ಮೊಟ್ಟೆ, ಆಲೂ, ಅನ್ನ...ಇವನ್ನೆಲ್ಲಾ ಮೈಕ್ರೋವೇ‌ವ್‌ನಲ್ಲಿ ಬಿಸಿ ಮಾಡಿದರೇನಾಗುತ್ತೆ?

Published : Sep 14, 2023, 02:33 PM ISTUpdated : Sep 14, 2023, 02:36 PM IST

ಮೈಕ್ರೋವೇವ್ ಇದ್ರೆ ಅಡುಗೆ ಎಲ್ಲಾನೂ ಸುಲಭದಲ್ಲಿ ಆಗುತ್ತೆ ಎಂದು ಜನ ಅಂದುಕೊಂಡಿದ್ದಾರೆ. ಇದು ನಿಜಾ. ಆದರೆ ಮೈಕ್ರೋವೇವ್ ನಲ್ಲಿ ಅಡುಗೆ ಮಾಡೋದರಿಂದ ಏನೆಲ್ಲಾ ಸಮಸ್ಯೆಗಳು ಕಾಡಲಿವೆ ಅನ್ನೋದು ನಿಮಗೆ ಗೊತ್ತೆ? ಅದಕ್ಕೂ ಮುನ್ನ ಯಾವ ಆಹಾರಗಳನ್ನು ಮೈಕ್ರೋವೇವ್ ನಲ್ಲಿ ಮತ್ತೆ ಬಿಸಿ ಮಾಡಬಾರದು ಅನ್ನೋದನು ತಿಳಿಯಿರಿ.   

PREV
110
ಮೊಟ್ಟೆ, ಆಲೂ, ಅನ್ನ...ಇವನ್ನೆಲ್ಲಾ ಮೈಕ್ರೋವೇ‌ವ್‌ನಲ್ಲಿ ಬಿಸಿ ಮಾಡಿದರೇನಾಗುತ್ತೆ?

ಮೊಟ್ಟೆ (Eggs)
ಹಸಿ, ಬೇಯಿಸಿದ ಮೊಟ್ಟೆಯಾಗಲಿ ಅಥವಾ ಮೊಟ್ಟೆಯಿಂದ ಮಾಡಿದ ಯಾವುದೇ ಆಹಾರವಾಗಲಿ ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು. ಮೈಕ್ರೋವೇವ್ ನಲ್ಲಿ ಮೊಟ್ಟೆಗಳನ್ನು ಬೇಯಿಸೋ ಮುನ್ನ ಎಚ್ಚರವಿರಲಿ., ಏಕೆಂದರೆ ಮೈಕ್ರೋವೇವ್ ನಲ್ಲಿ (microwave) ಮೊಟ್ಟೆಯನ್ನು ಬಿಸಿ ಮಾಡುವುದರಿಂದ ಅದರೊಳಗಿನ ತಾಪಮಾನ (Temperature) ಹೆಚ್ಚಾಗುತ್ತದೆ, ಆದರೆ ಮೈಕ್ರೋವೇವ್ ತರಂಗಗಳು ಮೊಟ್ಟೆಯ ಚಿಪ್ಪನ್ನು ಬಿಸಿ ಮಾಡುವುದಿಲ್ಲ, ಇದರಿಂದ ಅದು ಮುರಿಯಬಹುದು. ಇದರಿಂದ ಮೊಟ್ಟೆ ಸಿಡಿಯುತ್ತದೆ. 

210

ಎದೆ ಹಾಲು (Breast milk)
ಅನೇಕ ತಾಯಂದಿರು ತಮ್ಮ ಎದೆಹಾಲನ್ನು ಫ್ರೀಜ್ ಮಾಡಿ ನಂತರದ ಬಳಕೆಗಾಗಿ ಸಂಗ್ರಹಿಸುತ್ತಾರೆ, ಆದರೆ ಇದನ್ನ ಮೈಕ್ರೋವೇವ್ ನಲ್ಲಿ ಬಿಸಿ ಮಾಡೋದು ಒಳ್ಳೆಯದಲ್ಲ. ಮಕ್ಕಳ ಹಾಲಿನ ಬಾಟಲಿಯನ್ನು ಮೈಕ್ರೋವೇವ್‌ನಲ್ಲಿಟ್ಟು ಬಿಸಿ ಮಾಡೋದರಿಂದ ಇದು ಮಗುವಿನ ಬಾಯಿ ಮತ್ತು ಗಂಟಲನ್ನು ತೀವ್ರವಾಗಿ ಸುಡುವ ಸಾಧ್ಯತೆ ಇದೆ. ಅಲ್ಲದೇ ಪ್ಲಾಸ್ಟಿಕ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ. 

