ಚಿಕ್ಕ ವಯಸಲ್ಲೇ ಅಜ್ಜಿಯಂತೆ ಕಾಣ್ತಿದ್ದೀರಾ? ಈ ತಪ್ಪು ಮಾಡೋದು ಬಿಡಿ

First Published | Mar 2, 2023, 5:19 PM IST

ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಪ್ರತಿಯೊಬ್ಬರೂ ಏನೇನೋ ಮಾಡುತ್ತಾರೆ. ಆದರೆ ಕೆಲವು ಸಹ ಏನಾಗುತ್ತೆ ಎಂದರೆ ಸಣ್ಣ ವಯಸ್ಸಿನಲ್ಲಿಯೇ ಹೆಚ್ಚು ವಯಸ್ಸಾದವರಂತೆ ಕಾಣುವಿರಿ. ಇದಕ್ಕೆ ಕಾರಣ ಏನಿರಬಹುದು ಗೊತ್ತಾ? ನೀವು ರೂಢಿಸಿಕೊಂಡು ಬಂದಿರೋ ತಪ್ಪು ಅಭ್ಯಾಸಗಳೇ ಇದಕ್ಕೆ ಕಾರಣ. ಅವುಗಳ ಬಗ್ಗೆ ತಿಳಿಯೋಣ. 

ಜನರು ಒತ್ತಡದ ಜೀವನವನ್ನು ನಡೆಸಲು ಒಗ್ಗಿಕೊಂಡಿದ್ದಾರೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ತಪ್ಪು ಆಹಾರ ಪದ್ಧತಿ, ಕೆಟ್ಟ ದಿನಚರಿ, ಅತಿಯಾದ ವಿಶ್ರಾಂತಿಯಿಂದಾಗಿ, ಅನೇಕ ರೀತಿಯ ರೋಗಗಳು ಸಹ ಆವರಿಸಿಕೊಂಡು ಬಿಡುತ್ತೆ. ಇದಲ್ಲದೆ, ಜನರು ದೈನಂದಿನ ಜೀವನದಲ್ಲಿ ಇನ್ನೂ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳಿಂದಾಗಿ, ಜನರು ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದವರಂತೆ (looking old in young age) ಕಾಣಲು ಪ್ರಾರಂಭಿಸುತ್ತಾರೆ. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ-

ಅತಿಯಾದ ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ (alcohol): 
ನೀವು ಅತಿಯಾದ ಆಲ್ಕೋಹಾಲ್ ಸೇವಿಸಿದರೆ, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ರೋಗಗಳು ಹುಟ್ಟುತ್ತವೆ. ಇದಕ್ಕಾಗಿ ಅತಿಯಾದ ಆಲ್ಕೋಹಾಲ್ ಸೇವಿಸಬೇಡಿ. ನೀವು ಅತಿಯಾಗಿ ಸೇವಿಸಿದರೆ, ನೀವು ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣಲು ಪ್ರಾರಂಭಿಸುತ್ತೀರಿ.

Tap to resize

ನಿದ್ರೆಯ ಕೊರತೆ (sleeping problem):
ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಾಕಷ್ಟು ನಿದ್ರೆ ಪಡೆಯಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ನೀವು ಪ್ರತಿದಿನ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕಣ್ಣುಗಳ ಕೆಳಗೆ ಕಪ್ಪು ವೃತ್ತಗಳಿಗೆ ಕಾರಣವಾಗುತ್ತದೆ.

