ಹೊಸ ವರ್ಷಕ್ಕೆ ಈ 10 ವಿಷಯಗಳನ್ನು ಮಿಸ್ ಮಾಡದೆ ಪಾಲಿಸಿ, ಆರೋಗ್ಯದಿಂದಿರಿ...

First Published | Dec 28, 2020, 6:53 PM IST

ಆರೋಗ್ಯವೇ ದೊಡ್ಡ ಸಂಪತ್ತು. ನಮ್ಮ ಹಿರಿಯರ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ, ಆದರೆ ಆರೋಗ್ಯವನ್ನು ಕಾಪಾಡುವ ಬಗ್ಗೆ ನಾವು ಹೆಚ್ಚು ತಲೆ ಕೆಡಿಸುವುದಿಲ್ಲ.  ಬದಲಾಗುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಒತ್ತಡ ನಮ್ಮನ್ನು ಕಾಲಕ್ಕಿಂತ ಮೊದಲೇ ಗಂಭೀರ ಕಾಯಿಲೆಗಳಿಗೆ ಗುರಿ ಮಾಡುತ್ತದೆ. ನಾವು ನಗರ ಪರಿಸರದಲ್ಲಿ ಜೀವಿಸುತ್ತೇವೆ. ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಿಕ್ಕ ಮಕ್ಕಳು ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಬೊಜ್ಜು ಎಂಬುದು ಜನರಿಗೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಈ ಎಲ್ಲ ತೊಂದರೆಗಳಿಗೆ ಬೇರೆ ಯಾರೂ ಜವಾಬ್ದಾರರಲ್ಲ. ನಾವೇ ಜವಾಬ್ದಾರರು. 

ಆರೋಗ್ಯವಾಗಿರಬೇಕಾದರೆ, ಸಮಯವನ್ನು ನೀಡಬೇಕು ಮತ್ತು ಆರೋಗ್ಯಕರ ಜೀವನ ನಡೆಸುವ ಕೆಲವು ಗುಣಗಳನ್ನು ಕಲಿಯಬೇಕಾಗುತ್ತದೆ. ಸದಾ ಆರೋಗ್ಯವಾಗಿಡಬಲ್ಲ ಆರೋಗ್ಯಕರ ಜೀವನಶೈಲಿಯ ಗುಣ ಯಾವುದು?
1.ಮುಂಜಾನೆಯ ಸೂರ್ಯೋದಯ ನೋಡಿಸೂರ್ಯೋದಯವನ್ನು ನೋಡುವವನು ಜೀವನಪೂರ್ತಿ ಸಂತೋಷವಾಗಿದ್ದಾನೆ. ನೀವು ತಡವಾಗಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ಈ ಅಭ್ಯಾಸವನ್ನು ಬದಲಿಸಿ. ಬೆಳಗ್ಗೆ ಬೇಗ ಎದ್ದು ದಿನವಿಡೀ ಚಟುವಟಿಕೆಯಿಂದಿರಿ. ಬೆಳಗ್ಗೆ 4 ರಿಂದ 5 ಗಂಟೆಯ ಒಳಗೆ ನೀವು ಹಾಸಿಗೆಯಿಂದ ಎದ್ದೇಳಿ.
Tap to resize

