ಅದೃಷ್ಟ ಅಂದರೆ ಹೀಗಿರಬೇಕು. ಇಷ್ಟವಾದ ಬಿರಿಯಾನಿ ತಿಂದಿದ್ದು ಮಾತ್ರವಲ್ಲ, ಜೊತೆಗೆ ಅದೃಷ್ಠದ ಬಾಗಿಲು ಕೂಡ ತೆರೆದಿದೆ. ತಿರುಪತಿಯ ರಾಹುಲ್ ಅನ್ನೋ ಯುವಕನಿಗೆ ಈ ವರ್ಷದ ಆರಂಭವೇ ಅದ್ಧೂರಿಯಾಗಿದೆ.
ತಿರುಪತಿಯ ರೋಬೋ ಹೊಟೆಲ್‌ನಲ್ಲಿ ಬಿರಿಯಾನಿ ಆಫರ್ ನೀಡಲಾಗಿತ್ತು. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿರಿಯಾನಿ ಅತ್ಯಂತ ಜನಪ್ರಿಯ. ಹೀಗಾಗಿ ಪ್ರತಿ ಹೊಟೆಲ್‌ಗಳಲ್ಲಿ ತೀವ್ರ ಸ್ಪರ್ಧೆ ಇದೆ. ಪ್ರಚಾರಕ್ಕಾಗಿ ರೋಬೋ ಹೊಟೆಲ್ ಮಾಲೀಕ ಬಿರಿಯಾನಿ ತಿನ್ನಿ ನಿಸಾನ್ ಮ್ಯಾಗ್ನೈಟ್ SUV ಕಾರು ಗೆಲ್ಲಿ ಅನ್ನೋ ಅಭಿಯಾನ ಆರಂಭಿಸಿದ್ದ.
2023ರ ಸೆಪ್ಟೆಂಬರ್ ತಿಂಗಳಲ್ಲಿ ರಾಹುಲ್ ಅನ್ನೋ ಯುವಕ ಇದೇ ಹೊಟೆಲ್‌ಗೆ ತೆರಲಿ ಬಿರಿಯಾನಿ ತಿಂದಿದ್ದ. ಕಾರು ಗೆಲ್ಲುವ ಅಭಿಯಾನ ಆರಂಭವಾದ ಬಳಿಕ ಈ ಹೊಟೆಲ್‌ನಲ್ಲಿ ಬಿರಿಯಾನಿ ಖರೀದಿಸುವ ಪ್ರತಿಯೊಬ್ಬ ಗ್ರಾಹಕನ ಹೆಸರು, ವಿಳಾಸ, ಫೋನ್ ನಂಬರ್ ಕೂಪನ್‌ನಲ್ಲಿ ಬರೆದು ಬಾಕ್ಸ್‌ಗೆ ಹಾಕಲಾಗುತ್ತದೆ.
ರಾಹುಲ್ ಬಿರಿಯಾನಿ ಸವಿದು ಮನೆಗೆ ಮರಳಿದ್ದಾನೆ. ಬಳಿಕ ತಾನು ರೋಬೋ ಹೊಟೆಲ್‌ನಲ್ಲಿ ಬಿರಿಯಾನಿ ತಿಂದಿದ್ದೇನ ಅನ್ನೋದೇ ಮರೆತು ಬಿಟ್ಟಿದ್ದಾನೆ. ಸೆಪ್ಟೆಂಬರ್ ಕಳೆದು 2023ರ ವರ್ಷವೇ ಉರುಳಿ ಹೋಗಿದೆ. ಹೊಸ ವರ್ಷವೂ ಆರಂಭಗೊಂಡಿದೆ.
gift box
ಹೊಸ ವರ್ಷದ ದಿನ ರೋಬೋ ಹೊಟೆಲ್‌ನ ಕೂಪನ್ ಬಾಕ್ಸ್ ತೆರೆದು ಲಕ್ಕಿ ಡ್ರಾ ಮೂಲಕ ಕಾರು ಗೆಲ್ಲುವ ಅದೃಷ್ಠಶಾಲಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಾಗಿತ್ತು.
ಬರೋಬ್ಬರಿ 23,000 ಕೂಪನ್‌ಗಳಲ್ಲಿ ಒಂದು ಕೂಪನ್ ಆರಿಸಿ ಅದೃಷ್ಠವಂತರ ಹೆಸರು ಘೋಷಿಸಬೇಕಿತ್ತು. ಕಾರು ಗೆಲ್ಲುವ ಲಕ್ಕಿ ಆಫರ್ ನೀಡಿದ ಬಳಿಕ 23,000 ಮಂದಿ ಈ ಹೊಟೆಲ್‌ನಲ್ಲಿ ಬಿರಿಯಾನಿ ಖರೀದಿಸಿದ್ದರು.
ಲಕ್ಕಿ ಡ್ರಾನಲ್ಲಿ ರಾಹುಲ್ ಹೆಸರು ಬಂದಿದೆ. ಬಳಿಕ ರಾಹುಲ್ ಫೋನ್ ನಂಬರ್‌ಗೆ ಕರೆ ಮಾಡಿದ ಹೊಟೆಲ್ ಮಾಲೀಕ ಭರತ್ ಕುಮಾರ್ ರೆಡ್ಡಿ ಶುಭಾಶಯ ಕೋರಿದ್ದಾರೆ. ಇಷ್ಟೇ ಅಲ್ಲ ಹೊಟೆಲ್‌ಗೆ ಆಗಮಿಸಿ ಕಾರನ್ನು ಉಡುಗೊರೆಯಾಗಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಇದರಂತೆ ಹೊಟೆಲ್‌ಗೆ ತೆರಳಿದ ರಾಹುಲ್, ಕಾರನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾನೆ. ಇಷ್ಟೇ ಅಲ್ಲ ಈ ಲಕ್ಕಿ ಡ್ರಾ ಕುರಿತು ಅತೀವ ಸಂತಸ ವ್ಯಕ್ತಪಡಿಸಿದ್ದಾನೆ. ಇತ್ತ ಹೊಟೆಲ್ ಮಾಲೀಕ ಕೂಡ ನಾವು ಗ್ರಾಹಕರಿಗೆ ಕಾರು ಗೆಲ್ಲುವ ಅವಕಾಶ ನೀಡಿದ್ದೇವು. ಇದೀಗ ಕಾರು ನೀಡುತ್ತಿದ್ದೇವೆ. ಶೀಘ್ರದಲ್ಲೇ ಮತ್ತೊಂದು ಆಫರ್ ಘೋಷಿಸುತ್ತೇವೆ ಎಂದಿದ್ದಾರೆ. ಹೀಗಾಗಿ ನೀವು ತಿರುಪತಿ ಕಡೆ ತೆರಳುವಾಗ ರೊಬೊ ಹೋಟೆಲ್‌ನಲ್ಲಿ ಬಿರಿಯಾನಿ ತಿನ್ನೋದು ಮರೆಯಬೇಡಿ.