ಯಾವ ನಗರಕ್ಕಿದೆ ವಿಶ್ವದ ವಿಸ್ಕಿ ರಾಜಧಾನಿ ಬಿರುದು? ನಿಮ್ಮ ಊಹೆಗೂ ನಿಲುಕದ ಸಿಟಿ

Published : Apr 27, 2026, 03:35 PM IST

ಯಾವ ನಗರಕ್ಕಿದೆ ವಿಶ್ವದ ವಿಸ್ಕಿ ರಾಜಧಾನಿ ಬಿರುದು? ನಿಮ್ಮ ಊಹೆಗೂ ನಿಲುಕದ ಸಿಟಿ, ಹೆಚ್ಚಿನವರು ಸ್ಕಾಟ್‌ಲೆಂಡ್ ಉತ್ತರ ನೀಡುತ್ತಾರೆ. ಆದರೆ ಅಲ್ಲ, ಹೆಚ್ಚಿನ ಜನಸಂಖ್ಯೆ ಇಲ್ಲದ ಈ ನಗರ ವಿಸ್ಕಿ ರಾಜಧಾನಿಯಾಗಿದ್ದು ಹೇಗೆ?

PREV
16
ವಿಶ್ವದ ವಿಸ್ಕಿ ರಾಜಧಾನಿ ಯಾವುದು

ವಿಸ್ಕಿ ರಾಜಾಧಾನಿ ಅನ್ನೋ ಬಿರುದು ಹೊಂದಿದ ನಗರ ಪ್ರಶ್ನೆ ಬಂದಾಗ ಹೆಚ್ಚಿನವರು ಸ್ಕಾಟ್‌ಲೆಂಡ್ ಉತ್ತರ ನೀಡುತ್ತಾರೆ. ಇನ್ನು ಕೆಲವರು ಎಡಿನ್‌ಬರ್ಗ್, ಕೆಂಟುಕಿ ಸೇರಿದಂತೆ ಕೆಲ ಹೆಸರಗಳನ್ನು ನೀಡುತ್ತಾರೆ. ಆದರೆ ಇದ್ಯಾವುದು ಅಲ್ಲ. ಈ ನಗರದ ಹೆಸರು ಹೆಚ್ಚಿನವರು ಕೇಳಿಲ್ಲ. ಹೌದು ಸ್ಕಾಟಿಶ್ ಪಟ್ಟಣ ಕ್ಯಾಂಪ್‌ಬೆಲ್ಟೌನ್ ನಗರವನ್ನು ವಿಸ್ಕಿ ರಾಜಧಾನಿ ಎಂದು ಕರೆಯಲಾಗುತ್ತದೆ.

26
4600 ಜನಸಂಖ್ಯೆ ನಗರ

ಸ್ಕಾಟ್‌ಲೆಂಡ್‌ನ ಸಣ್ಣ ನಗರ ಕ್ಯಾಂಪ್‌ಬೆಲ್ಟೌನ್. ಹತ್ತಿರದ ವಿಮಾನ ನಿಲ್ದಾಣ ಗ್ಲಾಸ್ಕೌ 89 ಕಿಲೋಮೀಟರ್ ದೂರದಲ್ಲಿದೆ. ಈ ನಗರದ ಜನಸಂಖ್ಯೆ ಕೇವಲ 4,600 ಮಾತ್ರ. ಆದರೆ ಪ್ರತಿ ದಿನ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕೇವಲ ವಿಸ್ಕಿನ ನಗರ ಅನ್ನೋ ಕಾರಣಕ್ಕಲ್ಲ. ಇಲ್ಲಿನ ಸೌಂದರ್ಯಕ್ಕೆ ಮಾರುಹೋಗದವರಿಲ್ಲ.

