ಜೇಡ, ಹಾವಿನ ವಿಷ, ಹೊಕ್ಕುಳಿನ ಮಣ್ಣು ಈ ವಿಚಿತ್ರ ಡ್ರಿಂಕ್ಸ್ ಟ್ರೈ ಮಾಡಿದ್ದೀರಾ?

First Published | Apr 3, 2024, 5:37 PM IST

ಇಂದು ನಾವು ನಿಮಗೆ ವಿಶ್ವದ 5 ವಿಲಕ್ಷಣ ಡ್ರಿಂಕ್ಸ್ ಬಗ್ಗೆ ಹೇಳಲಿದ್ದೇವೆ. ಈ ಡ್ರಿಂಕ್ಸ್ ಗಳಲ್ಲಿ ಕೆಲವು ಎಷ್ಟು ವಿಲಕ್ಷಣವಾಗಿವೆಯೆಂದರೆ, ಅವುಗಳ ಬಗ್ಗೆ ತಿಳಿದ ನಂತರ, ನೀವು ಅದನ್ನು ಕುಡಿಯೋದು ಬಿಡಿ, ನೋಡೋಕು ಸಹ ಭಯ ಪಡ್ತೀರಿ. ಅಂತಹ ಡ್ರಿಂಕ್ಸ್ ಯಾವುದಿದೆ ನೋಡೋಣ. 
 

ಚಹಾ-ಕಾಫಿ, ಜ್ಯೂಸ್, ಕೂಲ್ ಡ್ರಿಂಕ್ಸ್ ಪ್ರಿಯರ (cool drinks) ಜೊತೆಗೆ, ವೈನ್ ಪ್ರಿಯರೂ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಈ ಎಲ್ಲ ಪಾನೀಯಗಳು ಸಾಕಷ್ಟು ಸಾಮಾನ್ಯ. ಆದರೆ ಕೆಲವರು ಕುಡಿಯೋ ಡ್ರಿಂಕ್ಸ್ ಬಗ್ಗೆ ಕೇಳಿದ್ರೆ, ಶಾಕ್ ಆಗುತ್ತೆ. ಮೈಯ ರೋಮವೆಲ್ಲಾ ಎದ್ದು ನಿಲ್ಲೋದು ಗ್ಯಾರಂಟಿ. ಇಂದು ನಾವು ನಿಮಗೆ ವಿಶ್ವದ 5 ವಿಚಿತ್ರ ಪಾನೀಯಗಳ ಬಗ್ಗೆ ಹೇಳಲಿದ್ದೇವೆ. ಈ ಪಾನೀಯಗಳಲ್ಲಿ ಕೆಲವು ಎಷ್ಟು ವಿಚಿತ್ರವಾಗಿವೆ ಅಂದ್ರೆ, ಅವುಗಳ ಬಗ್ಗೆ ತಿಳಿದ್ರೆ, ಕುಡಿಯೋದಿರಲಿ, ನೋಡೋದಕ್ಕೂ ಭಯಪಡ್ತೀರಿ. 

ಸ್ನೇಕ್ ವೈನ್ (Snake Wine) - ಈ ಪಟ್ಟಿಯಲ್ಲಿ ಮೊದಲ ಹೆಸರು ಸ್ನೇಕ್ ವೈನ್. ಅಟ್ಲಾಸ್ ಅಬ್ಸ್ಕ್ಯೂರ್ ವೆಬ್ಸೈಟ್ ಪ್ರಕಾರ, ಸ್ನೇಕ್ ವೈನ್ ಅನ್ನು (snake wine) ಸಾಮಾನ್ಯ ವೈನ್ನಂತೆ ಅಕ್ಕಿಯಿಂದ ತಯಾರಿಸಲಾಗುತ್ತದೆ, ಆದರೆ ಅದರ ಬಾಟಲಿಯಲ್ಲಿ ವಿಷಕಾರಿ ಹಾವನ್ನು ಸಹ ಹಾಕಿರೋದನ್ನು ನೋಡಬಹುದು. ವಿಷಕಾರಿ ಹಾವನ್ನು ಈ ವೈನ್ ನಲ್ಲಿ ಇರಿಸಲಾಗುತ್ತದೆ ಮತ್ತು ಈ ವೈನ್ ಹಳೆಯದಾದಂತೆ ಅದನ್ನು ಕುಡಿಯಲಾಗುತ್ತದೆ. 

Latest Videos


ವರದಿಗಳ ಪ್ರಕಾರ, ಸ್ನೇಕ್ ವಿಸ್ಕಿಯನ್ನು (snake whiskey) ಜಪಾನ್ ನ ಒಕಿನಾವಾ ದ್ವೀಪ ಮತ್ತು ಚೀನಾದಲ್ಲಿ ತಯಾರಿಸಲಾಗುತ್ತದೆ. ಸತ್ತ ಪಿಟ್ ವೈಪರ್ ಹಾವನ್ನು ವೈನ್ ಬಾಟಲಿಯಲ್ಲಿ ಹಾಕಿ ನಂತರ ಆಲ್ಕೋಹಾಲ್ ತುಂಬಿಸಿ ತಿಂಗಳುಗಳವರೆಗೆ ಇಡಲಾಗುತ್ತದೆ. ಈ ರೀತಿ ಮಾಡಿದರೆ ಹಾವಿನ ವಿಷ ತಟಸ್ಥವಾಗಿ, ಕುಡಿಯಲು ಯೋಗ್ಯವಾಗುತ್ತದೆ. ಈ ವೈನ್ ಅನ್ನು ಚೀನಾ, ವಿಯೆಟ್ನಾಂ ಮುಂತಾದ ಸ್ಥಳಗಳಲ್ಲಿ ಕುಡಿಯಲಾಗುತ್ತದೆ. 

