ಬೊಜ್ಜು ಕರಗಿಸಿ, ದೇಹ ಫಿಟ್ ಮಾಡುತ್ತೆ ಅರಶಿನ: ಬಳಸೋದು ಹೀಗೆ

First Published | Aug 18, 2020, 7:12 PM IST

ಬೆಲ್ಲಿ ಫಾಟ್ ಬಹಳಷ್ಟು ಜನರಿಗೆ ತಲೆ ನೋವು. ಬೆಲ್ಲಿ ಫಾಟ್ ಬಂದ್ರೆ ಕರಗಿಸೋದು ಅಷ್ಟು ಸುಲಭವಲ್ಲ. ಬೇಡವೆಂದರೂ ಹೆಚ್ಚುತ್ತಲೇ ಇರುತ್ತೆ. ಎಷ್ಟೇ ವ್ಯಾಯಾಮ, ಜಿಮ್ ಮಾಡಿದರೂ ಹೊಟ್ಟೆ ಕರಗಿಸುವುದು ಸವಾಲಿನ ಕೆಲಸ. ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಅರಶಿನ ನಿಮ್ಮ ಬೆಲ್ಲಿ ಕರಗಿಸಬಹುದು. ಹೇಗೆ ಬಳಸಬೇಕು..? ಇಲ್ಲಿ ನೋಡಿ.

ಬೆಲ್ಲಿ ಫಾಟ್ ಬಹಳಷ್ಟು ಜನರಿಗೆ ತಲೆ ನೋವು. ಬೆಲ್ಲಿ ಫಾಟ್ ಬಂದ್ರೆ ಕರಗಿಸೋದು ಅಷ್ಟು ಸುಲಭವಲ್ಲ. ಬೇಡವೆಂದರೂ ಹೆಚ್ಚುತ್ತಲೇ ಇರುತ್ತೆ. ಎಷ್ಟೇ ವ್ಯಾಯಾಮ, ಜಿಮ್ ಮಾಡಿದರೂ ಹೊಟ್ಟೆ ಕರಗಿಸುವುದು ಸವಾಲಿನ ಕೆಲಸ. ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಅರಶಿನ ನಿಮ್ಮ ಬೆಲ್ಲಿ ಕರಗಿಸಬಹುದು.
ವ್ಯಾಯಾಮ ಹಾಗೂ ಆರೋಗ್ಯಕರ ಪಥ್ಯಕ್ಕೆ ಬೇರೆ ಪರ್ಯಾಯವಿಲ್ಲ. ಇದನ್ನು ನೀವು ಫಾಲೋ ಮಾಡಲೇಬೇಕು.
Tap to resize

ಆದರೆ ಬೊಜ್ಜು ಕರಗುವ ವೇಗವನ್ನು ನೀವು ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ಒಂದು ಅರಶಿನ. ನಿಮ್ಮ ಅಡುಗೆ ಮನೆಯಲ್ಲೇ ಲಭ್ಯವಿರುತ್ತದೆ.
ಅರಶಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುವ ತನಕ ಅರಶಿನ ಹಲವು ರೀತಿಯ ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಾದರೆ ಅರಶಿನ ನಿಮ್ಮ ಆಹಾರದಲ್ಲಿ ಮಿಸ್ ಆಗಲೇಬಾರದು.
ಅರಶಿನದಲ್ಲಿರುವ ಕರ್ಕುಮಿನ್ ಎಂಬ ಅಂಶ ಅನಗತ್ಯ ಫ್ಯಾಟ್ ಕರಗಿಸುವಲ್ಲಿ ಬಹಳ ಸಹಕಾರಿ.
ಅರಿಶಿನ ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಪಿತ್ತರಸದ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹೊಟ್ಟೆ ಉಬ್ಬರಿಸುವುದು, ಗ್ಯಾಸ್‌ಸ್ಟ್ರಿಕ್‌ನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೇಕಾದರೆ ಅರಶಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅಥವಾ ಅರಶಿನ ಮಿಶ್ರಿತ ಟೀ ಕುಡಿಯಬಹುದು. ಸಾಂಬಾರು, ಪಲ್ಯ ಎಲ್ಲದಕ್ಕೂ ಅರಶಿನ ಬಳಸುವುದರಿಂದ ನಿಯಮಿತವಾಗಿ ದೇಹಕ್ಕೆ ಅರಶಿನದ ಅಂಶ ಸೇರಿಕೊಳ್ಳುತ್ತದೆ.

Latest Videos

click me!