ಮನೆಯಲ್ಲಿ ಮೆಂತೆ ಕಾಳು ಇದ್ರೆ ಈ ನೋವಿಗೆಲ್ಲಾ ಹೇಳಿ ಗುಡ್‌ ಬೈ!

First Published | Sep 22, 2020, 11:25 AM IST

ಕಡಿಮೆ ಬೆಲೆಗೆ ಸಿಗುವ ಮೆಂತೆ ಕಾಳು ಎಲ್ಲರ ಅಡುಗೆ  ಮನೆಯಲ್ಲಿ ಇದ್ದೇ ಇರುತ್ತದೆ. ಅರೇ ಇಷ್ಟು ಕಡಿಮೆ ಬೆಲೆ ಅಂದ್ರೆ ಅದಕ್ಕೆ ವ್ಯಾಲ್ಯು ಇಲ್ಲ ಅಂದುಕೊಳ್ಳಬೇಡಿ. ಅದರಿಂದ ಆರೋಗ್ಯ ಲಾಭ ಸಾಕಷ್ಟಿದೆ. ಮೆಂತೆ ಕಾಳುಗಳಿಂದ ಆಗುವ ಲಾಭಗಳು ಇಲ್ಲಿವೆ ನೋಡಿ.

ಕ್ಯಾಲರಿ : 320, ಕಾರ್ಬೋಹೈಡ್ರೇಟ್ : 58g, ಫೈಬರ್ - 25g , ಪ್ರೊಟೀನ್ - 23gಪೌಷ್ಟಿಕಾಂಶಗಳು ಹೊಂದಿರುತ್ತದೆ.
ಮೆಂತೆಯನ್ನು ಪ್ರತಿದಿನ ಸೇವಿಸದಿರೆ ತಾಯಿ ಎದೆ ಹಾಲು ಹೆಚ್ಚುತ್ತದೆ. ತಾಯಿಯ ಆರೋಗ್ಯಕ್ಕೂ ಉತ್ತಮ ಮದ್ದು.
Tap to resize

ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತೆ ಕಾಳಿನಷ್ಟು ಉತ್ತಮ ಮದ್ದು ಮತ್ತೊಂದಿಲ್ಲ. ದೇಹದಲ್ಲಿರುವ ವಿಷಕಾರಕ ಅಂಶಗಳನ್ನು ಹೊರ ಹಾಕಿ, ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ.
ಬ್ಲಡ್ ಶುಗರ್ ಪ್ರಮಾಣವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೂ ಮೆಂತು ಉತ್ತಮ ಮದ್ದು.
ಇದರಲ್ಲಿ ಗಾಲಕ್ಟೋಮನನ್ ಎಂದು ಕರೆಯಲ್ಪಡುವ ನೈಸರ್ಗಿಕವಾಗಿ ಕರಗುವ ಫೈಬರ್ ಇದೆ. ಇದು ರಕ್ತ ಸಕ್ಕರೆ ಅಂಶ ಹೀರುವ ವೇಗವನ್ನು ಕಡಿಮೆಗೊಳಿಸುತ್ತದೆ.
ಮೆಂತೆಯಲ್ಲಿ ಕ್ಯಾಲ್ಸಿಯಂ ಇದೆ. ಇದು ಎದೆಯುರಿ ನಿವಾರಿಸಲು ಸಹಕರಿಸುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತೆ ಕಾಳನ್ನು ಜಗಿದು, ತಿಂದರೆ ಹೆಚ್ಚುವರಿ ಕ್ಯಾಲೋರಿಗೆ ಗುಡ್ ಬೈ ಹೇಳಬಹುದು.
ಮೆಂತೆ ಕಾಳನ್ನು ಪುಡಿ ಮಾಡಿ, ಒಂದು ಚಹಾ ಚಮಚ ನಿಂಬೆರಸ ಮತ್ತು ಜೇನಿನಲ್ಲಿ ಸೇರಿಸಿ, ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
ನಿಯಮಿತವಾಗಿ ಮೆಂತೆ ಕಾಳು ಸೇವಿಸಿದರೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಜೊತೆಗೆ, ಮೆದುಳು ಕ್ರಿಯಾಶೀಲವಾಗುತ್ತದೆ.
ಕಿಡ್ನಿ ಅರೋಗ್ಯ ಕಾಪಾಡುವಲ್ಲಿ ಮೆಂತೆ ಸಹಕರಿಸುತ್ತದೆ. ಇದರಿಂದ ಕಿಡ್ನಿ ಡ್ಯಾಮೇಜ್ ಆಗೋದು ತಪ್ಪುತ್ತದೆ.

Latest Videos

click me!