ರೋಗ ನಿರೋಧಕ ಶಕ್ತಿ
ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೆಮ್ಮು, ನೆಗಡಿ, ಜ್ವರ, ಸೋಂಕುಗಳು ಆಗಾಗ ಬರುತ್ತಿರುತ್ತವೆ. ಇಂಥವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ತಿನ್ನಲೇಬೇಕು. ಬಾಳೆಹಣ್ಣುಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತವೆ. ಈ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪ್ರತಿದಿನ ಬೆಳಗ್ಗೆ ಒಂದು ಬಾಳೆಹಣ್ಣು ತಿಂದರೆ ನಿಮ್ಮ ಶರೀರಕ್ಕೆ ರೋಗಗಳನ್ನು ಎದುರಿಸುವ ಶಕ್ತಿ ಬರುತ್ತದೆ.
ತೂಕ ಇಳಿಸಲು ಸಹಾಯ ಮಾಡುತ್ತದೆ
ತುಂಬಾ ಜನ ತೂಕ ಹೆಚ್ಚಾಗುತ್ತದೆ ಅಂತ ಬಾಳೆಹಣ್ಣು ತಿನ್ನೋದಿಲ್ಲ. ಆದರೆ ನೀವು ಪ್ರತಿದಿನ ಒಂದು ಬಾಳೆಹಣ್ಣು ತಿಂದರೆ ತೂಕ ಹೆಚ್ಚಾಗೋದಿಲ್ಲ. ಬದಲಿಗೆ ಬಾಳೆಹಣ್ಣು ತೂಕ ಇಳಿಸಲು ಸಹಾಯ ಮಾಡುತ್ತದೆ. ಯಾಕೆಂದರೆ ಈ ಹಣ್ಣಿನಲ್ಲಿ ನಾರಿನಂಶ ಹೆಚ್ಚಿರುತ್ತದೆ. ಇದು ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿದಂತೆ ಇಡುತ್ತದೆ. ಇದರಿಂದ ನೀವು ದಿನದಲ್ಲಿ ಹೆಚ್ಚು ತಿನ್ನೋದಿಲ್ಲ. ಇದು ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ.