ಬೇಸಿಗೆಯಲ್ಲಿ ಪುರುಷರು ಈ ಹಣ್ಣನ್ನು ಮಿಸ್ ಮಾಡದೆ ತಿನ್ನಿ

First Published | Mar 7, 2021, 3:39 PM IST

ಬೇಸಿಗೆಯಲ್ಲಿ ಪುರುಷರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಏಕೆಂದರೆ ಇಂದಿನ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಸೇವಿಸುವಂತಹ ಹಣ್ಣಿನ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಇವು ಪುರುಷರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅಷ್ಟೇ ಅಲ್ಲ, ಈ ಹಣ್ಣನ್ನು ತಿನ್ನುವ ಮೂಲಕ ಹಲವಾರು ರೋಗಗಳಿಂದ ದೂರವಿರುತ್ತೀರಿ.  ಸ್ಟ್ರಾಬೆರಿ ಗಳ ಬಗ್ಗೆ ಹೇಳುತ್ತಿದ್ದೇವೆ. ಹೌದು, ಬೇಸಿಗೆಯ ಕಾಲದಲ್ಲಿ ಪುರುಷರು ಸ್ಟ್ರಾಬೆರಿಯನ್ನು ಸೇವಿಸಬೇಕು. 

ಸ್ಟ್ರಾಬೆರಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ :ಸ್ಟ್ರಾಬೆರಿ ಗಳನ್ನು ತಿನ್ನುವ ಮೂಲಕ ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ವೈಜ್ಞಾನಿಕ ಅಧ್ಯಯನದಲ್ಲೂ ಸಾಬೀತಾಗಿದೆ. ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಪುರುಷರು ಸ್ಟ್ರಾಬೆರಿ ತಿನ್ನಬೇಕೆಂದು ಸಲಹೆ ನೀಡಲಾಗುತ್ತದೆ.
undefined
ಕ್ಯಾನ್ಸರ್ ನಂತಹ ಕಾಯಿಲೆಯಿಂದ ಸುರಕ್ಷಿತ ಜೀವನ:ಸ್ಟ್ರಾಬೆರಿಗಳನ್ನು ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ರಕ್ಷಿಸಿಕೊಳ್ಳಬಹುದು. ವಾಸ್ತವವಾಗಿ, ಸ್ಟ್ರಾಬೆರಿಗಳಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಗುಣಗಳಿವೆ. ಆದ್ದರಿಂದ ಇದನ್ನು ಅತ್ಯಂತ ಲಾಭದಾಯಕ ಹಣ್ಣು ಎಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಪುರುಷರು ಸ್ಟ್ರಾಬೆರಿಯನ್ನು ತಿನ್ನಬೇಕೆಂದು ಹೇಳಲಾಗಿದೆ. ಏಕೆಂದರೆ ಸ್ಟ್ರಾಬೆರಿಗಳು ಕ್ಯಾನ್ಸರ್ ನಂತಹ ದೊಡ್ಡ ರೋಗದಿಂದ ರಕ್ಷಿಸುತ್ತವೆ.
undefined

Latest Videos


ಸ್ಟ್ರಾಬೆರಿಯಿಂದ ಒತ್ತಡ ದೂರ:ಪುರುಷರಲ್ಲಿ ಒತ್ತಡವು ವೇಗವಾಗಿ ಹೆಚ್ಚುತ್ತಿದೆ. ಒತ್ತಡ ಒಂದು ರೋಗವಾಗಿ ಮಾರ್ಪಡುತ್ತಿದೆ. ಆದರೆ ಸ್ಟ್ರಾಬೆರಿಗಳನ್ನು ಬಳಸುವುದರಿಂದ ಒತ್ತಡ ಹೆಚ್ಚಾಗುವುದಿಲ್ಲ ಎಂಬುದು ತಿಳಿದಿದೆಯೇ?
undefined
ಸ್ಟ್ರಾಬೆರಿಯಲ್ಲಿ ಒತ್ತಡ ಕಡಿಮೆ ಮಾಡಲು ವಿಶೇಷ ಗುಣಗಳಿವೆ. ಆದ್ದರಿಂದ ಪುರುಷರು ತಮ್ಮ ಒತ್ತಡವನ್ನು ಕಡಿಮೆ ಮಾಡಲು ಸ್ಟ್ರಾಬೆರಿಯನ್ನು ಸೇವಿಸಬೇಕು. ಇದರಿಂದ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ.
undefined
ಹೃದಯ ಸಮಸ್ಯೆ :ಹೃದಯದ ಸಮಸ್ಯೆಯಿಂದ ಸುರಕ್ಷಿತವಾಗಿರಿಸಲು ನಿಯಮಿತವಾಗಿ ಸ್ಟ್ರಾಬೆರಿಗಳನ್ನು ಬಳಸಬೇಕು. ಏಕೆಂದರೆ ಸ್ಟ್ರಾಬೆರಿಗಳನ್ನು ತಿನ್ನುವುದರಿಂದ ಹೃದಯ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.
undefined
ಇದು ಹೃದಯ ಸಂಬಂಧಿ ತೊಂದರೆಗಳನ್ನು ಉಂಟುಮಾಡುವುದಿಲ್ಲ. ನಿಯಮಿತವಾಗಿ ಸ್ಟ್ರಾಬೆರಿಗಳನ್ನು ಬಳಸಿದರೆ, ಹಲವಾರು ರೋಗಗಳಿಂದ ಸುರಕ್ಷಿತವಾಗಿರಬಹುದು.
undefined
ಕೊಲೆಸ್ಟರಾಲ್ ಮಟ್ಟ ಕಡಿಮೆಯಾಗುತ್ತದೆ :ಸ್ಟ್ರಾಬೆರಿಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತವೆ. ಸ್ಟ್ರಾಬೆರಿಯಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಪರಿಣಾಮಕಾರಿ ಗುಣಗಳಿವೆ.
undefined
ಕೊಲೆಸ್ಟ್ರಾಲ್ ಮಟ್ಟ ಏರಿಕೆಯಿಂದ ಮನುಷ್ಯ ತಲೆ ಕೆಡಿಸಿಕೊಳ್ಳುತ್ತಿದ್ದರೆ ಸ್ಟ್ರಾಬೆರಿಗಳನ್ನು ಬಳಸಿ ಸುರಕ್ಷಿತವಾಗಿರಿ.
undefined
ದೇಹಕ್ಕೆ ಶಕ್ತಿ :ಬೇಸಿಗೆಯಲ್ಲಿ ಪುರುಷರು ಸ್ಟ್ರಾಬೆರಿಯನ್ನು ಬಳಸುವಂತೆ ಸಲಹೆ ನೀಡಲಾಗುತ್ತದೆ ಏಕೆಂದರೆ ಇದು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಸ್ಟ್ರಾಬೆರಿಗಳ ಬಳಕೆಯಿಂದ ದೇಹದಲ್ಲಿ ಶಕ್ತಿ ಹೆಚ್ಚುವ ಶಕ್ತಿ ಇರುತ್ತದೆ.
undefined
click me!