ನಿಮ್ಮಿಷ್ಟದ ತಿಂಡಿ ಕಂಡಾಗ ಬಾಯಲ್ಲಿ ನೀರೂರಲು ಅಸಲಿ ಕಾರಣವೇನು ಗೊತ್ತಾ?

Published : Sep 05, 2026, 09:29 AM IST

ಹೋಳಿಗೆ ಮಾಡುವಾಗ ಅಡುಗೆ ಮನೆಯಿಂದ ಘಮ ಘಮಿಸುವ ವಾಸನೆ ಬಂದಾಗ, ನಿಮ್ಮಿಷ್ಟದ ತಿಂಡಿ ಕಂಡಾಗ ಬಾಯಲ್ಲಿ ನೀರೂರಿಸುವುದು ಏಕೆ ಗೊತ್ತಾ? ಮೆದುಳಲ್ಲೇನಾಗುತ್ತದೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ..

PREV
14
ಇಷ್ಟದ ತಿಂಡಿ ನೋಡಿದಾಗ ಬಾಯಲ್ಲಿ ನೀರೂರಿಸುವುದು ಏಕೆ?

ಹೋಳಿಗೆ ಮಾಡುವಾಗ ಅಡುಗೆ ಮನೆಯಿಂದ ಘಮ ಘಮಿಸುವ ವಾಸನೆ ಬಂದಾಗ, ನಿಮ್ಮ ಮುಂದೆಯೇ ಯಾರಾದರೂ ರಸಭರಿತ ಮಾವಿನ ಹಣ್ಣು ತಿನ್ನುವಾಗ, ಯಾರೋ ಮಕ್ಕಳ ಬಾಯಿಗೆ ನಿಂಬೆ ರಸ ಹಿಂಡಿದಾಗ ಅಂತಹದ್ದೊಂದು ವಿಡಿಯೋ ನೋಡುವಾಗ ನಿಮ್ಮ ಬಾಯಲ್ಲಿ ನೀರೂರಿಸುವುದನ್ನ ಎಂದಾದರೂ ಗಮನಿಸಿದ್ದೀರಾ? ಹೀಗ್ಯಾಕೆ ಯಾರೋ ತಿನ್ನೋದನ್ನು ನೋಡಿ, ಘಮಿಸುವ ವಾಸನೆ ಬಂದಾಗ ನೆಚ್ಚಿನ ತಿಂಡಿ ಕಂಡಾಗ ಬಾಯಲ್ಲಿ ನೀರು ಬರಲು ಕಾರಣವೇನು?

24
ಇಷ್ಟದ ತಿಂಡಿ ನೋಡಿದಾಗ ಬಾಯಲ್ಲಿ ಜೊಲ್ಲು ಸುರಿಯುವುದೇಕೆ?

ನಮಗೆ ಇಷ್ಟವಾದ ಆಹಾರ ಕಣ್ಣಿಗೆ ಬಿದ್ದಾಗ ಅಥವಾ ಅದರ ವಾಸನೆ ಮೂಗಿಗೆ ತಾಗಿದಾಗ ಮೆದುಳು ಅದನ್ನು ಗುರುತಿಸುತ್ತದೆ. ಆಹಾರ ಇನ್ನೂ ಬಾಯಿಗೆ ಹೋಗುವ ಮೊದಲೇ, ಜೀರ್ಣಕ್ರಿಯೆಗೆ ದೇಹವನ್ನು ಸಿದ್ಧಪಡಿಸುವಂತೆ ಮೆದುಳು ಸೂಚನೆ ನೀಡುತ್ತದೆ. ಇದರ ಪರಿಣಾಮವಾಗಿ ಬಾಯಿಯಲ್ಲಿ ಲಾಲಾರಸ ಹೆಚ್ಚಾಗಿ ಸ್ರವಿಸುತ್ತದೆ. ಇದನ್ನೇ ವಿಜ್ಞಾನದಲ್ಲಿ ಜೀರ್ಣಕ್ರಿಯೆಯ ‘ಸೆಫಾಲಿಕ್ ಹಂತ’ ಎಂದು ಕರೆಯಲಾಗುತ್ತ

34
ಬಾಯಲ್ಲಿ ಲಾಲಾರಸ ಏಕೆ ಬೇಕು?

