ಇನ್ನೊಂದು ದಿನದಲ್ಲಿ ಹೊಸ ವರ್ಷ ಬರಲಿದೆ. ಹೊಸ ವರ್ಷ ಅಂದ್ರೆ ಹೊಸ ವಿಷಯಗಳೇ ನೆನಪಿಗೆ ಬರುತ್ತವೆ. ಹೊಸ ಸಂಕಲ್ಪಗಳು, ಹೊಸ ಹವ್ಯಾಸಗಳು, ಹೀಗೆ ಬದುಕನ್ನು ಬದಲಾಯಿಸಲು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊಸ ವರ್ಷ ಒಳ್ಳೆಯ ಅವಕಾಶ. ಸಕಾರಾತ್ಮಕ ವಿಷಯಗಳನ್ನು ಮಾಡುವುದರಿಂದ ಬದುಕಿನಲ್ಲಿ ಒಳ್ಳೆಯ ಪರಿಣಾಮಗಳನ್ನು ಕಾಣಬಹುದು. ಹೊಸ ವಿಷಯಗಳನ್ನು ಶುರುಮಾಡಲು ಸೂಕ್ತವಾದ ಹೊಸ ವರ್ಷದಲ್ಲಿ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಂಡರೆ ಡಬಲ್ ಫಲ ಸಿಗುತ್ತದೆ.
25
2025ರ ಆರೋಗ್ಯಕರ ಸಂಕಲ್ಪಗಳು
ಹೊಸ ವರ್ಷದಲ್ಲಿ ಸಮಯವನ್ನು ಜಾಗರೂಕತೆಯಿಂದ ಬಳಸುವುದು, ಒಳ್ಳೆಯ ಆಹಾರ ಪದ್ಧತಿ, ವ್ಯಾಯಾಮ, ಯೋಗ ಮುಂತಾದ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಯಾವ ಹವ್ಯಾಸಗಳನ್ನು ಹೇಗೆ ಪಾಲಿಸಿದರೆ ಬದುಕಿನಲ್ಲಿ ಬದಲಾವಣೆಗಳನ್ನು ತರಬಹುದು ಎಂದು ಇಲ್ಲಿ ನೋಡೋಣ.
35
2025ರ ಆರೋಗ್ಯ ಮತ್ತು ಸಲಹೆಗಳು
ಸ್ಕ್ರೀನ್ ಟೈಮ್ ಮ್ಯಾನೇಜ್ಮೆಂಟ್:
ನೀವು ಮೊಬೈಲ್, ಕಂಪ್ಯೂಟರ್ ಇತ್ಯಾದಿಗಳನ್ನು ಹೆಚ್ಚು ಸಮಯ ಮನರಂಜನೆಗಾಗಿ ಬಳಸುತ್ತಿದ್ದರೆ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಸ್ಕ್ರೀನ್ ಟೈಮ್ ಹೆಚ್ಚಾದರೆ ಉಪಯುಕ್ತ ಕೆಲಸಗಳಿಗೆ ಸಮಯ ಸಿಗುವುದಿಲ್ಲ. ರಾತ್ರಿ ಮಲಗುವ ಕನಿಷ್ಠ 30 ನಿಮಿಷಗಳ ಮೊದಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಗಮನ ಚದುರುವುದಿಲ್ಲ. ಆಳವಾದ ನಿದ್ದೆ ಸಿಗುತ್ತದೆ.
ಆಹಾರ ಪದ್ಧತಿ:
ನೀವು ಹೊರಗಡೆ ತಿನ್ನುವವರಾಗಿದ್ದರೆ ಮನೆಯಲ್ಲಿ ಮಾಡಿದ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಫಾಸ್ಟ್ ಫುಡ್ ತಿನ್ನುವುದನ್ನು ಕಡಿಮೆ ಮಾಡಿ ಆರೋಗ್ಯಕರ ಆಹಾರವನ್ನು ಸೇವಿಸಿ. ಒಳ್ಳೆಯ ಆಹಾರ ಪದ್ಧತಿ ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆರೋಗ್ಯವಂತರು ಸಂತೋಷವಾಗಿರುತ್ತಾರೆ. ಹಾಗಾಗಿ ಪ್ರೊಸೆಸ್ಡ್ ಜಂಕ್ ಫುಡ್, ಫಾಸ್ಟ್ ಫುಡ್‌ಗಳಿಂದ ದೂರವಿರಿ.
45
2025ರ ಆರೋಗ್ಯಕರ ಹವ್ಯಾಸಗಳು
ಒತ್ತಡ ಕಡಿಮೆ ಮಾಡಲು!
ಒತ್ತಡರಹಿತ ಜೀವನ ನಡೆಸುವುದು ಬಹಳ ಮುಖ್ಯ. ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು, ಮನಸ್ಸನ್ನು ಶಾಂತವಾಗಿಡಲು ಪ್ರತಿದಿನ ಯೋಗ, ಧ್ಯಾನ ಮಾಡಿ. ನಿಮ್ಮ ಬದುಕಿನ ಬಗ್ಗೆ ಕೃತಜ್ಞತೆ ಸೆಳೆಯಲು ಪ್ರತಿದಿನ ಡೈರಿ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ.
ಸ್ನೇಹಿತರ ಭೇಟಿ:
ನಿಮ್ಮ ಒಳಿತನ್ನು ಬಯಸುವ ಸ್ನೇಹಿತರನ್ನು ನಿಮ್ಮ ಸುತ್ತಲೂ ಇಟ್ಟುಕೊಳ್ಳಿ. ವರ್ಷಕ್ಕೊಮ್ಮೆ ಸ್ನೇಹಿತರನ್ನು ಭೇಟಿಯಾಗುವ ಬದಲು ಆಗಾಗ್ಗೆ ಭೇಟಿಯಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ.
55
ಆರೋಗ್ಯಕರ ದೇಹಕ್ಕೆ ಹೊಸ ವರ್ಷದ ಸಂಕಲ್ಪಗಳು
ದೀರ್ಘ ನಿದ್ದೆ:
ಒಳ್ಳೆಯ ನಿದ್ದೆ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಮುಖ್ಯ ಪಾತ್ರ ವಹಿಸುತ್ತದೆ. ಚೆನ್ನಾಗಿ ನಿದ್ದೆ ಮಾಡುವವರ ಒತ್ತಡ ಕಡಿಮೆಯಾಗಿರುತ್ತದೆ. ಅವರು ಸಂತೋಷವಾಗಿರುತ್ತಾರೆ. ಚೈತನ್ಯದಿಂದಿರಲು ರಾತ್ರಿ ಚೆನ್ನಾಗಿ ನಿದ್ದೆ ಮಾಡುವುದು ಅವಶ್ಯಕ. ಹಾಗಾಗಿ ಸ್ಕ್ರೀನ್ ಟೈಮ್ ಕಡಿಮೆ ಮಾಡಿ ಬೇಗ ಮಲಗುವುದು ಒಳ್ಳೆಯದು. ಈ ಹವ್ಯಾಸವನ್ನು ಹೊಸ ವರ್ಷದಿಂದ ರೂಢಿಸಿಕೊಳ್ಳಿ.