ಹಾಲಿಲ್ಲದೇ ಮಾಡಿದ ಅರಿಶಿನದ ಹಾಲಿನಲ್ಲಿದೆ ಮ್ಯಾಜಿಕಲ್ ಪವರ್

First Published Oct 19, 2020, 3:57 PM IST

ಈಗ ಎಲ್ಲೆಡೆ ಕರೋನ ಭಯ ಆವರಿಸಿದೆ. ಸಣ್ಣ ಪುಟ್ಟ ಶೀತ-ಕೆಮ್ಮು ಬಂದರೂ ಎಲ್ಲಿ ಕರೋನ ಬಂತೆಂಬ ಆತಂಕ. ಈ ಸಮಯದಲ್ಲಿ ಗಂಟಲು ನೋವು ಸಾಮಾನ್ಯ, ಆಗ ಬೆಸ್ಟ್ ಮನೆಮದ್ದು  ಅರಿಶಿನ ಹಾಲು. ಆದರೆ ಹಲವರಿಗೆ ಹಾಲಿನ ಅಲರ್ಜಿ ಇರುತ್ತದೆ. ಅಂತಹವರಿಗೆ ಇಲ್ಲಿದೆ ಹಾಲು ಬಳಸದೆ ಅರಿಶಿನ ಹಾಲು ತಯಾರಿಸುವ ಹೊಸ ವಿಧಾನ, ಇದು ಶೀತ-ಕೆಮ್ಮಿನಿಂದ ನಮ್ಮನ್ನು ದೂರವಿಡುವುದಲ್ಲದೆ ಮುಖಕ್ಕೆ ಒಳ್ಳೆಯ ಹೊಳಪು ಸಹ ಕೊಡುತ್ತದೆ. 

ಭಾರತದಲ್ಲಿ ಹೆಚ್ಚಾಗಿ ದನ ಮತ್ತು ಎಮ್ಮೆಯ ಹಾಲನ್ನು ಉಪಯೋಗಿಸಲಾಗುತ್ತದೆ. ಆದರೆ ಹೆಚ್ಚಿನ ಜನಕ್ಕೆ ಈ ಡೈರಿ ಉತ್ಪನ್ನಗಳು ಎಂದರೆ ಅಲರ್ಜಿ ಉಂಟಾಗುತ್ತದೆ. ಆದುದರಿಂದ ಈ ರೆಸಿಪಿ ಮಾಡಲು ಹಾಲಿನ ಅಗತ್ಯವೇ ಇಲ್ಲ. ಡೈರಿ ಪ್ರಾಡಕ್ಟ್ ಫ್ರೀ ಅರಿಶಿನ ಹಾಲನ್ನು ಹೇಗೆ ತಯಾರಿಸೋದು ನೋಡೋಣ..
undefined
ಇದಕ್ಕಾಗಿ ರಾತ್ರಿ 12 ರಿಂದ 15 ಬಾದಾಮಿ ನೀರಿನಲ್ಲಿ ನೆನೆಸಿ. ಬಾದಾಮಿ ಅನೇಕ ಗುಣಗಳನ್ನು ಹೊಂದಿದೆ. ಇದರಲ್ಲಿ ಉತ್ತಮ ಫ್ಯಾಟ್ ಅಂಶವಿದೆ, ಇದು ದೇಹದ ಟೊಕ್ಸಿನ್ಗಳನ್ನು ಕ್ಲಿಯರ್ ಮಾಡುತ್ತವೆ.
undefined
ಬೆಳಗ್ಗೆ ಬಾದಾಮಿ ಸಿಪ್ಪೆಯನ್ನು ತೆಗೆದು ಮಿಕ್ಸಿ ಜಾರ್ ಗೆ ಹಾಕಿ. ನೀರಿನಲ್ಲಿ ಹಾಕಿರುವುದರಿಂದ ಬಾದಾಮಿಯ ಸಿಪ್ಪೆ ಬೇಗನೆ ತೆಗೆಯಲು ಸಾಧ್ಯಾವಾಗುತ್ತದೆ. ಇದರಿಂದ ಹಾಲನ್ನು ತಯಾರಿಸಲಾಗುತ್ತದೆ. ಅದಕ್ಕೆ ಏನೆಲ್ಲಾ ಸಾಮಾಗ್ರಿಗಳನ್ನು ಹಾಕಬೇಕು ನೋಡೋಣ...
undefined
ಅದಕ್ಕೆ 1 ಕಪ್ ನೀರು, ಅರ್ಧ ಟೇಬಲ್ ಸ್ಪೂನ್ ಅರಿಶಿನ, ಸ್ವಲ್ಪ ದಾಲ್ಚಿನಿ ಪುಡಿ, ಸ್ವಲ್ಪ ಕಾಳುಮೆಣಸಿನ ಪುಡಿ, ಸ್ವಲ್ಪ ತುರಿದ ಶುಂಠಿ ಹಾಗೂ 1 ಚಮಚ ಬೆಲ್ಲ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
undefined
ಈಗ ಬಾದಾಮಿ ಹಾಲು ರೆಡಿಯಾಗಿರುತ್ತದೆ. ಇಲ್ಲಿ ನೀವು ಬಾದಾಮ್ ಬದಲು ಗೋಡಂಬಿ ಸಹ ಉಪಯೋಗಿಸಬಹುದು.
undefined
ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ಟವ್ ಮೇಲೆ ಇಡಿ. ಚೆನ್ನಾಗಿ ಕುದಿಸಿ ಬಿಸಿಮಾಡಿ. ಅದನ್ನು ಚಮಚದಲ್ಲಿ ಚೆನ್ನಾಗಿ ಕಲಿಸುತ್ತಿರಿ. ಇಲ್ಲವಾದರೆ ತಳ ಹತ್ತಿಕೊಳ್ಳಬಹುದು. ಈಗ ಬಿಸಿ ಬಿಸಿ ಅರಿಶಿನ ಹಾಲು ರೆಡಿ.
undefined
ಇದು ಇಮ್ಮ್ಯೂನಿಟಿ ಹೆಚ್ಚಿಸಲು ಸಹಕಾರಿ. ಅಷ್ಟೇ ಅಲ್ಲ ಇದರ ಸೇವನೆಯಿಂದ ಮುಖದಲ್ಲಿ ಒಳ್ಳೆ ಗ್ಲೋ ಕಾಣಬಹುದು. ಈಗ ತಯಾರಾಗಿದೆ ನೋಡಿ ಹಾಲಿಲ್ಲದೆ ಮಾಡಿದಂತಹ ಅರಿಶಿನದ ಹಾಲು.
undefined
ಉತ್ತಮ ಅರೋಗ್ಯ -ಸುಂದರವಾದ ತ್ವಚೆಗೆ ಪ್ರತಿದಿನ ಮಿಸ್ ಮಾಡದೆ ಇದನ್ನು ಸೇವಿಸಿ.
undefined
click me!