ನಕಲಿ ಗೋಧಿಹಿಟ್ಟು ಮಾರಾಲಾಗುತ್ತಿದೆ… ಎಚ್ಚರದಿಂದ ಅಯ್ಕೆ ಮಾಡಿ

First Published | Dec 5, 2022, 5:38 PM IST

ಮಾರುಕಟ್ಟೆಯಲ್ಲಿ ತಿನ್ನುವಂತಹ ಅನೇಕ ನಕಲಿ ಪದಾರ್ಥಗಳನ್ನು ಬೇಕಾಬಿಟ್ಟಿ ಮಾರಲಾಗುತ್ತಿದೆ. ಮೊಟ್ಟೆಯಿಂದ ಹಿಡಿದು ಗೋಧಿ ಹಿಟ್ಟಿನವರೆಗೆ, ನಕಲಿ ವಸ್ತುಗಳೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದು ನಿಜ. ಇದನ್ನು ತಿನ್ನೋದರಿಂದ ಅನೇಕ ರೀತಿಯ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ನಕಲಿ ಗೋಧಿಹಿಟ್ಟನ್ನು ಗುರುತಿಸೋದು ಹೇಗೆಂದು ತಿಳಿಯೋಣ.

ಈ ಹಿಂದೆ ಜನರು ಗೋಧಿಯನ್ನು ತೊಳೆದು ಗಿರಣಿಯಲ್ಲಿಯೇ ಪೌಡರ್ ಮಾಡಲು ತೆಗೆದುಕೊಂಡು ಹೋಗ್ತಿದ್ರು. ಆದರೆ ಈಗ ಟೈಮ್ ಇಲ್ಲ ಎನ್ನೋ ಕಾರಣಕ್ಕೆ ಜನರು ಪ್ಯಾಕ್ ಮಾಡಿದ ಗೋಧಿಹಿಟ್ಟನ್ನು(wheat flour) ಖರೀದಿಸಲು ಪ್ರಾರಂಭಿಸಿದ್ದಾರೆ. ಪ್ಯಾಕ್ ಮಾಡಿದ ಗೋಧಿಹಿಟ್ಟಿನ ಪರಿಶುದ್ಧತೆಯ ಬಗ್ಗೆ ಯಾವುದೇ ಗ್ಯಾರಂಟಿ ಇರೋದಿಲ್ಲ. ಇಷ್ಟೇ ಅಲ್ಲ, ಗೋಧಿಹಿಟ್ಟನ್ನು ಕಲಬೆರಕೆ ಮಾಡುವ ಮೂಲಕ ಅದನ್ನು ಬೇಕಾಬಿಟ್ಟಿ ಮಾರಾಟ ಮಾಡಲಾಗುತ್ತಿದೆ. 

ನಕಲಿ ಮತ್ತು ನಿಜವಾದ ಗೋಧಿಹಿಟ್ಟನ್ನು ಗುರುತಿಸೋದು ತುಂಬಾ ಕಷ್ಟ. ನಕಲಿ ಗೋಧಿ ಹಿಟ್ಟನ್ನು ತಿನ್ನೋದರಿಂದ, ಅನೇಕ ಗಂಭೀರ ಸಮಸ್ಯೆಗಳು ಸಹ ಉದ್ಭವಿಸಬಹುದು. ಹಾಗಾಗಿ, ನಕಲಿ ಗೋಧಿಹಿಟ್ಟನ್ನು ಗುರುತಿಸೋದು ಬಹಳ ಮುಖ್ಯ. ನಿಜವಾದ ಮತ್ತು ನಕಲಿ ಹಿಟ್ಟಿನ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸೋದು ಎಂದು ಇಲ್ಲಿ ನೋಡೋಣ.