ಆಹಾರವನ್ನು ತೇವಗೊಳಿಸಿ ಸುಲಭವಾಗಿ ಅಗಿಯಲು ಮತ್ತು ನುಂಗಲು ಲಾಲಾರಸ ಸಹಾಯ ಮಾಡುತ್ತದೆ. ಇದರಲ್ಲಿರುವ ಅಮೈಲೇಸ್ ಎಂಬ ಕಿಣ್ವವು ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ಬಾಯಿಯಲ್ಲೇ ಆರಂಭಿಸುತ್ತದೆ. ಅಂದರೆ, ಬಾಯಲ್ಲಿ ನೀರು ಬರುವುದು ಕೇವಲ ಹಸಿವಿನ ಸಂಕೇತವಲ್ಲ. ದೇಹ ಆಹಾರ ಸ್ವೀಕರಿಸಲು ಸಿದ್ಧವಾಗುತ್ತಿದೆ ಎಂಬುದರ ಸೂಚನೆಯೂ ಹೌದು.

44
ವಾಸನೆಯಿಂದಲೂ ಜೊಲ್ಲು ಸುರಿಯುತ್ತದೆ!

ಆಹಾರವನ್ನು ನೋಡಬೇಕೆಂದೇನಿಲ್ಲ. ಅದರ ವಾಸನೆ ಮಾತ್ರವೂ ಸಾಕಾಗಬಹುದು. ಬೇಕರಿ ಅಂಗಡಿಯ ಪಕ್ಕದಲ್ಲಿ ಹೋಗುವಾಗ ಹೊಸದಾಗಿ ಬೇಯಿಸಿದ ಬ್ರೆಡ್, ಕೇಕ್ ಅಥವಾ ಬಿಸ್ಕತ್‌ನ ವಾಸನೆ ಬಂದ ತಕ್ಷಣ ಬಾಯಲ್ಲಿ ನೀರೂರುವುದನ್ನು ಗಮನಿಸಿರಬಹುದು. ಆ ವಾಸನೆಯಿಂದ ಆಹಾರ ಸಿಗಲಿದೆ ಎಂದು ಮೆದುಳು ಊಹಿಸಿ, ದೇಹವನ್ನು ಮೊದಲೇ ಸಿದ್ಧಪಡಿಸುತ್ತದೆ.

ಇಷ್ಟದ ಆಹಾರಕ್ಕೆ ಹೆಚ್ಚು ಪ್ರತಿಕ್ರಿಯೆ

ಎಲ್ಲ ಆಹಾರಗಳನ್ನು ನೋಡಿದಾಗಲೂ ಒಂದೇ ಪ್ರಮಾಣದಲ್ಲಿ ಬಾಯಲ್ಲಿ ನೀರು ಬರುವುದಿಲ್ಲ. ನಮಗೆ ಇಷ್ಟವಾದ ಮತ್ತು ಪರಿಚಿತವಾದ ಆಹಾರಗಳು ಹೆಚ್ಚು ಪ್ರತಿಕ್ರಿಯೆ ಉಂಟುಮಾಡಬಹುದು. ಉದಾಹರಣೆಗೆ, ಬಾಲ್ಯದಿಂದಲೂ ಇಷ್ಟವಾಗಿರುವ ಮನೆಯಲ್ಲಿ ಮಾಡುವ ಯಾವುದಾದರೂ ಖಾದ್ಯದ ವಾಸನೆ ಬಂದರೆ ಬಾಯಲ್ಲಿ ನೀರೂರುವುದು ಹೆಚ್ಚು. ಇದಕ್ಕೆ ಹಿಂದಿನ ಅನುಭವ ಮತ್ತು ಆಹಾರದ ಮೇಲಿನ ನಮ್ಮ ಆಸಕ್ತಿ ಕಾರಣ.

