ಏನನ್ನಾದರೂ ತಿನ್ನುವ ಮೊದಲು ತೊಳೆದು ತಿನ್ನುವುದು ಉತ್ತಮ ಅಭ್ಯಾಸ. ಅದು ಹಣ್ಣು ಅಥವಾ ಯಾವುದೇ ತರಕಾರಿಯಾಗಿರಲಿ, ನಾವು ಈ ಎಲ್ಲಾ ವಸ್ತುಗಳನ್ನು ಕತ್ತರಿಸಿ ತಿನ್ನುವ ಮೊದಲು ತೊಳೆಯುತ್ತೇವೆ, ಇದರಿಂದ ಅವುಗಳ ಮೇಲೆ ಕುಳಿತಿರುವ ಕೀಟಾಣುಗಳು ನಮ್ಮ ಹೊಟ್ಟೆಗೆ ಹೋಗುವುದಿಲ್ಲ.
ಅಡುಗೆ ಮಾಡುವ ಮೊದಲು ಅಥವಾ ನಮಗೆ ಆಹಾರ ನೀಡುವ ಮೊದಲು ಸಾಮಾನ್ಯವಾಗಿ ಎಲ್ಲವನ್ನೂ ತೊಳೆಯುತ್ತೇವೆ. ಹಣ್ಣು ಮತ್ತು ತರಕಾರಿಗಳಿಂದ ಹಿಡಿದು ಬೇಳೆ ಕಾಳುಗಳವರೆಗೆ ಅದರ ಬಳಕೆಯ ಮೊದಲು ಎಲ್ಲವನ್ನೂ ಚೆನ್ನಾಗಿ ವಾಶ್ ಮಾಡಿಯೇ ಬಳಸುತ್ತೇವೆ.
ಇದು ಹಣ್ಣುಗಳು ಮತ್ತು ತರಕಾರಿಗಳ ವಿಷಯ, ಆದರೆ ನೀವು ಮಾಂಸಾಹಾರಿ (non vegetarian) ಪ್ರಿಯರಾಗಿದ್ದರೆ ಮತ್ತು ನೀವು ಆಗಾಗ್ಗೆ ಮನೆಯಲ್ಲಿ ಚಿಕನ್ (chicken) ತಿನ್ನುತ್ತಿದ್ದರೆ, ಈ ಲೇಖನ ನಿಮಗಾಗಿ. ಅಡುಗೆ ಮಾಡುವ ಮೊದಲು ಹಸಿ ಚಿಕನ್ ತೊಳೆಯುವುದು ಸಾಮಾನ್ಯ, ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅನ್ನೋದು ಗೊತ್ತಾ?
ಅಡುಗೆ ಮಾಡುವ ಮೊದಲು ನೀವು ಚಿಕನ್ ತೊಳೆಯುತ್ತೀರಾ? ಹಾಗಿದ್ರೆ ಜಾಗರೂಕರಾಗಿರಿ!
ಅಮೇರಿಕನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ಪ್ರಕಾರ, ಕಚ್ಚಾ ಕೋಳಿಯನ್ನು ತೊಳೆಯುವುದು ಆರೋಗ್ಯದ ಮೇಲೆ ಕೆಲವು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಚೆನ್ನೈನ ಎಂಜಿಎಂ ಹೆಲ್ತ್ ಕೇರ್‌ನ ಮುಖ್ಯ ಆಹಾರ ತಜ್ಞೆ ಎನ್.ವಿಜಯಶ್ರೀ, "ಅಡುಗೆ ಮಾಡುವ ಮೊದಲು ಹಸಿ ಕೋಳಿಯನ್ನು ತೊಳೆಯುವುದರಿಂದ ಚಿಕನ್‌ನಲ್ಲಿರುವ ಕ್ಯಾಂಪೈಲೋಬ್ಯಾಕ್ಟರ್ ಜೆಜುನಿ, ಸಾಲ್ಮೊನೆಲ್ಲಾ, ಕ್ಲೋಸ್ಟ್ರಿಡಿಯಂ ಪರ್ಫ್ರಿಂಗನ್ಸ್ ಮತ್ತು ಸ್ಟೆಫಿಲೋಕೊಕಸ್ ಆರಿಯಸ್ನಂತಹ ಬ್ಯಾಕ್ಟೀರಿಯಾಗಳಿಂದ ಆಹಾರ ವಿಷವಾಗುವ (food poison) ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಸಿಡಿಸಿ ವೆಬ್ಸೈಟ್ ಪ್ರಕಾರ, ನೀವು ಚಿಕನ್ ತೊಳೆಯುವಾಗ, ಈ ಬ್ಯಾಕ್ಟೀರಿಯಾವನ್ನು (bacteria) ಹೊಂದಿರುವ ಮಾಂಸದ ರಸಗಳು ಅಡುಗೆ ಮನೆಗೆ ಹರಡಬಹುದು ಮತ್ತು ಇತರ ಆಹಾರಗಳು, ಪಾತ್ರೆಗಳು ಮತ್ತು ಇತರ ಪ್ರದೇಶಗಳನ್ನು ಸಹ ಕಲುಷಿತಗೊಳಿಸಬಹುದು. ಇದರಿಂದ ನಿಮ್ಮ ಆರೋಗ್ಯಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಹಾಗಿದ್ರೆ ಚಿಕನ್ ತೊಳೆಯದೇ ಅಡುಗೆ ಮಾಡಲು ಸಾಧ್ಯವೇ ಎಂದು ನೀವು ಕೇಳಬಹುದು?
ಅಡುಗೆ ಮಾಡುವ ಮೊದಲು ನೀವು ಚಿಕನ್ ಅನ್ನು ಹೇಗೆ ಸ್ವಚ್ಛಗೊಳಿಸಬೇಕು?
ಚಿಕನ್ ಅನ್ನು ಬೇಯಿಸುವುದರಿಂದ ಮತ್ತು ಕುದಿಸುವುದರಿಂದ ಹೊರಸೂಸುವ ಶಾಖ ಹಾನಿಕಾರಕ ಬ್ಯಾಕ್ಟೀರಿಯಾವನ್ನು(dangerouse bacteria) ಕೊಲ್ಲಲು ಸಹಾಯ ಮಾಡುತ್ತೆ. ತೊಳೆಯದೇ ಬೇಯಿಸೋದಾ ಎಂದು ನಿಮಗೆ ಅನಿಸಿದರೆ… ಹಸಿ ಚಿಕನ್ ಅನ್ನು ಸ್ವಚ್ಛಗೊಳಿಸಲು ನೀವು ಉಪ್ಪು, ವಿನೆಗರ್ ಅಥವಾ ನಿಂಬೆ ಬಳಸಬಹುದು. ಅರ್ಧ ನಿಂಬೆಹಣ್ಣನ್ನು ಕತ್ತರಿಸಿ ಚಿಕನ್ ನ ಮೇಲ್ಮೈ ಉಜ್ಜಿಕೊಳ್ಳಿ.
ಚಿಕನ್ ಮೇಲೆ ಉಪ್ಪನ್ನು ಉಜ್ಜಬಹುದು ಮತ್ತು ರೆಫ್ರಿಜರೇಟರ್ ಒಳಗೆ ಸ್ವಚ್ಛವಾದ ಮಡಕೆಯಲ್ಲಿ ಒಂದು ಗಂಟೆ ಕಾಲ ಮುಚ್ಚಿಡಬಹುದು.
ಅರಿಶಿನದಂತಹ ಸಾಂಪ್ರದಾಯಿಕ ಭಾರತೀಯ ಮಸಾಲೆಗಳನ್ನು ನೈಸರ್ಗಿಕ ಪ್ರತಿಜೀವಕ ಗುಣಲಕ್ಷಣಗಳೊಂದಿಗೆ ಬಳಸುವುದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
ತಜ್ಞರು ಹಸಿ ಕೋಳಿಯನ್ನು ಘನೀಕರಿಸಲು ಶಿಫಾರಸು ಮಾಡುತ್ತಾರೆ ಏಕೆಂದರೆ ಇದು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.