310

ಸಂಸ್ಕರಿಸಿದ ಮಾಂಸ(processed meat)
ಸಂಸ್ಕರಿಸಿದ ಮಾಂಸಗಳು ಹೆಚ್ಚಾಗಿ ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು (Preservatives) ಹೊಂದಿರುತ್ತವೆ, ಅದು ಅವುಗಳ ಬಾಳಿಕೆಯ ಅವಧಿಯನ್ನು ಹೆಚ್ಚಿಸುತ್ತೆ. ಅವುಗಳನ್ನು ಮೈಕ್ರೋವೇವ್ ಮಾಡುವುದರಿಂದ ಆ ವಸ್ತುಗಳು ನಿಮ್ಮ ಆರೋಗ್ಯಕ್ಕೆ (Health) ಕೆಟ್ಟದಾಗಬಹುದು. ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿಯಲ್ಲಿನ (Journal of Agriculture and Food Chemistry) ಸಂಶೋಧನೆಯ ಪ್ರಕಾರ, ಸಂಸ್ಕರಿಸಿದ ಮಾಂಸಗಳನ್ನು ಮೈಕ್ರೋವೇವ್ ಮಾಡುವಾಗ, ರಾಸಾಯನಿಕ ಬದಲಾವಣೆ ಉಂಟಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 
 

410

ಸೊಪ್ಪು (Green vegetables)
ಸೆಲರಿ, ಕೇಲ್ ಅಥವಾ ಪಾಲಕ್ ಯಾವುದೇ ಸೊಪ್ಪು ತರಕಾರಿ ಪಲ್ಯ, ಸಾರು ಉಳಿದಿದ್ದರೆ, ಅದನ್ನು ಮತ್ತೆ ತಿನ್ನಲು ಮೈಕ್ರೋವೇವ್ ನಲ್ಲಿ ಬಿಸಿಮಾಡಬೇಡಿ. ಬದಲಾಗಿ ಸಾಂಪ್ರದಾಯಿಕ ಒಲೆಯಲ್ಲಿ T(traditional Stove) ಮತ್ತೆ ಬಿಸಿ ಮಾಡಿ. ಮೈಕ್ರೋವೇವ್ನಲ್ಲಿ ಬಿಸಿ ಮಾಡಿದ್ರೆ, ನೈಸರ್ಗಿಕವಾಗಿ ಸಂಭವಿಸುವ ನೈಟ್ರೇಟ್‌ಗಳು ನೈಟ್ರೋಸಮೈನ್‌ಗಳಾಗಿ ಬದಲಾಗಬಹುದು, ಇದು ಕ್ಯಾನ್ಸರ್ ಕಾರಕವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.  

510

ಆಲೂಗಡ್ಡೆ (Potato)
ಬೇಯಿಸಿದ ಆಲೂಗಡ್ಡೆಯನ್ನು ಮತ್ತೆ ಬಿಸಿ ಮಾಡಲು ಪ್ರಯತ್ನಿಸಿದರೆ ಅಪಾಯ ಉಂಟಾಗುತ್ತೆ. ಅಲ್ಯೂಮಿನಿಯಂ ಫಾಯಿಲ್ನಲ್ಲಿ ಆಲೂಗಡ್ಡೆಯನ್ನು ಬೇಯಿಸುವುದು ಬ್ಯಾಕ್ಟೀರಿಯಾ ಹೆಚ್ಚಾಗಲು ಕಾರಣವಾಗುತ್ತದೆ. ಆದುದರಿಂದ ಇದನ್ನು ಆಲೂಗಡ್ಡೆ ತಯಾರಿಸಿದಾಗ, ಆದಷ್ಟು ಬೇಗ ಅದನ್ನು ತಿಂದು ಮುಗಿಸುವುದು ಉತ್ತಮ. ಮತ್ತೆ ಬಿಸಿ ಮಾಡಿದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. 

610

ಚಿಕನ್ (chicken)
ಚಿಕನ್ ಉತ್ತಮ ಆಹಾರ ನಿಜಾ. ಆದರೆ ಇದನ್ನ ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು. ಮೈಕ್ರೋವೇವ್ ನಲ್ಲಿ ಚಿಕನ್ ಬಿಸಿ ಮಾಡುವುದು ಅದರ ಪ್ರೋಟೀನ್ ನ ರಚನೆಯನ್ನು ಬದಲಾಯಿಸುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಸಂದರ್ಭದಲ್ಲಿ, ಚಿಕನ್ ಅನ್ನು ಮೈಕ್ರೋವೇವ್ ನಲ್ಲಿ ಮತ್ತೆ ಬಿಸಿ ಮಾಡಬಾರದು. ಇದನ್ನು ಆದಷ್ಟು ತಪ್ಪಿಸುವುದು ಉತ್ತಮ.