ಪಾವ್ಲೋವ್ ಪ್ರಯೋಗದಲ್ಲೂ ಇದೇ ಸಂಗತಿ

ಆಹಾರ ಮತ್ತು ಜೊಲ್ಲು ಸುರಿಸುವಿಕೆಯ ನಡುವಿನ ಸಂಬಂಧವನ್ನು ರಷ್ಯಾದ ಶರೀರಶಾಸ್ತ್ರಜ್ಞ ಇವಾನ್ ಪಾವ್ಲೋವ್ ಅವರ ಪ್ರಯೋಗಗಳು ಪ್ರಸಿದ್ಧಗೊಳಿಸಿದವು. ಆಹಾರದೊಂದಿಗೆ ಕೆಲವು ಸಂಕೇತಗಳನ್ನು ಜೋಡಿಸಿಕೊಂಡ ನಂತರ, ಆಹಾರ ಬರುವ ಮೊದಲೇ ಪ್ರಾಣಿಗಳ ದೇಹದಲ್ಲಿ ಪ್ರತಿಕ್ರಿಯೆ ಉಂಟಾಗುವುದನ್ನು ಅವರು ಗಮನಿಸಿದ್ದರು. ಇಂದಿನ ವಿಜ್ಞಾನ ಇದನ್ನು ದೇಹದ ನಿರೀಕ್ಷಿತ ಮತ್ತು ನಿಯಮಾಧೀನ ಪ್ರತಿಕ್ರಿಯೆ ಎಂದು ವಿವರಿಸುತ್ತದೆ.

ಆಹಾರದ ಜಾಹೀರಾತುಗಳೂ ಇದೇ ತಂತ್ರ ಬಳಸುತ್ತವೆ

ಕರಗಿದ ಚೀಸ್, ಬಿಸಿ ಪಿಜ್ಜಾ ಅಥವಾ ಹೊಸದಾಗಿ ತಯಾರಿಸಿದ ಆಹಾರದ ಚಿತ್ರಗಳನ್ನು ನೋಡಿದಾಗ ತಕ್ಷಣ ತಿನ್ನಬೇಕು ಎಂಬ ಆಸೆ ಮೂಡುವುದಕ್ಕೆ ಇದೇ ಕಾರಣಗಳಲ್ಲಿ ಒಂದು. ನಾವು ತಿನ್ನಬೇಕೇ ಬೇಡವೇ ಎಂದು ಯೋಚಿಸುವ ಮೊದಲೇ, ಆಹಾರದ ಚಿತ್ರ ಅಥವಾ ವಾಸನೆ ಮೆದುಳಿಗೆ ಸಂಕೇತ ನೀಡಬಹುದು. ಅದಕ್ಕೆ ಪ್ರತಿಕ್ರಿಯೆಯಾಗಿ ದೇಹ ಜೀರ್ಣಕ್ರಿಯೆಗೆ ಸಿದ್ಧವಾಗಲು ಆರಂಭಿಸುತ್ತದೆ. ಹೀಗಾಗಿ, ಮುಂದಿನ ಬಾರಿ ನಿಮ್ಮ ನೆಚ್ಚಿನ ತಿಂಡಿಯ ಪೆಟ್ಟಿಗೆ ತೆರೆದ ತಕ್ಷಣ ಬಾಯಲ್ಲಿ ನೀರು ಬಂದರೆ ಆಶ್ಚರ್ಯಪಡಬೇಕಿಲ್ಲ. ನಿಮ್ಮ ಮೆದುಳು ಆಹಾರವನ್ನು ಗುರುತಿಸಿ, ಅದು ಬಾಯಿಗೆ ಬರುವ ಮೊದಲೇ ದೇಹವನ್ನು ತಿನ್ನಲು ಸಿದ್ಧಪಡಿಸುತ್ತಿರುತ್ತದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories