ಆಯುರ್ವೇದ: ನವದುರ್ಗೆಯರ ಶಕ್ತಿ ಪಡೆದಿರುವ ಒಂಭತ್ತು ಗಿಡಮೂಲಿಕೆಗಳಿವು!!

Suvarna News   | Asianet News
Published : Oct 09, 2021, 12:48 PM IST

ದೇವಿ ದುರ್ಗೆಯನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು, ನೋವು, ದುಃಖ ದೂರಾಗಿ ಸಂತೋಷ, ನೆಮ್ಮದಿಯ ಬದುಕು ಬಾಳಬಹುದು. ನವರಾತ್ರಿಯ ಸಮಯದಲ್ಲಿ ದೇವಿಯ ಈ ಒಂಭತ್ತು ಅವತಾರಗಳಿಂದ ಬದುಕಿನಲ್ಲಿ ನಾವು ಕಲಿಯಬೇಕಾದ ಪಾಠಗಳು ತುಂಬಾನೆ ಇದೆ. ಆದರೆ ನಿಮಗೆ ಗೊತ್ತಾ ಗಿಡಮೂಲಿಕೆಗಳಲ್ಲೂ ಸಹ ನವದುರ್ಗೆಯರ ಶಕ್ತಿ ಅಡಗಿದೆ ಎಂದು. 

PREV
110
ಆಯುರ್ವೇದ: ನವದುರ್ಗೆಯರ ಶಕ್ತಿ ಪಡೆದಿರುವ ಒಂಭತ್ತು ಗಿಡಮೂಲಿಕೆಗಳಿವು!!

ಹೌದು, ಮಾರ್ಕೆಂಡೇಯಾ ಪುರಾಣದಲ್ಲಿ ದುರ್ಗೆಯ ಗುಣಗಳನ್ನು ಹೋಲುವ 9 ಔಷಧೀಯ ಗಿಡಗಳ ಬಗ್ಗೆ ಹೇಳಲಾಗಿದೆ. ಈ ಔಷಧೀಯ ಗಿಡಗಳಿಗೆ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ. ಅವುಗಳ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ. ಯಾವುವು ಆ ಗಿಡ ಮೂಲಿಕೆಗಳು ನೋಡೋಣ... 

210

 ಅಳಲೆ:
ದುರ್ಗೆಯ ಮೊದಲಿನ ರೂಪವಾದ ಶೈಲ ಪುತ್ರಿಯನ್ನು ಅಳಲೆಗೆ (Harad) ಹೋಲಿಸಲಾಗಿದೆ. ಈ ಗಿಡವನ್ನು ಹಿಮಾವತಿ ಎಂದು ಕೂಡ ಕರೆಯಲಾಗುವುದು. ಇದು ಆಯುರ್ವೇದದ ಪ್ರಮುಖ ಔಷಧಿ. ಇದು 7 ಬಗೆಯಲ್ಲಿ ದೊರೆಯುತ್ತದೆ. ಇದರ ಏಳೂ ಬಗೆಯೂ ಒಂದೊಂದು ವಿಶೇಷ ಔಷಧೀಯ ಗುಣವನ್ನು ಹೊಂದಿದೆ.

310

ಬ್ರಾಹ್ಮಿ
ದೇವಿಯ ಎರಡನೇ ಅವತಾರ ಬ್ರಹ್ಮಚಾರಿಣಿ. ಬ್ರಾಹ್ಮಿ ಗಿಡಮೂಲಿಕೆ ಕೂಡ ಆಕೆಯಲ್ಲಿರುವ ಗುಣವನ್ನು ಹೊಂದಿದೆ. ಈ ಗಿಡಮೂಲಿಕೆ ದೇಹದಲ್ಲಿ ರಕ್ತಸಂಚಾರವನ್ನು (blood circulation) ಉತ್ತಮವಾಗಿ ಇಟ್ಟುಕೊಳ್ಳುತ್ತದೆ, ನೆನಪಿನ ಶಕ್ತಿ (memory power) ಹೆಚ್ಚಿಸುತ್ತದೆ,  ಅಲ್ಲದೆ ಧ್ವನಿ ಮೃದುವಾಗಲು ಇದನ್ನು ಬಳಸುತ್ತಾರೆ. ಸಂಗೀತಗಾರರು ಇದನ್ನು ತಿನ್ನುವುದರಿಂದ ಅವರ ಧ್ವನಿ ಮತ್ತಷ್ಟು ಮಧುರವಾಗುವುದು.

410

ಚಂದ್ರಾಸುರ
ಮೂರನೇ ದಿನ ಚಂದ್ರಘಂಟ ದೇವಿಯನ್ನು ಆರಾಧಿಸಲಾಗುವುದು. ಚಂದ್ರಾಸುರ ಅಥವಾ ಚಾಮಾಸುರ ಎಂಬ ಗಿಡ ಔಷಧೀಯ ಗುಣವನ್ನು ಹೊಂದಿದ್ದು, ಇದರ ಎಲೆಯನ್ನು ಸಾರು ಮಾಡಲಾಗುವುದು. ಇನ್ನು ಒಬೆಸಿಟಿ ಸಮಸ್ಯೆ (obesity problem) ಕಡಿಮೆ ಮಾಡಲು ಇದನ್ನು ಬಳಸಲಾಗುವುದು.