Tap to resize

ಮೊದಲ ಮಾರ್ಗ

ನಕಲಿ ಗೋಧಿಹಿಟ್ಟನ್ನು ಗುರುತಿಸಲು ಒಂದು ಲೋಟ ನೀರು (Water) ಬೇಕು. ಮೊದಲು, ಒಂದು ಲೋಟದಲ್ಲಿ ನೀರನ್ನು ತೆಗೆದುಕೊಳ್ಳಿ. ಇದರ ನಂತರ, ಅದಕ್ಕೆ ಅರ್ಧ ಟೀಸ್ಪೂನ್ ಗೋಧಿ ಹಿಟ್ಟನ್ನು ಸೇರಿಸಿ. ನಂತರ 10 ರಿಂದ 20 ಸೆಕೆಂಡುಗಳ ಕಾಲ ಕಾಯಿರಿ. ಹಿಟ್ಟು ನೀರಿನಲ್ಲಿ ತೇಲುತ್ತಿದ್ದರೆ, ಅದು ನಕಲಿ ಎಂದು ಅರ್ಥಮಾಡಿಕೊಳ್ಳಿ. ಮುಳುಗಿದ್ರೆ ಅದು ಒರಿಜಿನಲ್.

ಎರಡನೆಯ ಮಾರ್ಗ

ಎರಡನೇ ಮಾರ್ಗವೆಂದರೆ ಚಪಾತಿ ತಯಾರಿಸುವಾಗಲೂ ಆಗಿರಬಹುದು. ಗೋಧಿಹಿಟ್ಟನ್ನು ನಾದುವಾಗ, ಅದು ತುಂಬಾ ಮೃದುವಾಗಿದೆ ಎಂದು ನಿಮಗೆ ಅನಿಸಿದ್ರೆ, ಗೋಧಿಹಿಟ್ಟು ಒರಿಜಿನಲ್ ಎಂದು ಅರ್ಥಮಾಡಿಕೊಳ್ಳಿ. ಆದರೆ ನಕಲಿ ಗೋಧಿಹಿಟ್ಟು ಮೃದುವಾಗಿರೋದಿಲ್ಲ. ಹಿಟ್ಟನ್ನು ನಾದುವಾಗ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು.

ಮೂರನೆಯ ಮಾರ್ಗ

ಮೂರನೆಯ ಮಾರ್ಗವೆಂದರೆ ಗೋಧಿಹಿಟ್ಟನ್ನು ನಾದುವಾಗ ಎಷ್ಟು ನೀರನ್ನು ಬಳಸಲಾಗುತ್ತಿದೆ ಎಂಬುದನ್ನು ಗಮನಿಸೋದು. ನಕಲಿ ಗೋಧಿಹಿಟ್ಟನ್ನು ನಾದಲು ಹೆಚ್ಚಿನ ನೀರಿನ ಅಗತ್ಯವಿದೆ. ನಿಜವಾದ ಹಿಟ್ಟನ್ನು ಬೇಗ ನಾದಿಕೊಳ್ಳಲಾಗುತ್ತೆ ಮತ್ತು ಮೃದುವಾಗಿರುತ್ತೆ. ಇಷ್ಟೇ ಅಲ್ಲ, ನಿಜವಾದ ಹಿಟ್ಟಿನ ಚಪಾತಿಗಳು (Chapathi) ಸಾಕಷ್ಟು ಮೃದುವಾಗಿರುತ್ತವೆ. ಹಲವು ಗಂಟೆಗಳ ನಂತರವೂ, ಅದು ತಾಜಾ ಮತ್ತು ಮೃದುವಾಗಿರುತ್ತೆ. ಆದರೆ ನಕಲಿ ಗೋಧಿಹಿಟ್ಟಿನಿಂದ ಮಾಡಿದ ಚಪಾತಿ ಮೃದುವಾಗಿರೋದಿಲ್ಲ.