710

ಮೆಣಸು (Hot Mirchi)
ಮೆಣಸನ್ನು ಮೈಕ್ರೋವೇವ್ನಲ್ಲಿ ಮತ್ತೆ ಬಿಸಿ ಮಾಡಿದಾಗ, ಅವುಗಳ ಮಸಾಲೆ ಪರಿಮಳವನ್ನು ನೀಡುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವು ಗಾಳಿಯಲ್ಲಿ ಬಿಡುಗಡೆಯಾಗುತ್ತದೆ. ಗಾಳಿಯಲ್ಲಿ ಹರಡುವ ರಾಸಾಯನಿಕವು ನಿಮ್ಮ ಕಣ್ಣುಗಳು ಮತ್ತು ಗಂಟಲಿಗೆ ಹಾನಿ ಮಾಡಬಹುದು. ಇದರಿಂದ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 
 

810

ಅಕ್ಕಿ (Rice)
ಬೇಗನೆ ಅನ್ನ ರೆಡಿಯಾಗುತ್ತೆ ಎಂದು ಜನರು ಹೆಚ್ಚಾಗಿ ಮೈಕ್ರೋವೇವ್ ನಲ್ಲಿ ಅಕ್ಕಿ ಇಟ್ಟು ಅನ್ನ ಮಾಡೊದನ್ನು ಅಥವಾ ಅನ್ನವನ್ನು ಬಿಸಿ ಮಾಡೋದನ್ನು ನಾವು ನೋಡಿರಬಹುದು. ಆದರೆ ಮೈಕ್ರೋವೇವ್ ನಲ್ಲಿ ಅನ್ನವನ್ನು ಬಿಸಿ ಮಾಡುವುದು ಆಹಾರ ವಿಷಕ್ಕೆ ಕಾರಣವಾಗಬಹುದು, ಏಕೆಂದರೆ ಇದರಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಆರೋಗ್ಯಕ್ಕೆ ಹಾನಿಕಾರಕವಾದ ಬೀಜಗಳನ್ನು ಉತ್ಪಾದಿಸುತ್ತದೆ. ಸಂಶೋಧನೆಯ ಪ್ರಕಾರ, ಮೈಕ್ರೋವೇವ್ ನಲ್ಲಿ ಮಾಡಿದ ಬಿಸಿ ಅನ್ನವನ್ನು ತಿನ್ನುವುದರಿಂದ ವಾಂತಿ ಅತಿಸಾರ ಮತ್ತು ಜೀರ್ಣಾಂಗ ಸಮಸ್ಯೆಗಳು ಉಂಟಾಗಬಹುದು.

910

ದ್ರಾಕ್ಷಿ (Grapes)
ದ್ರಾಕ್ಷಿಗಳನ್ನು ಎಂದಿಗೂ ಮೈಕ್ರೋವೇವ್ ಮಾಡಬಾರದು, ಯಾಕೆಂದರೆ ಇದನ್ನು ಬಿಸಿ ಮಾಡಿದಾಗ ಹೆಚ್ಚಿನ ಪ್ಲಾಸ್ಮಾ ಬಿಡುಗಡೆಯಾಗುತ್ತಂತೆ. ಈ ಪ್ಲಾಸ್ಮಾ ಬಿಡುಗಡೆಯಿಂದ ದ್ರಾಕ್ಷಿಯನ್ನಿಟ್ಟ ಪ್ಲಾಸ್ಟಿಕ್ ತಟ್ಟೆಯೇ ಸುಟ್ಟು ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಅಥವಾ ಈ ಹಣ್ಣು ಸಿಡಿಯಲು ಪ್ರಾರಂಭವಾಗುತ್ತೆ. 

1010

ಬೀಟ್ರೂಟ್ (beetroot)
ಪಾಲಕ್ ಗೆ ಸಂಭವಿಸುವ ಅದೇ ರಾಸಾಯನಿಕ ಪರಿವರ್ತನೆಯು ನೈಟ್ರೇಟ್ ಭರಿತ ಬೀಟ್ ರೂಟ್ ಮತ್ತು ಇತರ ಗೆಡ್ಡೆಗಳನ್ನು ಮತ್ತೆ ಬಿಸಿ ಮಾಡುವಾಗಲು ಉಂಟಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಹಾಗಾಗಿ ಬೀಟ್ರೂಟ್ ನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಬೇಡಿ.

Read more Photos on
click me!

Recommended Stories