ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್… ಇವೆರಡರ ನಡುವಿನ ವ್ಯತ್ಯಾಸ ಗೊತ್ತಾ?

First Published | Sep 16, 2023, 2:31 PM IST

ಅಡುಗೆ ಸೋಡಾ ಮತ್ತು ಬೇಕಿಂಗ್ ಪೌಡರ್ (Baking Soda and Baking Powder) ಎರಡನ್ನೂ ಅಡುಗೆಮನೆಯಲ್ಲಿ ಬಳಸಲಾಗುತ್ತದೆ. ಹೆಚ್ಚಿನ ಜನರು ಇವೆರಡೂ ಒಂದೇ ಎಂದು ಭಾವಿಸ್ತಾರೆ. ಆದ್ರೆ ಅದು ನಿಜಾ ಅಲ್ಲ.. ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡೂ ಬೇರೆ ಬೇರೆ. ಬನ್ನಿ ಅವುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳೋಣ.
 

ಬೇಕಿಂಗ್ ಸೋಡಾ ಅಥವಾ ಬೇಕಿಂಗ್ ಪೌಡರ್ ಆಗಿರಲಿ, ಎರಡನ್ನೂ ಆಹಾರದಲ್ಲಿ ಸಾಕಷ್ಟು ಬಳಸಲಾಗುತ್ತದೆ. ನೀವು ಅಡುಗೆ (Cook) ಮಾಡಲು ಈಗಷ್ಟೇ ಕಲಿತಿದ್ದರೆ, ಈ ಎರಡು ವಿಭಿನ್ನ ಆಹಾರ ಪದಾರ್ಥಗಳನ್ನು ಒಂದೇ ಎಂದು ನೀವು ಭಾವಿಸಬಹುದು, ಆದರೆ ಇದು ನಿಜವಲ್ಲ.  ಈ ಎರಡೂ ರಾಸಾಯನಿಕಗಳು ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಇತರ ಪದಾರ್ಥಗಳೊಂದಿಗೆ ಅವುಗಳನ್ನು ಮಿಕ್ಸ್ ಮಾಡಲಾಗುತ್ತೆ. ಬೇಕಿಂಗ್ ಸಮಯದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು (carbon dioxide)  ಉತ್ಪಾದಿಸುತ್ತವೆ. ಈ ಕಾರಣಕ್ಕಾಗಿ, ಕೇಕ್ ಗಳು, ಕುಕೀಗಳು ಹೆಚ್ಚು ಉಬ್ಬುತ್ತವೆ. 

ದೀರ್ಘಕಾಲದಿಂದ ಅಡುಗೆ ಮಾಡುತ್ತಿರುವ ಜನರು ಕೆಲವೊಮ್ಮೆ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಅನ್ನು ಒಂದೇ ಎಂದು ಭಾವಿಸುತ್ತಾರೆ. ಈ ಎರಡು ರಾಸಾಯನಿಕಗಳ ಬಳಕೆ ಮತ್ತು ಉಚ್ಚಾರಣೆ ಒಂದೇ ಆಗಿರುತ್ತದೆ, ಆದರೆ ಅವುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯ.
 

Tap to resize

ಬೇಕಿಂಗ್ ಸೋಡಾ (ಸೋಡಿಯಂ ಬೈಕಾರ್ಬೊನೇಟ್) ಏನದು?
ಬೇಕಿಂಗ್ ಸೋಡಾ ಸೋಡಿಯಂ ಬೈಕಾರ್ಬೊನೇಟ್ ಎಂದು ಕರೆಯಲ್ಪಡುವ ಶುದ್ಧ ರಾಸಾಯನಿಕ ಸಂಯುಕ್ತ. ಇದು ಒಂದು ಪ್ರತ್ಯಾಮ್ಲವಾಗಿದ್ದು, ಅದರ ಹುಳಿಗೊಳಿಸುವ ಗುಣಲಕ್ಷಣಗಳನ್ನು ಸಕ್ರಿಯಗೊಳಿಸಲು ಆಮ್ಲದ ಅಗತ್ಯವಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ:
ಅಡುಗೆ ಸೋಡಾ ಪಾಕ ವಿಧಾನದಲ್ಲಿ ಆಮ್ಲದ ಜೊತೆಗೆ ಸೇರಿದಾಗ (ಮೊಸರು, ನಿಂಬೆ ರಸ ಅಥವಾ ವಿನೆಗರ್), ರಾಸಾಯನಿಕ ಪ್ರತಿಕ್ರಿಯೆ ಉಂಟಾಗುತ್ತದೆ. ಇಂಗಾಲದ ಡೈಆಕ್ಸೈಡ್ ಅನಿಲವು ಬಿಡುಗಡೆಯಾಗುತ್ತದೆ, ಇದರಿಂದಾಗಿ ಹಿಟ್ಟು ಹೆಚ್ಚಾಗುತ್ತದೆ. ಈ ಪ್ರತಿಕ್ರಿಯೆಯು ತ್ವರಿತವಾಗಿ ಸಂಭವಿಸುತ್ತದೆ, ಹಾಗಾಗಿ ಬೇಕಿಂಗ್ ಸೋಡಾ ಮಿಕ್ಸ್ ಮಾಡಿದ ಕೂಡಲೇ ನೀವು ಅದನ್ನು ಬೇಕ್ ಮಾಡಲೇಬೇಕು.

