ಅಬ್ಬಬ್ಬಾ...! ನೀವು ವರ್ಕ್ ಫ್ರಂ ಹೋಂ ಮಾಡ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ!
First Published | Mar 26, 2021, 4:50 PM ISTಕೊರೋನಾದಿಂದಾಗಿ ಕಳೆದ ವರ್ಷ ಜನರು ಲಾಕ್‌ಡೌನ್ ಎದುರಿಸಬೇಕಾಯ್ತು. ಹಲವಾರು ತಿಂಗಳು ವಿಶ್ವದ ಅನೇಕ ರಾಷ್ಟ್ರಗಳು ಸಂಪೂರ್ಣವಾಗಿ ಬಂದ್ ಆದವು. ಜನರು ಮನೆಯಲ್ಲಿ ಕೈದಿಗಳಂತೆ ಬದುಕಿದರು. ಕೇವಲ ಅಗತ್ಯ ಕೆಲಸವಿದ್ದರಷ್ಟೇ ಮನೆಯಿಂದ ಹೊರ ಹೋಗಲು ಅನುಮತಿ ಇತ್ತು. ಆದರೆ ಕೆಲ ಸಮಯದ ಬಳಿಕ ಈ ಲಾಕ್‌ಡೌನ್ ತೆರವುಗೊಳಿಸಲಾಯ್ತು ಹಾಗೂ ಜನರು ಹೊರಗೆ ಹೋಗಲಾರಂಭಿಸಿದರು. 2021 ರ ಆರಂಭದಲ್ಲಿ ಲಸಿಕೆ ಬಂತು ಹಾಗೂ ಸದ್ಯ ಲಸಿಕೆ ಅಭಿಯಾನದಡಿ ಜನರು ಲಸಿಕೆ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಮತ್ತೊಮ್ಮೆ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಲಾರಂಭಿಸಿದರು. ಹೀಗಿರುವಾಗ ಮತ್ತೆ ಲಾಕ್‌ಡೌನ್ ಹೇರುವ ಮಾತುಗಳು ಜೋರಾಗಿವೆ. ಆದರೆ ಈ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಜನರು ಎದುರಿಸಿದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಸ್ಥೂಲಕಾಯ. ಮನೆಯಲ್ಲೇ ಇದ್ದ ಪರಿಣಾಮ ಜನರು ಬಲು ಬೇಗ ದಪ್ಪಗಾದರು. ಹೀಗಿರುವಾಗ ಅಮೆರಿಕದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದ್ದು, ಪ್ರತಿ ಹತ್ತು ದಿನಕ್ಕೊಮ್ಮೆ ಜನರ ತೂಕ ಹೆಚ್ಚಾಗುತ್ತಿದೆ ಎಂಬ ವಿಚಾರ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದೂ ತಿಳಿಸಿದ್ದಾರೆ.