ಹೆಪ್ಪಗಟ್ಟುವ ರಕ್ತ: ಚರ್ಮ ಬದಲಾದರೆ ನಿರ್ಲಕ್ಷಿಸಬೇಡಿ...

Suvarna News   | Asianet News
Published : Apr 06, 2021, 05:47 PM IST

ಯಾವುದೇ ರೀತಿಯ ಗಾಯಗಳಾದಾಗಲೆಲ್ಲ ಚರ್ಮದಲ್ಲಿ ರಕ್ತ ಸೋರ ತೊಡಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯು ಉತ್ತಮವೆಂದು ಪರಿಗಣಿಸಲ್ಪಟ್ಟಿದೆ, ಏಕೆಂದರೆ ಹೆಪ್ಪುಗಟ್ಟುವಿಕೆಯು ಅಧಿಕ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ. ರಕ್ತದಲ್ಲಿರುವ ಜೀವಕೋಶಗಳು ಮತ್ತು ಪ್ರೋಟೀನ್ಸ್ ರಕ್ತೆ ಹೆಪ್ಟುಗಟ್ಟಲು ಸಹಕರಿಸುತ್ತದೆ. ಆದರೆ ರಕ್ತ ಹೆಪ್ಪುಗಟ್ಟುವಿಕೆಯು ಸ್ವಯಂಚಾಲಿತವಾಗಿ ಕರಗದಿದ್ದರೆ, ಅಥವಾ ಅದು ಒಂದು ಅಂಗದಲ್ಲಿ ಅಥವಾ ದೇಹದೊಳಗೆ ಒಳಗೊಳಗೇ ಇದ್ದರೆ ಮಾರಣಾಂತಿಕವಾಗಬಹುದು. 

PREV
19
ಹೆಪ್ಪಗಟ್ಟುವ ರಕ್ತ: ಚರ್ಮ ಬದಲಾದರೆ ನಿರ್ಲಕ್ಷಿಸಬೇಡಿ...

ರಕ್ತ ಹೆಪ್ಪುಗಟ್ಟುವ ಚಿಹ್ನೆಗಳನ್ನು ಗುರುತಿಸಿ
ಈ ರೀತಿಯ ರಕ್ತ ಹೆಪ್ಪುಗಟ್ಟುವಿಕೆಯ ಚಿಹ್ನೆಗಳನ್ನು ಗುರುತಿಸುವುದು ಬಹಳ ಮುಖ್ಯ, ಇದರಿಂದ ಸಕಾಲದಲ್ಲಿ ಚಿಕಿತ್ಸೆ ಪಡೆದು ಮಾರಣಾಂತಿಕವಾಗುವುದನ್ನು ತಡೆಯಬಹುದು. ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾದರೆ ಹೃದಯಾಘಾತ ಸಂಭವಿಸಬಹುದು.

29

ಶ್ವಾಸಕೋಶದಲ್ಲಿ ಯಾವಾಗಲೂ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದ್ದರೆ ಅದನ್ನು ಪಲ್ಮನರಿ ಎಂಬಾಲಿಸಮ್ ಎನ್ನುತ್ತಾರೆ. ದೇಹದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಶೇಖರಣೆಯಾದರೆ ಅದನ್ನು ಡೀಪ್ ವ್ಯಾನ್ ಥ್ರೊಂಬೋಸಿಸ್ (DVT) ಎಂದು ಕರೆಯಲಾಗುತ್ತದೆ.   

39

ದೇಹದ ಯಾವುದೇ ಭಾಗದ ಉರಿಯೂತ- ರಕ್ತನಾಳ ಅಥವಾ ರಕ್ತಪ್ರವಾಹದಲ್ಲಿ ಹೆಪ್ಪುಗಟ್ಟುವಿಕೆಯಿಂದ ರಕ್ತ ಸಂಚಾರವು ನಿಂತಾಗ, ದೇಹದ ಆ ಭಾಗವು ಊದಿಕೊಳ್ಳುತ್ತದೆ.

49

ಕಾಲಿನ ಕೆಳಭಾಗ ಊದಿಕೊಳ್ಳಲು ಪ್ರಾರಂಭಿಸಿದರೆ, ಅದು DVTಯ ಸಂಕೇತವಾಗಿದೆ.ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಗುಣವಾದ ನಂತರವೂ ಪ್ರತಿ ಮೂವರಲ್ಲಿ ಒಬ್ಬರು ಉರಿಯೂತ ಮತ್ತು ನೋವನ್ನು ಹೊಂದುತ್ತಲೇ ಇರುತ್ತಾರೆ.

59

ಚರ್ಮದ ಬಣ್ಣ ಬದಲಾವಣೆ- ಒಂದು ವೇಳೆ ಕೈ ಅಥವಾ ಪಾದದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಾಗ ಆ ಭಾಗದ ಚರ್ಮದ ಬಣ್ಣವು ಕೆಂಪು ಅಥವಾ ನೀಲಿ ಬಣ್ಣಕ್ಕೆ ಬದಲಾಗುತ್ತದೆ. 

69

ಕೆಲವೊಮ್ಮೆ ರಕ್ತಕ್ಕೆ ಹಾನಿಯುಂಟಾಗುವ ಕಾರಣ ಚರ್ಮದ ಬಣ್ಣ ಬದಲಾಗುತ್ತದೆ. ಇದರ ಜೊತೆಗೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವುದಿದೆ ಎಂದಾದಲ್ಲಿ, ಅದು ಚರ್ಮ ನೀಲಿ ಬಣ್ಣಕ್ಕೆ ಕಾರಣವಾಗಬಹುದು.

79

ತೀವ್ರವಾದ ನೋವು ಅನುಭವಿಸುವುದು- ಯಾರಿಗಾದರೂ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡರೆ, ಅಪಧಮನಿಯಲ್ಲಿ ಅಥವಾ ಶ್ವಾಸಕೋಶದಲ್ಲಿ ಹೆಪ್ಪುಗಟ್ಟುವಿಕೆಯ ಸಮಸ್ಯೆಯು ಉಂಟಾಗಬಹುದು. 

89

ಇದರ ಜೊತೆಗೆ, ರಕ್ತ ಹೆಪ್ಪುಗಟ್ಟುವಿಕೆಯು ಕೈಗಳು, ಪಾದಗಳು ಅಥವಾ ಕಿಬ್ಬೊಟ್ಟೆಯಲ್ಲಿ ನೋವು ಉಂಟುಮಾಡಬಹುದು. ಈ ರೀತಿಯಾದ ಕೂಡಲೇ ವೈದ್ಯರನ್ನು ಕಾಣಿ. 

99

ಉಸಿರಾಟದ ತೊಂದರೆ: ಇದು ಶ್ವಾಸಕೋಶ ಅಥವಾ ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಗಂಭೀರ ಲಕ್ಷಣ. ಉಸಿರಾಟ ತೊಂದರೆಯು ತುಂಬಾ ಬೆವರುವಿಕೆ ಅಥವಾ ತೀಕ್ಷ್ಣವಾದ ಹೃದಯ ಬಡಿತಕ್ಕೂ ಕಾರಣವಾಗಬಹುದು.

click me!

Recommended Stories