ಯಾವಾಗ ಬಳಸಬಹುದು:
ಮಜ್ಜಿಗೆ, ಹುಳಿ ಕ್ರೀಮ್ ಮೊಸರು, ಮೊದಲಾದ ಆಮ್ಲೀಯ ಪದಾರ್ಥಗಳನ್ನು ಹೊಂದಿರುವ ಪಾಕವಿಧಾನಗಳಿಗೆ ಬೇಕಿಂಗ್ ಸೋಡಾ ಸೂಕ್ತ. ಇದನ್ನು ಸಾಮಾನ್ಯವಾಗಿ ಪ್ಯಾನ್ ಕೇಕ್ ಗಳು, ಬ್ರೆಡ್ ಮತ್ತು ಕೆಲವು ಕುಕೀಗಳನ್ನು ಮಾಡುವಾಗ ಬಳಸಲಾಗುತ್ತೆ.

ಬೇಕಿಂಗ್ ಪೌಡರ್:
ಬೇಕಿಂಗ್ ಪೌಡರ್ ಎಂಬುದು ಬೇಕಿಂಗ್ ಸೋಡಾ, ಆಮ್ಲ ( ಟಾರ್ಟಾರ್ ನ ಕ್ರೀಮ್) ಮತ್ತು ಪಿಷ್ಟ (corn starch) ಮಿಶ್ರಣ. ಇದರಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ: ಸಿಂಗಲ್-ಆಕ್ಟಿಂಗ್ ಮತ್ತು ಡಬಲ್-ಆಕ್ಟಿಂಗ್.
 

ಇದು ಹೇಗೆ ಕಾರ್ಯನಿರ್ವಹಿಸುತ್ತದೆ:
ಸಿಂಗಲ್-ಆಕ್ಟಿಂಗ್ ಬೇಕಿಂಗ್ ಪೌಡರ್ ಪಾಕವಿಧಾನದಲ್ಲಿ ದ್ರವ ಮತ್ತು ಆಮ್ಲದೊಂದಿಗೆ ಬೆರೆಸಿದ ತಕ್ಷಣ ಇಂಗಾಲದ ಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ.
ಮತ್ತೊಂದೆಡೆ, ಡಬಲ್-ಆಕ್ಟಿಂಗ್ ಬೇಕಿಂಗ್ ಪೌಡರ್, ಬೆರೆಸಿದಾಗ ಮತ್ತು ಬೇಕಿಂಗ್ ಸಮಯದಲ್ಲಿ ಶಾಖಕ್ಕೆ ಒಡ್ಡಿಕೊಂಡಾಗ ಅನಿಲವನ್ನು ಬಿಡುಗಡೆ ಮಾಡುತ್ತದೆ.

ಯಾವಾಗ ಬಳಸಬಹುದು?
ಬೇಕಿಂಗ್ ಪೌಡರ್ ನ್ನು ವಿವಿಧ ಪಾಕವಿಧಾನದಲ್ಲಿ ಬಳಕೆ ಮಾಡಬಹುದು ಮತ್ತು ಆಮ್ಲೀಯ ಅಂಶಗಳಿಲ್ಲದ ಪಾಕವಿಧಾನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಹೆಚ್ಚಾಗಿ ಕೇಕ್ಗಳು, ಮಫಿನ್ಗಳು(muffins) ಮತ್ತು ಬಿಸ್ಕತ್ತುಗಳಲ್ಲಿ ಬಳಸಲಾಗುತ್ತದೆ.

ಇವೆರಡನ್ನು ಸಿಂಪಲ್ ಆಗಿ ಹೇಳೋದಾದರೆ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡು ವಿಭಿನ್ನ ರಾಸಾಯನಿಕಗಳು. ಅಡಿಗೆ ಸೋಡಾ 100 ಪ್ರತಿಶತ ಸೋಡಿಯಂ ಬೈಕಾರ್ಬೊನೇಟ್ ಆಗಿದೆ, ಇದು ಕ್ಷಾರೀಯ ಸಾಲ್ಟ್ ಕಂಪೌಂಡ್ ಹೊಂದಿದೆ ಮತ್ತು ಇದು ಆಮ್ಲದೊಂದಿಗೆ ಬೆರೆತಾಗ,  ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ, ಬೇಕಿಂಗ್ ಪೌಡರ್ ಸೋಡಿಯಂ ಬೈಕಾರ್ಬೊನೇಟ್ ಮತ್ತು ಆಮ್ಲದ (ಟಾರ್ಟಾರ್ ನಂತಹ) ಮಿಶ್ರಣವಾಗಿದ್ದು, ಸಕ್ರಿಯಗೊಳಿಸಲು ತೇವಾಂಶ ಅಥವಾ ಶಾಖದ ಅಗತ್ಯವಿದೆ.
 

ಸಂಗ್ರಹಣೆ: (Storage)
ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡನ್ನೂ ಗಾಳಿಯಾಡದ ಪಾತ್ರೆಗಳಲ್ಲಿ ತಂಪಾದ, ಅಥವಾ ಶುಷ್ಕ ಸ್ಥಳದಲ್ಲಿ ಇರಿಸಿ.
ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಬೇಕರ್ ಬಳಿ ಇರಲೇಬೇಕಾದ ಅತ್ಯಗತ್ಯ ಸಾಮಾಗ್ರಿಗಳಾಗಿವೆ. 
ಕೇಕ್ ಆಗಲಿ, ಮಫಿನ್, ಕುಕ್ಕೀಸ್ ಏನೇ ಆಗಲಿ, ಇವುಗಳನ್ನು ತಯಾರಿಸುವಾಗ ನೀವು ಸರಿಯಾದ ಪ್ರಮಾಣದ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಬಳಸಿದಾಗ ಮಾತ್ರ ಕೇಕ್ ಚೆನ್ನಾಗಿ ಬರಲು ಸಾಧ್ಯ. 

Latest Videos

click me!