Natural Medicine For Diabetes : ಮಧುಮೇಹಿಗಳು ಅಲೋವೆರಾ ಜೊತೆ ಇದನ್ನು ಸೇವಿಸೋದ್ರಿಂದ ಇದೆ ಲಾಭ

First Published | Dec 23, 2021, 1:19 PM IST

ಮಧುಮೇಹ (diabetes) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಬೇರೆ ಬೇರೆ ಟ್ರೀಟ್ಮೆಂಟ್ ನೀಡಲಾಗುತ್ತದೆ. ಆದರೆ ಅದರ ಜೊತೆಗೆ ಕೆಲವೊಂದು ಆಯುರ್ವೇದ ಔಷಧಿ ಸೇವನೆ ಮಾಡುವುದು ಉತ್ತಮ. ಮಧುಮೇಹ ರೋಗಿಗಳು ಅಲೋವೆರಾದೊಂದಿಗೆ  ಈ ವಸ್ತುಗಳನ್ನು ಮಿಶ್ರಣ ಮಾಡಿ ತಿನ್ನಬೇಕು. ಆಗ ರಕ್ತದಲ್ಲಿನ ಸಕ್ಕರೆ ಯಾವಾಗಲೂ ನಿಯಂತ್ರಣದಲ್ಲಿರುತ್ತದೆ!

ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು (blood sugar level) ಮಧುಮೇಹಿಗಳಿಗೆ ಅಪಾಯಕಾರಿಯಾಗಬಹುದು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು, ಆದ್ದರಿಂದ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮುಖ್ಯ. 

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ನೀವು ಔಷಧಿಗಳ ಜೊತೆಗೆ ಕೆಲವು ಮನೆಮದ್ದುಗಳನ್ನು ಸಹ ಅಳವಡಿಸಿಕೊಳ್ಳಬಹುದು. ಇದು ತಕ್ಷಣಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಆರೋಗ್ಯಕ್ಕೆ ಯಾವುದೇ ದುಷ್ಪರಿಣಾಮ ಕೂಡ ಉಂಟಾಗುವುದಿಲ್ಲ. ಹಾಗಾದರೆ ಮಧುಮೇಹಿಗಳು ಇದನ್ನು ಹೇಗೆ ಬಳಕೆ ಮಾಡಬಹುದು ನೋಡೋಣ..

Tap to resize

ತಜ್ಞರ ಪ್ರಕಾರ ನೆಲ್ಲಿಕಾಯಿ ಮತ್ತು ಅಲೋವೆರಾ (alovera) ಎಂಬ ಎರಡು ವಸ್ತುಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿದರೆ ಮಧುಮೇಹದ ಸಮಸ್ಯೆಯಲ್ಲಿ ನಿಮಗೆ ಪ್ರಯೋಜನಕಾರಿಯಾಗುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ನೆಲ್ಲಿಕಾಯಿ ಮತ್ತು ಅಲೋವೆರಾದ ಸೇವನೆಯು ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸುವಲ್ಲಿ ಮತ್ತು ಹೃದಯ, ಮೂತ್ರಪಿಂಡ ಮತ್ತು ಯಕೃತ್ತನ್ನು ಆರೋಗ್ಯಕರವಾಗಿಡಲು ಪರಿಣಾಮಕಾರಿಯಾಗಿದೆ. ಯಾವ ರೀತಿಯಲ್ಲಿ ಇವು ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ನೋಡೋಣ. 

ನೆಲ್ಲಿಕಾಯಿ (gooseberry) ಸೇವನೆಯ ಪ್ರಯೋಜನಗಳು
ಆಮ್ಲಾ ಸೇವನೆಯು ಇನ್ಸುಲಿನ್ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ರೀತಿಯಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. 

ನೆಲ್ಲಿಕಾಯಿ ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಆಮ್ಲಾದಲ್ಲಿ ಪಾಲಿಫಿನಾಲ್ ಗಳಿವೆ, ಅದು ಅಧಿಕ ಬ್ಲಡ್ ಶುಗರ್ ನಿಂದ ಉಂಟಾಗುವ ಉತ್ಕರ್ಷಣ ಒತ್ತಡದಿಂದ ದೇಹವನ್ನು ರಕ್ಷಿಸುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ದೇಹವನ್ನು ರಕ್ತದೊತ್ತಡ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. 
 

ಅಲೋವೆರಾದ ಪ್ರಯೋಜನಗಳು (benefits of alovera)
ಅಲೋವೆರಾದಲ್ಲಿ ಅಸೆಮನ್ನನ್ ಎಂಬ ಧಾತುವಿದೆ. ಇದು ಹೈಪೋಗ್ಲೈಸೆಮಿಕ್ ಅಂದರೆ ಇದು ಗ್ಲುಕೋಸ್ ಕಡಿಮೆ ಮಾಡುವ ಪರಿಣಾಮವನ್ನು ಹೊಂದಿದೆ. ಅಲೋವೆರಾದಲ್ಲಿ ಹೈಡ್ರೋಫಿಲಿಕ್ ಫೈಬರ್, ಗ್ಲುಕೊಮಾನಾನ್ ಮತ್ತು ಫೈಟೋಸ್ಟೆರಾಲ್ ನಂತಹ ಅನೇಕ ಸಂಯುಕ್ತಗಳಿವೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ ಮತ್ತು ಅಲೋವೆರಾ ಸಂಯೋಜನೆ
ನೆಲ್ಲಿಕಾಯಿ ಪುಡಿ (amla powder) ಮತ್ತು ಅಲೋವೆರಾ ಎರಡನ್ನೂ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. 

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ರಸವನ್ನು ಸೇವಿಸುವುದರಿಂದಲೂ ಸಹ ನಿಮಗೆ ಲಾಭವಾಗುತ್ತದೆ, ಆದರೆ ಇದನ್ನು ಹೆಚ್ಚು ಕುಡಿಯಬೇಡಿ. ಇದಕ್ಕೆ ಸ್ವಲ್ಪ ನೆಲ್ಲಿಕಾಯಿ ರಸವನ್ನು ಸೇರಿಸಿ ನಿಯಮಿತವಾಗಿ ಸೇವಿಸಿ. ಹೆಚ್ಚು ಸೇವಿಸಿದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ. 

Latest Videos

click me!