ಮಲೆನಾಡಿನ ಪ್ರತಿ ಅಡುಗೆಯೂ ವಿಭಿನ್ನ, ಸ್ವಾದಿಷ್ಟ. ಇಲ್ಲಿನ ಆಹಾರ ಕೇವಲ ಹಸಿವನ್ನು ಮಾತ್ರ ನೀಗಿಸುವುದಿಲ್ಲ. ಬದಲಾಗಿ ಸಂಸ್ಕೃತಿಗೆ ಸಂಬಂಧಿಸಿದೆ. ಅಂದಹಾಗೆ ಉಳಿದ ಅನ್ನದ ವಿಷಯಕ್ಕೆ ಬಂದಾಗ ಯಾವ ಭಾಗದ ಜನರೇ ಆಗಲಿ, ಅದನ್ನು ಎಸೆಯಲು ಇಷ್ಟಪಡುವುದಿಲ್ಲ. ಇಲ್ಲಿಯೂ ಹಾಗೆಯೇ ಅದನ್ನು ಎಸೆಯುವುದಿಲ್ಲ. ರೊಟ್ಟಿ, ಕಡುಬಿನ ರೂಪದಲ್ಲಿ ಹೊಸ ರುಚಿಯನ್ನೇ ಸೃಷ್ಟಿಸುತ್ತಾರೆ. ಆದರೆ ಸಿಟಿಗಳಲ್ಲಿ ಕೆಲವರಿಗೆ ಉಳಿದ ಆಹಾರದಿಂದ ಏನು ಮಾಡಬೇಕೆಂದು ತಿಳಿಯದಿದ್ದಾಗ ಎಸೆಯುತ್ತಾರೆ.
26
ಮಲೆನಾಡಿನ ಮನೆಗಳಲ್ಲಿ ಮರುದಿನ ಬೆಳಗ್ಗೆ ಉಳಿದ ಅನ್ನದಿಂದ ಉಪಾಹಾರವನ್ನು ತಯಾರಿಸಲಾಗುತ್ತದೆ. ಇದು ಎಷ್ಟು ರುಚಿಕರವಾಗಿರುತ್ತದೆಯೋ ಅಷ್ಟೇ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುತ್ತದೆ. ಈ ರೊಟ್ಟಿ ಅವರಿಗೆ ಕೇವಲ ರೆಸಿಪಿಯಾಗಿ ಮಾತ್ರ ಉಳಿದಿಲ್ಲ. ಹಾಗಾದರೆ ಬನ್ನಿ ಉಳಿದ ಅನ್ನದಿಂದ ರೊಟ್ಟಿ ತಯಾರಿಸುವುದು ಹೇಗೆಂದು ನೋಡೋಣ...
36
ಹೇಗೆ ತಯಾರಿಸುತ್ತಾರೆ? ಉಳಿದ ಅನ್ನವನ್ನು ನಾದುವ ಕಲ್ಲು ಅಥವಾ ಮಣೆಯ ಮೇಲೆ ಹಾಕಿಕೊಂಡು ಸ್ವಲ್ಪ ಸ್ವಲವೇ ಅಗತ್ಯವಿರುವಷ್ಟು ನೀರನ್ನು ಸೇರಿಸುತ್ತಾ ಕೈಗಳಿಂದ ಚೆನ್ನಾಗಿ ಹಿಸುಕಿ, ಸ್ವಲ್ಪ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಯವಾದ ಹಿಟ್ಟನ್ನು ತಯಾರಿಸಿಟ್ಟುಕೊಳ್ಳುತ್ತಾರೆ. ತಯಾರಿಸಿಟ್ಟುಕೊಂಡ ಹಿಟ್ಟನ್ನು ಹದಭರಿತವಾಗಿ ನಾದಲಾಗುತ್ತದೆ. ಇದು ಹೆಚ್ಚು ಒದ್ದೆಯಾಗಿಯೂ ಇರಬಾರದು ಅಥವಾ ಹೆಚ್ಚು ಒಣಗಬಾರದು. ಸರಿಯಾದ ಸಾಂದ್ರತೆಯಲ್ಲಿರಬೇಕು. ಬೇಕಾದ ಗಾತ್ರಕ್ಕೆ ಇದನ್ನು ತಟ್ಟಿಕೊಂಡು ನೇರವಾಗಿ ಕಾದ ಹಂಚಿನ ಮೇಲೆ ಹಾಕಬೇಕು.