2. ವ್ಯಾಯಾಮ ಮಾಡಿಲಘು ವ್ಯಾಯಾಮಹೃದಯವನ್ನು ಸದೃಢವಾಗಿರಿಸುತ್ತದೆ ಮತ್ತು ಮೆಟಾಬಲಿಸಮ್ ಅನ್ನು ಉತ್ತೇಜಿಸುತ್ತದೆ. ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿದರೆ ಕ್ಯಾಲೋರಿಗಳು ಕರಗಿ, ಕೊಲೆಸ್ಟ್ರಾಲ್ ಕಡಿಮೆ ಮಾಡಿ, ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕುತ್ತವೆ. ವ್ಯಾಯಾಮ ತೂಕವನ್ನು ನಿಯಂತ್ರಿಸುತ್ತದೆ.
3.ದೇಹದ ಪೊಶ್ಚಾರ್ ಅನ್ನು ಸರಿಯಾಗಿ ಇರಿಸಿಪೂರ್ಣಕಾಲಿಕವಾಗಿ ಒರಗುವುದು, ಕುಳಿತುಕೊಳ್ಳುವುದು ಅಥವಾ ಕಚೇರಿಯಲ್ಲಿ ಕೆಲಸ ಮಾಡುವುದರಿಂದ, ಕುಳಿತು ಕುಳಿತು ಭಂಗಿ ಕೆಟ್ಟು ಹೋಗಿರುತ್ತದೆ. ಬೆನ್ನುಹುರಿಯನ್ನು ಹೆಚ್ಚು ಕಾಲ ನೇರವಾಗಿಸಿಕೊಳ್ಳದ ಕಾರಣ ಈ ಸ್ಥಿತಿ ಉದ್ಭವಿಸುತ್ತದೆ. ಕೂರುವಭಂಗಿ ಚೆನ್ನಾಗಿದ್ದರೆ, ಬೆನ್ನು ನೋವು ಇರುವುದಿಲ್ಲ ಮತ್ತು ನಿಮ್ಮ ಕೀಲುಗಳಲ್ಲಿ ತೊಂದರೆ ಇರುವುದಿಲ್ಲ.
4.ಆರೋಗ್ಯಕರ ಆಹಾರನೀವು ಫಾಸ್ಟ್ ಫುಡ್, ಕರಿದ ಮತ್ತು ತುಂಬಾ ಸಿಹಿಯಾದ ಆಹಾರಗಳನ್ನು ತಿಂದರೆ, ಹುಷಾರಾಗಿರಿ. ಸ್ಥೂಲಕಾಯಕ್ಕೆ ಮುಖ್ಯ ಕಾರಣ ಎಣ್ಣೆ ಮತ್ತು ಸಿಹಿ ಪದಾರ್ಥಗಳು. ಇದರಿಂದ ದೇಹದಲ್ಲಿ ಕೊಬ್ಬು, ಆಲಸ್ಯ ಹೆಚ್ಚಾಗುತ್ತದೆ. ಈ ಪದಾರ್ಥಗಳನ್ನು ಮಿತವಾಗಿ ಬಳಸಿ. ನಮ್ಮ ಸಮತೋಲಿತ ಆಹಾರ ಆರೋಗ್ಯಕರ ಜೀವನಕ್ಕೆ ಆಧಾರವಾಗಿದೆ.
5. ಸರಿಯಾದ ಪ್ರಮಾಣದ ನೀರನ್ನು ಕುಡಿಯಿರಿಊಟವಾದ ತಕ್ಷಣ ನೀರು ಕುಡಿಯಬೇಡಿ. ಅಗತ್ಯಬಿದ್ದರೆ, ನೀವು ಒಂದು ಸಿಪ್ ನೀರನ್ನು ತೆಗೆದುಕೊಳ್ಳಬಹುದು, ಆದರೆ ಅದಕ್ಕಿಂತ ಹೆಚ್ಚು ಕುಡಿಯಬೇಡಿ.
6. ನಡೆಯಲೇಬೇಕುಪ್ರತಿದಿನ ನಡೆಯುವಾಗ ಹೆಚ್ಚು ಶಕ್ತಿ ಬರುತ್ತದೆ. ದೇಹದಲ್ಲಿ ಯಾವುದೇ ಆಯಾಸ ಅಥವಾ ಇನ್ನಾವುದೇ ಸಮಸ್ಯೆ ಇರುವುದಿಲ್ಲ ಮತ್ತು ನೀವು ಆರೋಗ್ಯವಾಗಿರುತ್ತೀರಿ.
7.ದೇಹವನ್ನು ಸ್ವಚ್ಛಗೊಳಿಸಿದೇಹದ ಸೌಂದರ್ಯವು ಅದರ ಸ್ವಚ್ಛತೆಯಲ್ಲಿ ಇರುತ್ತದೆ, ಆದ್ದರಿಂದ ದೇಹದ ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಿ. ಬ್ರಶ್ ಮಾಡಿ, ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಸ್ನಾನ ಮಾಡಿ ಮತ್ತು ನಿಮ್ಮ ಆಂತರಿಕ ಭಾಗವನ್ನು ಸ್ವಚ್ಛಗೊಳಿಸಲು ವಿಶೇಷ ಗಮನ ನೀಡಿ.
8.ಸಮಯಕ್ಕೆ ಸರಿಯಾಗಿ ಆಹಾರಆಹಾರವು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಚೆನ್ನಾಗಿ ಆಹಾರ ಸೇವಿಸಿ. ನೀವು ಸರಿಯಾದ ಸಮಯಕ್ಕೆ ಆಹಾರ ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಜೀರ್ಣ ಕ್ರಿಯೆ ಉತ್ತಮವಾಗಿರುತ್ತದೆ.
9. ಪ್ರಾರ್ಥನೆ ಮತ್ತು ಧ್ಯಾನಪ್ರಕೃತಿಯಲ್ಲಿ ಕೆಲವು ಆವರ್ತನಗಳು ಮನಸ್ಸು ಮತ್ತು ದೇಹದ ಮೇಲೆ ಶಾಂತಿಯನ್ನು ಉಂಟುಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ ಪ್ರಶಾಂತವಾದ ಸ್ಥಳದಲ್ಲಿ ಕುಳಿತು 15 ನಿಮಿಷಗಳ ಕಾಲ 'ಓಂ' ಎಂದು ಉಚ್ಚರಿಸಿ. ಕಣ್ಣು ತೆರೆದಾಗ ಸಾತ್ವಿಕ ಭಾವನೆ ಮೂಡುತ್ತದೆ. ಅಂದರೆ ನೀವು ನಿಮ್ಮ ಮನಸ್ಸನ್ನು ಪೋಷಿಸಿಕೊಂಡು, ಮೌಲ್ಯವನ್ನು ಶಾಂತಗೊಳಿಸಿದ್ದೀರಿ ಎಂದರ್ಥ.
10.ಸಂಪೂರ್ಣ ನಿದ್ರೆದೇಹಕ್ಕೆ ಎಷ್ಟು ನಿದ್ರೆ ಬೇಕು ಎಂಬುದನ್ನು ನೀವು ತಿಳಿದಿರಬೇಕು. ನಿದ್ರೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ನಿತ್ಯ 7 ರಿಂದ 8 ಗಂಟೆ ನಿದ್ದೆ ಸಾಕಾಗುತ್ತದೆ. ಅತಿ ಕಡಿಮೆ ಅಥವಾ ಅತಿಯಾದ ನಿದ್ರೆ ಇವೆರಡೂ ಆರೋಗ್ಯಕ್ಕೆ ಹಾನಿಕರ.

Latest Videos

click me!