ನಾಲ್ಕನೆಯ ಮಾರ್ಗ

ಗೋಧಿಹಿಟ್ಟಿನ ಕಲಬೆರಕೆಯನ್ನು ಕಂಡು ಹಿಡಿಯಲು ಹೈಡ್ರೋಕ್ಲೋರಿಕ್ ಆಸಿಡ್ (Hydrocholoric acid) ಬಳಸೋದು ನಾಲ್ಕನೇ ಮಾರ್ಗ. ಹೈಡ್ರೋಕ್ಲೋರಿಕ್ ಆಸಿಡ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಅದರೊಂದಿಗೆ ಒಂದು ಟೆಸ್ಟ್ ಟ್ಯೂಬ್ ತನ್ನಿ. ಮೊದಲಿಗೆ, ಅರ್ಧ ಟೀಸ್ಪೂನ್ ಗೋಧಿಹಿಟ್ಟನ್ನು ಟೆಸ್ಟ್ ಟ್ಯೂಬ್‌ಗೆ ಹಾಕಿ ಮತ್ತು ನಂತರ ಅದಕ್ಕೆ ಹೈಡ್ರೋಕ್ಲೋರಿಕ್ ಆಸಿಡ್ ಸೇರಿಸಿ. ನಂತರ ಅದನ್ನು ಎಚ್ಚರಿಕೆಯಿಂದ ನೋಡಿ, ಅದರಲ್ಲಿ ಏನಾದರೂ ಫಿಲ್ಟರ್ ಮಾಡುವಂಥದ್ದನ್ನು ನೀವು ನೋಡಿದರೆ, ಅದು ಕಲಬೆರಕೆ ಗೋಧಿಹಿಟ್ಟು. ಅದರಲ್ಲಿ ಹೆಚ್ಚಾಗಿ ಸೀಮೆಸುಣ್ಣವನ್ನು ಕಲಬೆರಕೆ ಮಾಡಲಾಗಿರುತ್ತೆ.

ಐದನೆಯ ಮಾರ್ಗ

ಗೋಧಿ ಹಿಟ್ಟಿನ ಕಲಬೆರಕೆಯನ್ನು ನಿಂಬೆಯಿಂದ (lemon) ಸಹ ಕಂಡುಹಿಡಿಯಬಹುದು. ಮೊದಲಿಗೆ, ಅರ್ಧ ಟೀಸ್ಪೂನ್ ಗೋಧಿಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ನಿಂಬೆ ರಸ ಸೇರಿಸಿ. ಹಿಟ್ಟಿನಿಂದ ಗುಳ್ಳೆಗಳು ಹೊರ ಬರಲು ಪ್ರಾರಂಭಿಸಿದರೆ, ಗೋಧಿಹಿಟ್ಟು ನಕಲಿ ಎಂದು ಅರ್ಥಮಾಡಿಕೊಳ್ಳಿ. ಮಣ್ಣನ್ನು ಅದಕ್ಕೆ ಸೇರಿಸಲಾಗಿದೆ ಎಂದರ್ಥ.

ಗೋಧಿ ಹಿಟ್ಟು ಅನೇಕ ವಿಧಗಳಲ್ಲಿ ಕಲಬೆರಕೆ ಮಾಡಲಾಗುತ್ತೆ. ಹಿಟ್ಟಿಗೆ ಸೀಮೆಸುಣ್ಣದ ಪುಡಿಯನ್ನು ಸೇರಿಸಲಾಗುತ್ತೆ. ಕೆಲವೊಮ್ಮೆ ಬೋರಿಕ್ ಪೌಡರ್ (Boric powder) ಅಥವಾ ಮೈದಾವನ್ನು ಮಿಶ್ರಣ ಮಾಡುವ ಮೂಲಕ ಮಾರಲಾಗುತ್ತೆ. ಅದೇ ಸಮಯದಲ್ಲಿ, ಖಾದಿ ಮಣ್ಣನ್ನು ಹಿಟ್ಟಿನಲ್ಲಿ ಕಲಬೆರಕೆ ಮಾಡಲಾಗುತ್ತೆ. ಆದುದರಿಂದ ಎಚ್ಚರಿಕೆಯಿಂದ ಗೋಧಿ ಹಿಟ್ಟನ್ನು ಆಯ್ಕೆ ಮಾಡಿ.

Latest Videos

click me!