ಮೊಡವೆಗಳು:ಅಲೋವೆರಾದಲ್ಲಿ ಅಲರ್ಜಿ ವಿರೋಧಿ ಮತ್ತು ಬೆಳವಣಿಗೆ ವಿರೋಧಿ ಗುಣಗಳಿವೆ. ಆದ್ದರಿಂದ, ಅಲೋವೆರಾ ಜ್ಯೂಸ್ ಕುಡಿಯೋದ್ರಿಂದ, ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಮತ್ತು ಮೊಡವೆಯಿಂದ ಉಂಟಾಗುವ ನೋವು ಮತ್ತು ಕಿರಿಕಿರಿಯಿಂದ ಪರಿಹಾರ ಸಿಗುತ್ತದೆ. ಇದು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ತೂಕ ಇಳಿಸಲು ಸಹಾಯ ಮಾಡುತ್ತೆ:
ಅಲೋವೆರಾ ಜ್ಯೂಸ್ ತೂಕ ಇಳಿಸಲು ತುಂಬಾನೇ ಸಹಾಯ ಮಾಡುತ್ತೆ. ನೀವು ಸ್ವಲ್ಪ ನಿಂಬೆ ರಸವನ್ನು ಅಲೋವೆರಾ ಜ್ಯೂಸ್ ಜೊತೆ ಮಿಕ್ಸ್ ಮಾಡಿ ಕುಡಿದ್ರೆ, ಬೊಜ್ಜು ಕಡಿಮೆ ಆಗುತ್ತೆ.