ನಾಭಿ ಸ್ವಚ್ಛಗೊಳಿಸುವ ಮೂಲಕ ಸೋಂಕನ್ನು ಹೀಗೂ ನಿವಾರಿಸಬಹುದು!

First Published | Mar 12, 2021, 2:38 PM IST

ಸ್ನಾನ ಮಾಡುವಾಗ ದೇಹದ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತೇವೆ, ಆದರೆ ನಾಭಿಯನ್ನು ಮರೆಯುತ್ತೇವೆ. ಹೊಕ್ಕುಳ ಗುಂಡಿಯು ಮಗುವಿನ ಹೊಕ್ಕುಳ ಬಳ್ಳಿಯನ್ನು ಜನನದ ಸಮಯದಲ್ಲಿ ಜೋಡಿಸಲ್ಪಟ್ಟಿರುವ ಕಿಬ್ಬೊಟ್ಟೆಯ ಗಾಯ. ಹೊಕ್ಕುಳಲ್ಲಿ 76 ಬಗೆಯ ಬ್ಯಾಕ್ಟೀರಿಯಾಗಳಿವೆ ಎಂದು ತಿಳಿದಿದೆಯೇ? ಈ ಬ್ಯಾಕ್ಟೀರಿಯಾಗಳು ನಾಭಿಯಲ್ಲಿ ಬೆವರು, ಧೂಳು, ಸೋಪು ಮತ್ತು ನೀರು ಸೇರಿ ನಾಭಿಯಲ್ಲಿ ವಿಚಿತ್ರವಾದ ದುರ್ವಾಸನೆಯನ್ನು ಉಂಟುಮಾಡುತ್ತವೆ. 

ಕೆಲವೊಮ್ಮೆ ಬ್ಯಾಕ್ಟೀರಿಯಾಗಳು ನಾಭಿ ಪ್ರದೇಶದಲ್ಲಿ ಸೋಂಕನ್ನು ಹರಡುತ್ತವೆ. ಹೊಕ್ಕುಳುಕೆಂಪಾಗುವುದು, ತುರಿಕೆ, ಬೆಲ್ಲಿ ಬಟನ್‌ನ‌ಲ್ಲಿ ನೋವು, ಬೆಲ್ಲಿ ಬಟನ್‌ನಿಂದ ಯಾವುದೇ ಬಣ್ಣದ ವಿಸರ್ಜನೆ ಮತ್ತು ಊತದಂತಹ ಶಿಲೀಂಧ್ರದ ಸೋಂಕಿನ ಅನೇಕ ಲಕ್ಷಣಗಳಿವೆ. ನಾಭಿಯ ಸೋಂಕು ತಪ್ಪಿಸಲು, ಬೆಲ್ಲಿ ಬಟನ್ ಅನ್ನು ಸ್ವಚ್ಛಗೊಳಿಸುತ್ತಿರಿ.ನಾಭಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಸೋಂಕನ್ನು ಹೇಗೆ ತಪ್ಪಿಸುವುದು ಎಂಬುದನ್ನು ತಿಳಿದುಕೊಳ್ಳೋಣ.
undefined
ಹೊಕ್ಕುಳನ್ನು ಸ್ವಚ್ಛಗೊಳಿಸುವ ಮೂಲಕ ಸೋಂಕನ್ನು ತಡೆಗಟ್ಟುವುದು ಹೇಗೆ:ನಾಭಿ ಸೋಂಕನ್ನು ತಪ್ಪಿಸಬೇಕೆಂದಿದ್ದರೆ, ಸ್ನಾನ ಮಾಡುವಾಗ ಪ್ರತಿದಿನ ಹೊಕ್ಕುಳನ್ನು ತೊಳೆಯಿರಿ. ನಾಭಿಯನ್ನು ಎಚ್ಚರಿಕೆಯಿಂದ ಮತ್ತು ಮೃದುಬೆರಳುಗಳಿಂದ ಸಾಬೂನಿನಿಂದ ತೊಳೆಯಿರಿ. ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಸೋಪ್ ಬಳಸಿ.
undefined

Latest Videos


ನಾಭಿ ಸ್ವಚ್ಛಗೊಳಿಸಿದ ನಂತರ, ಅದನ್ನು ಒದ್ದೆಯಾಗಿರಿಸಬೇಡಿ, ಆದರೆ ಮೃದುವಾದ ಟವೆಲ್‌ನಿಂದಸ್ವಚ್ಛಗೊಳಿಸಿ. ಒದ್ದೆ ಹೊಕ್ಕುಳಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು.
undefined
ನಾಭಿಗೆಸುಗಂಧಿತ ಟಾಲ್ಕಂ ಪೌಡರ್ ಬಳಸಿ. ಇದರಿಂದಹೊಕ್ಕುಳಲ್ಲಿ ದುರ್ವಾಸನೆಯನ್ನುಂಟಾಗುವುದಿಲ್ಲ.
undefined
ಕ್ರೀಡಾ ಉಡುಪುಗಳನ್ನು ನಿಯಮಿತವಾಗಿ ಬದಲಾಯಿಸುತ್ತಲೇ ಇರಿ. ಹೀಗೆ ಮಾಡುವುದರಿಂದ, ನಾಭಿಮೇಲೆ ಮತ್ತೆ ಮತ್ತೆ ಬೆವರು ಇರುವುದಿಲ್ಲ ಮತ್ತುಶುಷ್ಕವಾಗಿರುತ್ತದೆ.
undefined
ನಾಭಿಯು ಉಸಿರಾಡಲು ಸಡಿಲವಾದ-ಹೊಂದಿಕೊಳ್ಳುವ ಬಟ್ಟೆಗಳನ್ನು ಧರಿಸಿ.
undefined
ವ್ಯಾಯಾಮದ ವೇಳೆ ಚರ್ಮವನ್ನು ಉಸಿರಾಡಲು ಬಿಡುವಂತಹ ಬಟ್ಟೆಗಳನ್ನು ಧರಿಸಿ.
undefined
ಗಮನದಲ್ಲಿರಬೇಕಾದ ವಿಷಯಗಳುಸ್ವಚ್ಛಗೊಳಿಸುತ್ತಿದ್ದರೂ, ನಾಭಿಯಲ್ಲಿ ಕೊಳಕು ವಾಸನೆ ಮತ್ತು ನೋವು ಮತ್ತು ಊತವಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.ಊತ, ನೋವು ಮತ್ತು ವಿಸರ್ಜನೆಯು ಹೊಕ್ಕುಳಲ್ಲಿ ಸೋಂಕು ತಗುಲಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೋಂಕಿನ ಚಿಕಿತ್ಸೆಯನ್ನು ಆಂಟಿಬಯೋಟಿಕ್ ಔಷಧದ ಮೂಲಕ ಮಾತ್ರ ಸಾಧ್ಯ.
undefined
click me!