ದೈನಂದಿನ ವ್ಯಾಯಾಮ ಅತ್ಯಗತ್ಯ (Physical exercise): 
ದೇಹದಲ್ಲಿ ಹೆಚ್ಚು ಕ್ಯಾಲರಿ ತುಂಬಿಕೊಂಡರೆ ನೀವು ವಯಸ್ಸಾದವರಂತೆ ಕಾಣೋದು ಖಚಿತ. ಹಾಗಾಗಿ ನೀವು ಕ್ಯಾಲೊರಿಗಳನ್ನು ಬರ್ನ್ ಮಾಡದಿದ್ದರೆ, ಅನೇಕ ರೋಗಗಳು ನಿಮ್ಮನ್ನು ಆವರಿಸುತ್ತೆ. ಈ ರೋಗಗಳನ್ನು ತಡೆಗಟ್ಟಲು ದೈನಂದಿನ ವ್ಯಾಯಾಮ ಕಡ್ಡಾಯವಾಗಿದೆ.

ಚಹಾ -ಕಾಫಿಗೆ ನೋ ಎನ್ನಿ (Say no to coffee and Tea) : 
ಚಹಾ ಮತ್ತು ಕಾಫಿಯ ಅತಿಯಾದ ಸೇವನೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದಕ್ಕಾಗಿ ಹೆಚ್ಚು ಚಹಾ ಮತ್ತು ಕಾಫಿ ಸೇವಿಸಬೇಡಿ. ಇದು ಕೆಫೀನ್ ಮತ್ತು ಟ್ಯಾನಿನ್ಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
 

ಸೀಸನಲ್ ಹಣ್ಣು, ತರಕಾರಿ ಸೇವಿಸಿ (Seasonal fruits and vegetables) : 
ಬದಲಾಗುತ್ತಿರುವ ಋತುವಿನಲ್ಲಿ ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸದಿರುವುದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗುವ ಅಪಾಯವಿದೆ. ಇದಕ್ಕಾಗಿ, ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.

ಆರೋಗ್ಯಕರವಾಗಿ ತೂಕ ಇಳಿಸಿ (Healthy weight loss) :
ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಜನರು ಇಂಟರ್ನೆಟ್ ನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರುವ ಡಯಟ್ ಪ್ಲ್ಯಾನ್ ಟ್ರೈ ಮಾಡ್ತಾರೆ. ಇದು ದೇಹದಲ್ಲಿ ಪ್ರೋಟೀನ್ ಕೊರತೆಗೆ ಕಾರಣವಾಗುತ್ತದೆ. ಇದಕ್ಕಾಗಿ, ಆಹಾರ ಯೋಜನೆಯನ್ನು ಮತ್ತೆ ಮತ್ತೆ ಅನುಸರಿಸಬೇಡಿ. ಬದಲಾಗಿ ಆರೋಗ್ಯಯುತ ಆಹಾರ ಸೇವಿಸಿ, ತಜ್ಞರ ಸಲಹೆ ಮೇರೆಗೆ ತೂಕ ಇಳಿಸಿ.

ಸಮತೋಲಿತ ಆಹಾರ ಅತ್ಯಗತ್ಯ (Balanced food): 
ನೀವು ಪ್ರತಿದಿನ ಸಮತೋಲಿತ ಆಹಾರವನ್ನು ತೆಗೆದುಕೊಳ್ಳದಿದ್ದರೆ, ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗುತ್ತೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಚರ್ಮವು ಒಣಗಿದಂತೆ ಕಾಣುತ್ತೆ. ಇದಕ್ಕಾಗಿ, ಪ್ರತಿದಿನ ಸಮತೋಲಿತ ಆಹಾರ ತೆಗೆದುಕೊಳ್ಳಿ.

ಒತ್ತಡ ನಿವಾರಿಸಿ (No stress):
ಇತ್ತೀಚಿನ ದಿನಗಳಲ್ಲಿ ಜನರು ಒತ್ತಡದ ಜೀವನವನ್ನು ನಡೆಸಲು ಒಗ್ಗಿಕೊಂಡಿದ್ದಾರೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಒತ್ತಡವು ಅಧಿಕ ಬಿಪಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಅಧಿಕ ರಕ್ತದೊತ್ತಡವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ, ಒತ್ತಡವನ್ನು ತಪ್ಪಿಸಿ.

Latest Videos

click me!