ಕಿಡ್ಸ್ ಬಿಯರ್ (Kids Beer) - ನೀವು ಚಿಕ್ಕವರಿದ್ದಾಗ, ಮಕ್ಕಳಿಗಾಗಿ ತಯಾರಿಸಿದ ಸಿಗರೇಟ್ ಕ್ಯಾಂಡಿಯನ್ನು ಸಹ ತಿಂದಿರಬೇಕು ಅಲ್ವಾ?.  ಆದರೆ ಒಂದು ದೇಶದಲ್ಲಿ, ಸಿಗರೇಟುಗಳು ಮಾತ್ರವಲ್ಲ, ಮಕ್ಕಳಿಗೂ ಬಿಯರ್ ಲಭ್ಯವಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಚಿತ, ಇದನ್ನು ಕಿಡ್ಸ್ ಬಿಯರ್ (kids beer)ಎಂದೂ ಕರೆಯಲಾಗುತ್ತದೆ. ಜಪಾನ್ ನಲ್ಲಿ, ಈ ಬಿಯರ್ ತಯಾರಾಗುತ್ತೆ, ಇದು ಕೋಲಾದಂತೆ ರುಚಿ ಹೊಂದಿದೆ, ಆದರೆ ಇದು ಆಲ್ಕೋಹಾಲ್ ಹೊಂದಿರೋದಿಲ್ಲ. ಆದರೆ ಈ ಬಿಯರ್ ನ ವಿನ್ಯಾಸ, ಲುಕ್, ಅದರಲ್ಲಿ ಬರುವ ನೊರೆ ಎಲ್ಲವೂ ನಿಜವಾದ ಬಿಯರ್ ನಂತೆ ಕಾಣುತ್ತದೆ

ಬೆಲ್ಲಿ ಬಟನ್ ಬಿಯರ್ (Belly Button Beer)- ನಿಮ್ಮ ಹೊಕ್ಕುಳಿನಲ್ಲಿ ಕೊಳೆ ಸಂಗ್ರಹವಾದಾಗ, ಹತ್ತಿಯಂತಹ ವಸ್ತುವು ರೂಪುಗೊಳ್ಳುವುದನ್ನು ನೀವು ಗಮನಿಸಿರಬಹುದು, ಅದನ್ನು ಜನರು ತಮ್ಮ ಬೆರಳುಗಳಿಂದ ತೆಗೆದುಹಾಕುತ್ತಾರೆ. ಆಸ್ಟ್ರೇಲಿಯಾದಲ್ಲಿ ವಿಶೇಷ ರೀತಿಯ ಬಿಯರ್ ತಯಾರಿಸಲಾಗುತ್ತದೆ ಇದನ್ನು ಹೊಕ್ಕುಳಿನ (belly button beer)ಈ ವಸ್ತುಗಳನ್ನು ಬೆರೆಸುವ ಮೂಲಕ ತಯಾರಿಸಲಾಗುತ್ತದೆ. ಆಸ್ಟ್ರೇಲಿಯಾದ 7 ಸೆಂಟ್ ಬ್ರೂವರಿ ಈ ಬಿಯರ್ ತಯಾರಿಸುತ್ತದೆ. 

ಅರಗೋಗ್ - ಆಡಿಟಿ ಸೆಂಟ್ರಲ್ ಸುದ್ದಿ ವೆಬ್ಸೈಟ್ ವರದಿ ಪ್ರಕಾರ, ಮೆಕ್ಸಿಕೊದಲ್ಲಿ ವಿಶೇಷ ರೀತಿಯ ಕಾಕ್ಟೈಲ್ ತಯಾರಿಸಲಾಗುತ್ತದೆ, ಇದನ್ನು ಅರಗೋಗ್ ಎಂದು ಕರೆಯಲಾಗುತ್ತದೆ. ನೀವು ವಂಡರ್ ಪಾಟರ್ ಚಲನಚಿತ್ರವನ್ನು ನೋಡಿದ್ದರೆ, ಎರಡನೇ ಭಾಗದಲ್ಲಿ ದೊಡ್ಡ ಜೇಡವಿದೆ, ಅದರ ಹೆಸರು ಟ್ಯಾರಂಟುಲಾ. ಈ ಕಾಕ್ಟೈಲ್ ಅನ್ನು ಇದೇ ಜೇಡದ ವಿಷವನ್ನು ಬೆರೆಸುವ ಮೂಲಕವೂ ತಯಾರಿಸಲಾಗುತ್ತದೆ. ಇದನ್ನು ಕುಡಿಯುವುದರಿಂದ ನಾಲಿಗೆ ಮರಗಟ್ಟುತ್ತದೆ. 
 

ಆಂಟ್ ಜಿನ್- ಆಸ್ಟ್ರೇಲಿಯಾದಲ್ಲಿ ತಯಾರಿಸಲಾಗುವ ಈ ವೈನ್ ಅನ್ನು ಇರುವೆಯಿಂದ ತಯಾರಿಸಲಾಗುತ್ತದೆ. ಜನರು ಆಲ್ಕೋಹಾಲ್ (Alchohol) ಅಡಿಯಲ್ಲಿ ಉಳಿದಿರುವ ಇರುವೆಗಳನ್ನು ಜಗಿಯುತ್ತಾರೆ ಮತ್ತು ತಿನ್ನುತ್ತಾರೆ. ಪ್ರಾಚೀನ ಕಾಲದಲ್ಲಿ, ಆಸ್ಟ್ರೇಲಿಯಾದ ಜನರು ಇದನ್ನು ಔಷಧಿಯಾಗಿಯೂ ಬಳಸುತ್ತಿದ್ದರು.
 

click me!