ತೂಕ ನಷ್ಟ , ಹೆಚ್ಚಳ ಎರಡಕ್ಕೂ ಬಾಳೆಹಣ್ಣು ಹೇಗೆ ಸಹಕಾರಿ!

First Published | May 21, 2021, 4:42 PM IST

ತೂಕವನ್ನು ಹೆಚ್ಚಿಸಲು ಅಥವಾ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಎರಡಕ್ಕೂ ಬಾಳೆಹಣ್ಣು ಉಪಯೋಗಕಾರಿ. ಬಾಳೆಹಣ್ಣುಗಳು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿ ಅಂಶದಿಂದಾಗಿ ತೂಕ ಗಳಿಸುವ ಹಣ್ಣು ಎಂದು ಲೇಬಲ್ ಮಾಡಲಾಗುತ್ತದೆ. ಆದರೆ ಸರಿಯಾದ ರೀತಿಯಲ್ಲಿದ್ದಾಗ, ಬಾಳೆಹಣ್ಣುಗಳು ತೂಕ ನಷ್ಟಕ್ಕೆ ಸಹಕಾರಿ. ಬಾಳೆಹಣ್ಣು ಒಂದು ಸೂಪರ್-ಪೌಷ್ಟಿಕ ಹಣ್ಣು ಮತ್ತು  ತೂಕ ಇಳಿಸುವ ಉತ್ಸಾಹದಲ್ಲಿರುವಾಗ ಆಹಾರದಿಂದ ಅದನ್ನು ಸಂಪೂರ್ಣವಾಗಿ ತೆಗೆಯುವ ಅಗತ್ಯವಿಲ್ಲ. ತೂಕ ಇಳಿಕೆ ಮತ್ತು ತೂಕ ಹೆಚ್ಚಳಕ್ಕೆ ಬಾಳೆಹಣ್ಣುಗಳನ್ನು ಹೇಗೆ ಬಳಸಬಹುದು ಎಂಬುದು ಇಲ್ಲಿದೆ.

ತೂಕ ಇಳಿಸಲು ಬಾಳೆಹಣ್ಣುಬಾಳೆಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಘಳಿತ ಬಾಳೆಹಣ್ಣಿಗೆಹೋಲಿಸಿದರೆ ಕಡಿಮೆ ಪ್ರಮಾಣದ ಸಕ್ಕರೆಹೊಂದಿರುವುದರಿಂದ, ಪೂರ್ತಿಯಾಗಿ ಹಣ್ಣಾಗದ ಬಾಳೆಹಣ್ಣುಗಳು ತೂಕ ಇಳಿಸಲು ಉತ್ತಮ ಆಯ್ಕೆ.
undefined
ಈ ರೀತಿಯ ಬಾಳೆಹಣ್ಣುಗಳನ್ನು ಕಡಿಮೆ ಪ್ರಮಾಣದ ಸಕ್ಕರೆ ಹೊಂದಿರುವುದು ತೂಕ ಇಳಿಸಲು ಸಹಕಾರಿ.ಬಾಳೆಹಣ್ಣುಗಳು ಸಂಪೂರ್ಣವಾಗಿ ಕಚ್ಚಾವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ತೊಂದರೆಯನ್ನು ಉಂಟು ಮಾಡಬಹುದು. ಬಾಳೆಹಣ್ಣು ಮಧ್ಯದ ಹಂತದಲ್ಲಿರಬೇಕು, ಅಲ್ಲಿ ಅದು ಕಚ್ಚಾ ಅಥವಾ ಹಣ್ಣಾಗಿರುವುದಿಲ್ಲ.
undefined