ಹಲವು ಭಾಗಗಳಲ್ಲಿ ಇದನ್ನು ಹಂಚಿನ ಮೇಲೆಯೇ ನೇರವಾಗಿ ತಟ್ಟಲಾಗುತ್ತದೆ. ಹಂಚಿಗೆ ಮೊದಲೇ ಸ್ವಲ್ಪ ನೀರು ಹೊಡೆದಿಟ್ಟುಕೊಂಡರೆ ಒಳ್ಳೆಯದು. ಕೆಲವರು ಎಣ್ಣೆ ಹಚ್ಚುತ್ತಾರಾದರೂ ಇದನ್ನು ಹಾಗೆಯೇ ಮಾಡಿದರೆ ರುಚಿ ಹೆಚ್ಚು. ಕಡಿಮೆ ಉರಿಯಲ್ಲಿ ಬೇಯಿಸಬೇಕು. ಕೆಳಭಾಗವು ಚಿನ್ನದ ಬಣ್ಣಕ್ಕೆ ತಿರುಗಿದಾಗ, ಅದನ್ನು ತಿರುಗಿಸಿ ಮತ್ತೆ ಬೇಯಲು ಬಿಡಬೇಕು.
56
ರೊಟ್ಟಿ ಬೆಂದಾಗ ಅದು ಗರಿಗರಿಯಾಗಿ ಬರುವುದಲ್ಲದೆ, ಪರಿಮಳಯುಕ್ತವಾಗಿರುತ್ತದೆ. ಎರಡೂ ಬದಿಗಳಲ್ಲೂ ರೊಟ್ಟಿ ಚೆನ್ನಾಗಿ ಬೆಂದ ನಂತರ ತಿನ್ನಲು ಸಿದ್ಧವಾಗಿರುತ್ತದೆ. ಇದನ್ನು ಯಾವುದೇ ಚಟ್ನಿ ಅಥವಾ ತರಕಾರಿ ಸಾಂಬಾರ್ ಜೊತೆ ತುಪ್ಪ, ಬೆಣ್ಣೆ ಹಾಕಿಕೊಂಡು ಸವಿಯಲು ಚೆನ್ನ. ಕೆಲವರು ಈ ರೊಟ್ಟಿಯನ್ನು ನಾಟಿ ಕೋಳಿ ಸಾರಿನ ಜೊತೆ ತಿನ್ನಲು ಇಷ್ಟಪಡುತ್ತಾರೆ. ಮತ್ತೆ ಕೆಲವರು ಇದನ್ನು ಮೊಸರು ಅಥವಾ ಹಸಿರು ಮೆಣಸಿನಕಾಯಿಯೊಂದಿಗೆ ಕೂಡ ತಿನ್ನುತ್ತಾರೆ.
66
ಇದರ ರುಚಿ ಎಷ್ಟು ಚೆನ್ನಾಗಿರುತ್ತೆಂದರೆ ಹೋಟೆಲ್ ಊಟ ಕೂಡ ನಿಮಗೆ ಸಪ್ಪೆಯಾಗಿ ಕಾಣುತ್ತದೆ. ಮನೆಯಲ್ಲಿ ತಯಾರಿಸಿದ ಯಾವುದೇ ತಿಂಡಿಯಾಗಲಿ ಸಂಪೂರ್ಣ ಆರೋಗ್ಯವಾಗಿರುತ್ತವೆ. ಈ ಖಾದ್ಯದ ವಿಶೇಷವೆಂದರೆ ಇದನ್ನು ಉಳಿದ ಅನ್ನದಿಂದ ತಯಾರಿಸಲಾಗುತ್ತದೆ, ಅಂದರೆ ಇದಕ್ಕೆ ದುಬಾರಿ ಪದಾರ್ಥಗಳು ಅಗತ್ಯವಿಲ್ಲ ಅಥವಾ ಮಾರುಕಟ್ಟೆಯಿಂದ ಏನನ್ನೂ ತರುವ ಅಗತ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.