವಿಸುವ ಅಪಾಯವಿದೆ. ಶ್ವೇತಭವನದ ಬ್ರೀಫಿಂಗ್ನಲ್ಲಿ ಮಾತನಾಡಿದ ಡಾ.ಕೂಚಿಪುಡಿ, ಅನೇಕ ವರ್ಷಗಳಿಂದ ಅಥವಾ ಬಹುಶಃ ದಶಕಗಳಿಂದ ಸಾಂಕ್ರಾಮಿಕ ರೋಗಗಳ ಪಟ್ಟಿಯಲ್ಲಿ ಈ ರೋಗವು ಅಗ್ರಸ್ಥಾನದಲ್ಲಿದೆ. ಆದರೆ ಈಗ ಅದು ಸಾಂಕ್ರಾಮಿಕ ರೋಗವನ್ನು ಹರಡುವ ಸಾಧ್ಯತೆ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಎಚ್ 5 ಎನ್ 1 ಈಗಾಗಲೇ ಸಾಂಕ್ರಾಮಿಕ ವೈರಸ್ ಗಳ ಹಲವಾರು ಸೂಚನೆಗಳನ್ನು ತೋರಿಸಿದೆ. ಇದು ಈಗಾಗಲೇ ಜಾಗತಿಕವಾಗಿ ಹರಡಿದೆ. ಪಕ್ಷಿಗಳಿಂದ ಹರಡುವ ಈ ವೈರಸ್ ಮಾನವರು ಸೇರಿದಂತೆ ಅನೇಕ ಸಸ್ತನಿಗಳಿಗೆ ಸೋಂಕು ತಗುಲಿಸಿದೆ, ಇದು ನಿಜವಾಗಿ ಹರಡಲಿರುವ ವೈರಸ್ ಅಲ್ಲ, ಆದರೆ ಇದು ಈಗಾಗಲೇ ಹರಡಿದೆ ಮತ್ತು ಹರಡುತ್ತಿದೆ.
ಅಷ್ಟೇ ಅಲ್ಲ ಈ ವೈರಸ್ ಹೆಚ್ಚು ರೂಪಾಂತರಗೊಳ್ಳಬಹುದು ಮತ್ತು ಹೆಚ್ಚು ಮಾರಕವಾಗಬಹುದು (deadly virus). ಅದೇನೇ ಇದ್ದರೂ, ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ವಿಶ್ವದ ಅನೇಕ ದೇಶಗಳು ಸಾಂಕ್ರಾಮಿಕ ರೋಗವನ್ನು ಎದುರಿಸಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂದು ವಿಶ್ವದ ಅನೇಕ ತಜ್ಞರು ಸಲಹೆ ನೀಡಿದ್ದಾರೆ.