Latest Videos


ಬಾಳೆಹಣ್ಣುಗಳು ನಾರಿನಂಶದಿಂದ ತುಂಬಿರುವುದರಿಂದ, ಅವು ಹಸಿವನ್ನು ನೀಗಿಸುತ್ತದೆ, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದು ಅತಿಯಾಗಿ ತಿನ್ನುವುದನ್ನು ಮತ್ತಷ್ಟು ತಡೆಯುತ್ತದೆ. ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದನ್ನು ತಪ್ಪಿಸಿ, ಬದಲಿಗೆ, ಪರಿಣಾಮಕಾರಿ ತೂಕ ಇಳಿಸುವ ಫಲಿತಾಂಶಗಳಿಗಾಗಿ ವಾರಕ್ಕೆ ಮೂರು ಬಾರಿ ಸೇವಿಸಿ.
undefined
ಬಾಳೆಹಣ್ಣು ಸೇವಿಸಲು ಸರಿಯಾದ ಮಾರ್ಗಬಾಳೆಹಣ್ಣನ್ನು ಕತ್ತರಿಸಬಹುದು ಮತ್ತು ಅದರ ಅರ್ಧದಷ್ಟು ಭಾಗವನ್ನು ಕಾರ್ನ್ ಫ್ಲೇಕ್ಸ್ ಅಥವಾ ಮ್ಯೂಸ್ಲಿ ಬೌಲ್ ಗೆ ಸೇರಿಸಬಹುದು. ಬಾಳೆಹಣ್ಣುಗಳನ್ನು ಇತರ ಋತುಮಾನದ ಹಣ್ಣುಗಳೊಂದಿಗೆ ಕತ್ತರಿಸಿ ಆರೋಗ್ಯಕರ ಹಣ್ಣಿನ ಚಾಟ್ ಮಾಡಬಹುದು.
undefined
ಅರ್ಧ ಬಾಳೆಹಣ್ಣನ್ನು ಅರ್ಧ ಕಪ್ ಕಡಿಮೆ ಕೊಬ್ಬಿನ ಹಾಲು ಮತ್ತು 1 ಟೇಬಲ್ ಚಮಚ ಚಿಯಾ ಬೀಜಗಳೊಂದಿಗೆ ಮಿಶ್ರಣ ಮಾಡುವ ಮೂಲಕ ತೂಕ ಇಳಿಸುವ ಸ್ಮೂಥಿಯನ್ನು ಸಹ ಮಾಡಬಹುದು.
undefined
ತೂಕ ಹೆಚ್ಚಳಕ್ಕೆಯಾವಾಗಲೂ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಹೆಚ್ಚಿಸಲು ಮಾರ್ಗಗಳನ್ನು ಹುಡುಕುತ್ತಿರುವ ಜನರಿಗೆ, ಬಾಳೆಹಣ್ಣುಗಳುಅತ್ಯುತ್ತಮ ಸ್ನೇಹಿತನಾಗಬಹುದು. ಅವು ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೊರಿಗಳ ಅತ್ಯುತ್ತಮ ಮೂಲ. ಇದರಲ್ಲಿರುವ ಪೌಷ್ಟಿಕ ಅಂಶಗಳು, ನೈಸರ್ಗಿಕವಾಗಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ 105 ಕ್ಯಾಲೊರಿಗಳು ಮತ್ತು 27 ಗ್ರಾಂ ಕಾರ್ಬ್ಸ್ ಇದೆ.
undefined
ಸಂಪೂರ್ಣವಾಗಿ ಹಣ್ಣಾದ ಬಾಳೆಹಣ್ಣಿನಲ್ಲಿ ಹಣ್ಣಾಗದ ಬಾಳೆಗೆ ಹೋಲಿಸಿದರೆ ಹೆಚ್ಚು ಸಕ್ಕರೆ ಇದೆ. ತೂಕ ಹೆಚ್ಚಳಕ್ಕಾಗಿ ಯಾವಾಗಲೂ ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣುಸೇವಿಸಬೇಕು.ಮಧುಮೇಹ ರೋಗಿಯಾಗಿದ್ದರೆ, ಮಾಗಿದ ಅಥವಾ ಅತಿಯಾಗಿ ಮಾಗಿದ ಬಾಳೆಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಿ, ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆ ಸ್ಪೈಕ್ ಗೆ ಕಾರಣವಾಗಬಹುದು.
undefined
ಬಾಳೆಹಣ್ಣನ್ನು ಸೇವಿಸಲು ಸರಿಯಾದ ಮಾರ್ಗಹಲವಾರು ಜನರು ವ್ಯಾಯಾಮದ ನಂತರದ ಪಾನೀಯವನ್ನು ತಯಾರಿಸಲು ಬಾಳೆಹಣ್ಣನ್ನು ಬಳಸುತ್ತಾರೆ. ಇದು ಕಳೆದುಹೋದ ಶಕ್ತಿಯನ್ನು ಮರುಪೂರಣ ಮಾಡುವುದಲ್ಲದೆ ಆಸೆಗಳನ್ನು ಸಹ ಪೂರೈಸುತ್ತದೆ.
undefined
ಸ್ಮೂಥಿ ತಯಾರಿಸಲು, ಮಾಗಿದ ಬಾಳೆಹಣ್ಣನ್ನು 12 ಕಪ್ ಬಾದಾಮಿ ಹಾಲು, 1 ಟೇಬಲ್ ಚಮಚ ಓಟ್ಸ್, 1 ಟೇಬಲ್ ಚಮಚ ಪೀನಟ್ ಬಟರ್, 1 ಸ್ಕೂಪ್ ವೇ ಪ್ರೋಟೀನ್, 1 ಟೇಬಲ್ ಚಮಚ ಜೇನುತುಪ್ಪ ಮತ್ತು 4 ಖರ್ಜೂರಗಳೊಂದಿಗೆ ಮಿಶ್ರಣ ಮಾಡಬಹುದು. ಇವುಗಳನ್ನು ಕತ್ತರಿಸಿದ ಬೀಜಗಳಿಂದ ಅಲಂಕರಿಸಿ ಮತ್ತು ಈ ರುಚಿಕರವಾದ ಸ್ಮೂಥಿಯನ್ನು ಉಪಾಹಾರಕ್ಕೆ ಅಥವಾ ಸಂಜೆ ಸುಲಭವಾಗಿ ತಿನ್ನಬಹುದು.
undefined
ತೂಕ ಹೆಚ್ಚಳ ಅಥವಾ ತೂಕ ಇಳಿಸಲು ಸಹಾಯ ಮಾಡುವ ಯಾವುದೇ ಆಹಾರ ಪದಾರ್ಥವಿಲ್ಲ. ಗುರಿಯನ್ನು ಸಾಧಿಸಲು, ಒಟ್ಟಾರೆ ಆಹಾರ ಮತ್ತು ವ್ಯಾಯಾಮದ ನಡುವೆ ಸಮತೋಲನವನ್ನು ಸಾಧಿಸಬೇಕು. ಆರೋಗ್ಯಕರ ಆಹಾರ ಪದ್ಧತಿ ಮತ್ತು ತಾಲೀಮು ಹೊಂದಿರುವ ಸರಿಯಾದ ಜೀವನಶೈಲಿ, ತೂಕ ನಷ್ಟ ಮತ್ತು ತೂಕ ಹೆಚ್ಚಳ ಎರಡಕ್ಕೂ ಸಹಕಾರಿ.
undefined
click me!