510

ಕುಂಹಾರ
ಕೂಷ್ಮಾಂಡ ದೇವಿಯ ಹೆಸರಿನಲ್ಲಿರುವ ಗಿಡ ಮೂಲಿಕೆ ಇದಾಗಿದೆ. ಇದನ್ನು ತಿನ್ನುವುದರಿಂದ ದೇಹ ಬಲವಾಗುವುದು. ಜೊತೆಗೆ ಪುರುಷರಲ್ಲಿ ವೀರ್ಯಾಣು (Sperm)  ಹೆಚ್ಚಿಸುವುದು. ಅಲ್ಲದೇ ಹೊಟ್ಟೆಯನ್ನು ಶುದ್ಧವಾಗಿಸುತ್ತೆ, ಮಾನಸಿಕ ಸ್ವಾಸ್ಥ್ಯ (Mental Health) ಹೆಚ್ಚಿಸುವುದು, ಅಲ್ಲದೆ ಹೃದ್ರೋಗಿಗಳಿಗೂ ತುಂಬಾನೇ ಒಳ್ಳೆಯದು.

610

ಫ್ಲ್ಯಾಕ್ಸ್ ಸೀಡ್ ಅಥವಾ ಅಗಸೆ ಬೀಜ (flax seeds)
ಔಷಧೀಯ ಗುಣವಿರುವ ಈ ಬೀಜವನ್ನು ಸ್ಕಂದ ಮಾತೆಗೆ ಹೋಲಿಸಲಾಗಿದೆ. ಇದನ್ನು ತಿನ್ನುವುದರಿಂದ ವಾತ, ಪಿತ್ತ, ಕಫ (Cough) ಇಂಥ ಸಮಸ್ಯೆ ದೂರಾಗುವುದು. ಇದನ್ನು ಯಾವುದೇ ಆಹಾರಗಳ ಜೊತೆ ಸೇರಿಸಿ ತಿನ್ನಬಹುದು. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಆಹಾರವಾಗಿದೆ. 

710

ಅಂಬಳಿಕಾ/ಅಂಬಿಕಾ
ಇದನ್ನು ಮಾತಾ ಕಾತ್ಯಾಯನಿಗೆ ಹೋಲಿಸಲಾಗಿದೆ. ಇದು ಹೊಟ್ಟೆಯಲ್ಲಿರುವ ಸಮಸ್ಯೆ, (Stomach problem) ಗಂಟಲಿನ ಸಮಸ್ಯೆ (Throat problem) ಹೋಗಲಾಡಿಸುವ ಗುಣವನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. 

810

ನಾಗ್ದನ್‌ (wormwood/Nagdaun)
ಔಷಧಿಯನ್ನು ಕಾಳರಾತ್ರಿಗೆ ಹೋಲಿಸಲಾಗಿದೆ. ಹೇಗೆ ಕಾಳರಾತ್ರಿ ಎಲ್ಲಾ ತೊಂದರೆಗಳನ್ನು ನೀಗಿಸುತ್ತಾಳೋ, ಅದೇ ರೀತಿ ನಾಗ್ದಾನ್ ಎಲ್ಲಾ ಬಗೆಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಯನ್ನು ಹೋಗಲಾಡಿಸುವುದು. ಇದಕ್ಕೆ ದೇಹದಲ್ಲಿರುವ ವಿಷವನ್ನು ತೆಗೆಯುವ ಸಾಮರ್ಥ್ಯ ಕೂಡ ಇದೆ.

910

ತುಳಸಿ (Tulsi/Basil Leaves)
ತುಳಸಿಯನ್ನು ಆಯುರ್ವೇದದಲ್ಲಿ ಮಹಾಗೌರಿಗೆ ಹೋಲಿಸಲಾಗಿದೆ. ಇದು ಕಫಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಹೋಲಾಡಿಸುವುದು. ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ. ಕೆಮ್ಮು, ಶೀತ ಮೊದಲಾದ ಸಮಸ್ಯೆ ಕಾಣಿಸಿಕೊಂಡರೆ ತುಳಸಿ ರಸ ಸೇವನೆ ಮಾಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. 

1010

ಶತಾವರಿ (Shatavari)
ಶತಾವರಿಯನ್ನು ಸಿದ್ಧಿಧಾತ್ರಿಗೆ ಹೋಲಿಸಲಾಗಿದೆ. ಇದು ಮಾನಸಿಕ ಸ್ವಾಸ್ಥ್ಯ ಹೆಚ್ಚಿಸುತ್ತದೆ. ಪುರುಷರಲ್ಲಿ ವೀರ್ಯಾಣುಗಳ (Sperms) ವೃದ್ಧಿಗೆ ಸಹಕಾರಿ. ಇದನ್ನು ದಿನಾ ತಿಂದರೆ ರಕ್ತ ಶುದ್ಧವಾಗುವುದು (Blood Purification). ಇದು ಗರ್ಭಧಾರಣೆಗೂ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

click me!

Recommended Stories