1). ಐಸ್‍ನಲ್ಲಿಟ್ಟ ಮೀನುಗಳು ಎರಡು ದಿನಕ್ಕಿಂತ ಹೆಚ್ಚು ಇಟ್ಟರೆ ಒಳ್ಳೆಯದಲ್ಲ. ಆ ಮೀನುಗಳನ್ನು ಗಮನಿಸಿ ಖರೀದಿಸಬೇಕು. ಅದಕ್ಕೆ ಮೀನಿನ ಕಿವಿರುಗಳನ್ನು ನೋಡಬೇಕು. ಮೀನು ಕೆಟ್ಟಿಲ್ಲದಿದ್ದರೆ ಅವು ಕೆಂಪಾಗಿರುತ್ತವೆ. ಕೆಟ್ಟ ಮೀನುಗಳಲ್ಲಿ ಬಣ್ಣ ಕಳೆದುಕೊಂಡಿರುತ್ತವೆ.
2). ಕಿವಿರುಗಳ ಬಣ್ಣ ಹೋಗದಂತೆ ಕೆಲವರು ರಾಸಾಯನಿಕ ಹಚ್ಚಬಹುದು. ಐಸ್‍ನಲ್ಲಿಡುವುದರಿಂದಲೂ ಕಿವಿರುಗಳ ಬಣ್ಣ ಹೋಗಬಹುದು. ಈ ಸಮಯದಲ್ಲಿ ಮೀನಿನ ದೇಹ ಗಟ್ಟಿಯಾಗಿದೆಯೇ ಎಂದು ಪರೀಕ್ಷಿಸಬೇಕು. ಮೀನಿನ ದೇಹ ತೊಳತೊಳದಂತೆ ಇಲ್ಲದೆ ಗಟ್ಟಿಯಾಗಿದ್ದರೆ ಖರೀದಿಸಬಹುದು.
3). ಕಿವಿರುಗಳನ್ನು ಬೇರ್ಪಡಿಸುವಾಗ ಅಲ್ಲಿ ಬೆರಳುಗಳನ್ನು ಇಟ್ಟು ಮುಟ್ಟಿದರೆ ಅಂಟಂಟಾಗಿ ಇರುತ್ತದೆ. ಕೈಗೆ ಅಂಟು ಅಂಟಿದರೆ ಅದು ತಾಜಾ ಮೀನು. ಸಂಶಯ ಬೇಡ.
4). ಮೀನಿನ ಕಣ್ಣುಗಳು ಚೈತನ್ಯದಿಂದ ಇರಬೇಕು. ಅಂದರೆ ಸ್ಪಷ್ಟವಾಗಿ ನಮ್ಮನ್ನು ನೋಡುವಂತೆ ಇದ್ದರೆ ಒಳ್ಳೆಯ ಮೀನು. ರಕ್ತದ ಬಣ್ಣ, ಉಬ್ಬಿದ ಕಣ್ಣುಗಳಿರುವ ಮೀನುಗಳು ಹಲವು ದಿನ ಐಸ್‍ನಲ್ಲಿಟ್ಟಿರುತ್ತವೆ.
5). ರಾಸಾಯನಿಕ ಹಚ್ಚಿದ ಮೀನುಗಳಿಂದ ಔಷಧದ ವಾಸನೆ ಬರುತ್ತದೆ. ಆದ್ದರಿಂದ ವಾಸನೆ ಗಮನಿಸಬಹುದು..
6). ಮೀನಿನ ತಲೆಯನ್ನು ಹಿಡಿದು ಎತ್ತಿದರೆ ಅದರ ಬಾಲ ಗಟ್ಟಿಯಾಗಿ ನಿಲ್ಲಬೇಕು. ಹಾಗಲ್ಲದೆ ಕೆಳಗೆ ತೊಳತೊಳದಂತೆ ತೂಗುತ್ತಿದ್ದರೆ ಕೆಟ್ಟ ಮೀನು ಎಂದರ್ಥ. ಒಳ್ಳೆಯ ಮೀನಿನ ತಲೆಯನ್ನು ಎತ್ತಿದರೆ ಗಟ್ಟಿಯಾಗಿರುತ್ತದೆ.
7). ಕೆಲವು ಮೀನುಗಳ ಕಿವಿರುಗಳು ಬಣ್ಣ ಕಳೆದುಕೊಂಡಿದ್ದರೂ ಅವು ಒಳ್ಳೆಯ ಮೀನಾಗಿರಬಹುದು. ಅವುಗಳನ್ನು ತಿಳಿಯಲು ದೇಹ, ಬಾಲ, ಕಣ್ಣುಗಳನ್ನು ನೋಡಬೇಕು.