ಬಾಳೆ ಎಲೆಯಲ್ಲಿ ಬೇಯಿಸಿರುವ ಆಹಾರವನ್ನು ಪ್ರತಿನಿತ್ಯ ತಿಂದ್ರೆ ಏನಾಗುತ್ತೆ? ದೇಹಕ್ಕೆ ಲಾಭನಾ? ನಷ್ಟನಾ?

First Published | Aug 3, 2024, 7:54 PM IST

ಬಾಳೆಯೂಟ ಸೇವಿಸಲು ಜನರು ದೂರದೂರದಲ್ಲಿರುವ ಹೋಟೆಲ್ ಹುಡುಕಿಕೊಂಡು ಹೋಗುತ್ತಾರೆ. ಆದ್ರೆ ಬಾಳೆ ಎಲೆಯಲ್ಲಿ ಬೇಯಿಸಿರುವ ಆಹಾರ ತಿಂದರೆ ಏನಾಗುತ್ತೆ?

Banana leaves packaging

ದಕ್ಷಿಣ ಭಾರತದ ಭಾಗದಲ್ಲಿ ಬಾಳೆ ಎಲೆ ಊಟದ ಒಂದು ಭಾಗವಾಗಿದೆ. ಅದರಲ್ಲಿಯೂ ಕೇರಳ, ತಮಿಳುನಾಡು, ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬಾಳೆ ಎಲೆಗಳಿಲ್ಲದೇ ಆಹಾರವೇ ಸಿದ್ಧವಾಗಲ್ಲ.

ತರಕಾರಿ ಕಟ್ ಮಾಡಿ ಹಾಕಲು ಬಾಳೆ ಎಲೆ ಬಳಕೆ ಮಾಡಲಾಗುತ್ತದೆ. ಇನ್ನು ಕೆಲವು ಆಹಾರಗಳನ್ನು ಬಾಳೆ ಎಲೆಯಲ್ಲಿಯೇ ಸುತ್ತಿ ಹದವಾಗಿ ಬೇಯಿಸಲಾಗುತ್ತದೆ. ಬಾಳೆ ಎಲೆಯಲ್ಲಿರುವ ಬೇಯಿಸಿರುವ ಆಹಾರದ ರುಚಿ ತುಂಬಾ ಭಿನ್ನವಾಗಿರುತ್ತದೆ.

Tap to resize

ಪ್ರತಿದಿನ ಬಾಳೆ ಎಲೆಯಲ್ಲಿ ಬೇಯಿಸಿರುವ ಆಹಾರ ಸೇವನೆ ಮಾಡೋದರಿಂದ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತೆ? ಬಾಳೆ ಎಲೆ ಎಷ್ಟು ಲಾಭಕಾರಿ ಎಂಬುದರ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. 

ಡಾ.ಮೋಹನ್ ವೆಲಂಗಿ ಬಾಲೆ ಎಲೆಯಲ್ಲಿ ಬೇಯಿಸಿದ ಆಹಾರ ದೇಹಕ್ಕೆ ಒಳ್ಳೆಯದ್ದಾ ಅಥವಾ ಅಲ್ಲವಾ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಳೆ ಎಲೆಯಲ್ಲಿ ಬೇಯಿಸಿರುವ ಆಹಾರದಿಂದ ಬಾಳೆ ಎಲೆ ಪರಿಮಳ ಬರುತ್ತದೆ. 

ಬಾಳೆ ಎಲೆಯಲ್ಲಿ ಆರೊಮ್ಯಾಟಿಕ್ ಮತ್ತು ಆರೋಗ್ಯಕರ ಪಾಲಿಹೆನಾಲ್‌ಗಳಿವೆ. ಈ ಅಂಶಗಳು ಆಹಾರದಲ್ಲಿ ಸೇರ್ಪಡೆಯಾಗುವದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಾಳೆ ಎಲೆ ಹಬೆಯಲ್ಲಿ ಹದವಾಗಿ ಬೆಂದಾಗ ಅದಲ್ಲಿರುವ ಆರೋಗ್ಯಕರ ಅಂಶಗಳು ಆಹಾರದೊಳಗೆ ಸೇರುತ್ತವೆ.

ಬಾಳೆ ಎಲೆಗಳು ಹಬೆಯಲ್ಲಿ ಬೆಂದಾಗ ಆಹಾರಕ್ಕೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ ಬಾಳೆ ಎಲೆಯಿಂದ ಸಾರಗಳು ಆಹಾರಕ್ಕೆ ಸೇರಿಕೊಳ್ಳುತ್ತವೆ ಎಂದು ಡಾ.ಮೋಹನ್ ವೆಲಂಗಿ ಹೇಳುತ್ತಾರೆ. ಬಾಳೆ ಎಲೆ ಆಹಾರ ಮಧುಮೇಹಿಗಳಿಗೆ ತುಂಬಾನೇ ಆರೋಗ್ಯಕರ ಆಹಾರವಾಗಿದೆ.

ಬಾಳೆ ಎಲೆಗಳು ಹಬೆಯಲ್ಲಿ ಬೇಯುತ್ತಿರುವಾಗ ಅದರಲ್ಲಿರುವ ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಆಹಾರವನ್ನು ಸೇರುವದರಿಂದ ಉತ್ಕರ್ಷಣ ನಿರೋಧಕ ಅಂಶವನ್ನು ಹೆಚ್ಚಳ ಮಾಡುತ್ತದೆ. ಈ ಉತ್ಕರ್ಷಣ ನಿರೋಧಕಗಳು ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಸಮಸ್ಯೆಗಳನ್ನು ದೂರ ಮಾಡುವ ಸಾಮಾರ್ಥ್ಯವನ್ನು ಹೊಂದಿರುತ್ತವೆ.

Latest Videos

click me!