ಜಾತಕ ಬಿಡಿ, ಮದುವೆಗೂ ಮುನ್ನ ಈ 4 ಮೆಡಿಕಲ್ ಟೆಸ್ಟ್ ತಪ್ಪದೇ ಮಾಡಿಸಿ!

Published : Mar 09, 2021, 04:05 PM IST

ಭಾರತದಲ್ಲಿ ಮದುವೆ ಸೀಜನ್ ಬರಲು ಇನ್ನು ಕೆಲವೇ ಸಮಯ ಬಾಕಿ. ಈಗಾಗಲೇ ಕೆಲ ಕಡೆ ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದು, ಏಪ್ರಿಲ್‌ನಲ್ಲಿ ಎಲ್ಲೆಡೆ ಈ ಸಂಭ್ರಮ ಕಂಡು ಬರಲಿದೆ. ಈ ನಿಟ್ಟಿನಲ್ಲಿ ಅನೇಕ ಕಡೆ ಸಿದ್ಧತೆಯೂ ಆರಂಭವಾಗಿದೆ. ಆದರೆ ಈ ಎಲ್ಲಾ ಸಿದ್ಧತೆಗಳ ನಡುವೆ ಯಾರೂ ಒಂದು ವಿಚಾರದ ಕಡೆ ಗಮನವೇ ಹರಿಸುತ್ತಿಲ್ಲ. ಅದುವೇ ಯುವಕ, ಯುವತಿಯ ಮೆಡಿಕಲ್ ಟೆಸ್ಟ್. ಹೌದು ಯುವಕ, ಯುವತಿ ಮದುವೆಗೂ ಮುನ್ನ ಅಗತ್ಯವಾಗಿ ಕೆಲ ಟೆಸ್ಟ್‌ಗಳನ್ನು ಮಾಡಿಸಲೇಬೇಕು. ಇಲ್ಲವೆಂದಾದರೆ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

PREV
16
ಜಾತಕ ಬಿಡಿ, ಮದುವೆಗೂ ಮುನ್ನ ಈ 4 ಮೆಡಿಕಲ್ ಟೆಸ್ಟ್ ತಪ್ಪದೇ ಮಾಡಿಸಿ!

ಭಾರತದಲ್ಲಿ ಮದುವೆಗೂ ಮುನ್ನ ಹುಡುಗ, ಹುಡುಗಿಯ ಜಾತಕ ನೋಡುವ ಸಂಪ್ರದಾಯವಿದೆ. ಆದರೆ ಅದಕ್ಕೂ ಮುಖ್ಯವಾದ ವಿಚಾರವೊಂಣದನ್ನು ಜನರು ಮರೆಯುತ್ತಿದ್ದಾರೆ. ಈ ಜಾತಕಕ್ಕಿಂತಲೂ ಯುವಕ, ಯುವತಿಯ ಆರೋಗ್ಯ ಮುಖ್ಯ. ಇಬ್ಬರೂ ಆರೋಗ್ಯವಂತರಾಗಿದ್ದರೆ ಅವರ ವೈವಾಹಿಕ ಬದುಕು ಯಾವುದೇ ಸಮಸ್ಯೆ ಇಲ್ಲದೆ ಸಾಗುತ್ತದೆ.

26

ಮದುವೆಗೂ ಮುನ್ನ ಈ ನಾಲ್ಕು ಮೆಡಿಕಲ್ ಟೆಸ್ಟ್‌ಗಳನ್ನು ಮಾಡಿಸುವುದು ಅತೀ ಅಗತ್ಯ. ಇದರಿಂದ ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.
 
36

ಇದರಲ್ಲಿ Infertility test ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಯುವಕ ಯುವತಿಯ ಸಂತಾನೋತ್ಪತ್ತಿ ಅಂಗ ಹಾಗೂ ವೀರ್ಯಾಣುಗಳ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ. ಈ ಟೆಸ್ಟ್ ಮಾಡಿಸಿದರೆ ಮುಂದೆ ಬೇಬಿ ಪ್ಲಾನಿಂಗ್‌ನಲ್ಲಿ ಯಾವುದೇ ಸಮಸ್ಯೆ ತಲೆದೋರುವುದಿಲ್ಲ.

46

ಇದಾದ ಬಳಿಕ Blood group compatibility test ಮಾಡಿಸಿ. ಇದರಿಂದ ನಿಮ್ಮ ಹಾಗೂ ನಿಮ್ಮ ಸಂಗಾತಿಯ ಆರ್‌ಎಚ್‌ ಫ್ಯಾಕ್ಟರ್‌ ಪರಿಶೀಲಿಸಲಾಗುತ್ತದೆ. ಮಗುವಾಗುವಾಗ ಯುವಕ ಹಾಗೂ ಯುವತಿ ಇಬ್ಬರ ಆರ್‌ಎಚ್‌ ಫ್ಯಾಕ್ಟರ್ ಒಂದೇ ಆಗಿರಬೇಕು. ರಕ್ತದ ಗುಂಪು ಹೊಂದಿಕೆಯಾಗದಿದ್ದರೆ ಮಗುವಿಗೆ ಸಮಸ್ಯೆಗಳುಂಟಾಗುತ್ತವೆ.

56

ಮದುವೆಗೂ ಮುನ್ನ Genetically transmitted conditions test ಕೂಡಾ ಮಾಡಿಸಬೇಕು. ಆನುವಂಶಿಕತೆಯು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗವಾಗುತ್ತದೆ. ಹೀಗಿರುವಾಗ ಈ ಟೆಸ್ಟ್‌ನಿಂದ ಇಬ್ಬರಲ್ಲಿ ತಮ್ಮಿಂದ ಮತ್ತೊಂದು ಪೀಳಿಗೆಗೆ ಹರಡುವ ರೋಗವಿದೆಯೋ, ಇಲ್ಲವೋ ಎಂಬುವುದು ತಿಳಿಯುತ್ತದೆ.
 
66

ಕೊನೆಯದಾಗಿ ಮದುವೆಗೂ ಮುನ್ನ ಎಸ್‌ಟಿಡಿ ಟೆಸ್ಟ್‌ ಕೂಡಾ ಮಾಡಿಸಿ. ಯುಕ, ಯುವತಿ ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಎಸ್‌ಟಿಡಿ ಇದ್ದರೂ ತಿಳಿಯುತ್ತದೆ. ಒಂದು ವೇಳೆ ಮದುವೆಯಾದ ಬಳಿಕ ಈ ಸಮಸ್ಯೆ ಇರುವುದು ತಿಳಿದು ಬಂದರೆ ಬಹಳ ಸಮಸ್ಯೆಯುಂಟಾಗುತ್ತದೆ.  

click me!

Recommended Stories