36
1591ರಿಂದ ವಿಸ್ಕಿ ಉತ್ಪಾದನೆ, ಮಾರಾಟ

ಕ್ಯಾಂಪ್‌ಬೆಲ್ಟೌನ್ ನಗರದಲ್ಲಿ ವಿಸ್ಕಿ ಉತ್ಪಾದನೆ, ಮಾರಾಟ, ವ್ಯವಹಾರಗಳ ಕುರಿತು ಸ್ಪಷ್ಟ ಇತಿಹಾಸವಿದೆ. 1591ರಲ್ಲೇ ಈ ನಗರ ವಿಸ್ಕಿ ಉತ್ಪಾದಿಸಿ ಯೋರೋಪ್ ಸೇರಿದಂತೆ ಹಲವು ದೇಶಗಳಿಗೆ ಮಾರಾಟ ಮಾಡುತ್ತಿತ್ತು. 19ನೇ ಶತಮಾನದಲ್ಲೇ ಇಲ್ಲಿ ಡಿಸ್ಟಿಲ್ ಕಾನೂನು ಬದ್ಧವಾಗಿತ್ತು.

46
1800ರಲಲ್ಲೇ ಅತೀ ದೊಡ್ಡ ಉತ್ಪಾದನಾ ಕೇಂದ್ರ

1800ನೇ ಇಸವಿಯಲ್ಲಿ ಕ್ಯಾಂಪ್‌ಬೆಲ್ಟೌನ್ ನಗರದಲ್ಲಿ 30ಕ್ಕೂ ಹೆಚ್ಚು ವಿಸ್ಕಿ ಉತ್ಪಾದನಾ ಕೇಂದ್ರಗಳಿತ್ತು. ಇಲ್ಲಿನ ವಿಸ್ಕಿ ಗುಣಮಟ್ಟಕ್ಕೆ ಮದ್ಯಪ್ರಿಯರು ಮಾರುಹೋಗುತ್ತಾರೆ. ಹೀಗಾಗಿಯೇ ಕ್ಯಾಂಪ್‌ಬೆಲ್ಟೌನ್ ವಿಸ್ಕಿಗೆ ದೇಶ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ.

56
ಕ್ಯಾಂಪ್‌ಬೆಲ್ಟೌನ್ ವಿಸ್ಕಿ ವಿಶೇಷತೆ ಏನು

ಕ್ಯಾಂಪ್‌ಬೆಲ್ಟೌನ್ ನಗರ ಸಮುದ್ರದ ದಂಡೆಯಲ್ಲಿದೆ. ಹೀಗಾಗಿ ಭೌಗೋಳಿಕವಾಗಿ ಇಲ್ಲಿ ತಯಾರಾಗುವ ವಿಸ್ಕಿಯ ರುಚಿ ವಿಶೇಷವಾಗಿದೆ. ಉಪ್ಪು ಮಿಶ್ರಿತ ಹಾಗೂ ಹೊಗೆಯಾಡುವು ಗುಣ ಇಲ್ಲಿನ ವಿಸ್ಕಿಗೆ ಇದೆ. ಅತ್ಯುತ್ತಮ ಗುಣಮಟ್ಟದ ಬಾರ್ಲಿ ಬೆಳೆ ಹಾಗೂ ಅತ್ಯಂತ ಶುದ್ಧ ನೈಸರ್ಗಿಕ ನೀರು ವಿಸ್ಕಿ ಉದ್ಯಮಕ್ಕೆ ಪೂರಕವಾಗಿದೆ.

66
ಹೊಡೆತ ಕೊಟ್ಟ ಅಮೆರಿಕ

1920ರ ಸಮಯದಲ್ಲಿ ಕ್ಯಾಂಪ್‌ಬೆಲ್ಟೌನ್ ಜಾಗತಿಕ ಮಟ್ಟದಲ್ಲಿ ಭಾರಿ ಆದಾಯದ ಕೇಂದ್ರವಾಗಿತ್ತು. ವಿಸ್ಕಿ ಉತ್ಪಾದನೆ ವಿಶ್ವದ ಗಮನಸೆಳೆದಿತ್ತು. ಇದೇ ವೇಳೆ ಅಮೆರಿಕ ಮದ್ಯಪಾನ ನಿಷೇಧ ಜಾರಿಗೆ ತಂದು ಈ ನಗರದ ಉತ್ಪಾದನೆಗೆ ಹೊಡೆತ ನೀಡಿತು. ಈ ಸಂದರ್ಭದಲ್ಲಿ ಹಲವು ವಿಸ್ಕಿ ಉತ್ಪಾದನಾ ಕೇಂದ್ರಗಳು ಮುಚ್ಚಿ ಹೋಗಿತ್ತು.

ಹೊಡೆತ ಕೊಟ್ಟ ಅಮೆರಿಕ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories