ಸೀಫುಡ್ ಬಹಳಷ್ಟು ಜನರಿಗೆ ಇಷ್ಟದ ಆಹಾರ. ಕಡಿಮೆ ಫಾಟ್, ಹೆಚ್ಚು ಪ್ರೊಟೀನ್‌ಗಳಿರುವ ಸೀಫುಡ್ ಪವರ್ ಹೌಸ್ ಇದ್ದಂತೆ. ಆದರೆ ಸೀಫುಡ್ ಸೇವಿಸುವಾಗ ಎಚ್ಚರ ವಹಿಸಬೇಕಾದ್ದು ಅಗತ್ಯ.
ಸೀಫುಡ್ ಡಿಪ್ರೆಷನ್‌ಗೆ ರಾಮಬಾಣ. ಹಾಗೆಯೇ ಹಾರ್ಟ್‌ನ ಆರೋಗ್ಯಕ್ಕೂ ಅತ್ಯುತ್ತಮ. ಇನ್ನು ನಿಮ್ಮ ಕೂದಲು, ಚರ್ಮದ ಆರೋಗ್ಯವನ್ನೂ ಸೀಫುಡ್ ರಕ್ಷಿಸುತ್ತದೆ.
ಆದರೆ ಇಂದಿನ ಮಟ್ಟಿಗೆ ಇದು ಎಷ್ಟು ಫಲಪ್ರದ ಎಂಬುದನ್ನು ಹೇಳುವುದು ಕಷ್ಟ. ನಾವು ತಿನ್ನುವ ಸೀಫುಡ್ ಆರೋಗ್ಯದಲ್ಲಿ ಸಣ್ಣ ಬದಲಾವಣೆಗಳನ್ನೂ ಮಾಡಬಹುದು.
ಇದೀಗ ಮತ್ಸ್ಯಪ್ರಿಯರ ಸಂಖ್ಯೆ ಹೆಚ್ಚಿದ್ದು, ಇದರ ಉದ್ಯಮವೂ ದೊಡ್ಡದಾಗಿದೆ. ಹೈಡ್ರೋಜನ್ ಪೆರೋಕ್ಸೈಡ್‌ನಿಂದ ತೊಡಗಿ ಫಾರ್ಮಲಿನ್ ತನಕ ಹಲವು ರಾಸಾಯನಿಕಗಳನ್ನು ಸೀಫುಡ್ ಪ್ರಿಸರ್ವ್ ಮಾಡಲು ಬಳಸಲಾಗುತ್ತಿದೆ.
ಮೀನಿನಲ್ಲಿ ಮರ್ಕ್ಯುರಿ ಇದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಮರ್ಕ್ಯುರಿ ಮಾಲೀನ್ಯದ ಮೂಲಕ ಬಿಡುಗಡೆಯಾಗುತ್ತದೆ. ನಂತರ ಕಡಲಿನ ಜೀವಿಗಳ ಒಡಲು ಸೇರುತ್ತದೆ.
ಮೀಥೇಲ್ ಮರ್ಕ್ಯುರಿಯನ್ನು ಮೀನು ಸೇವಿಸುತ್ತದೆ ಎಂಬುದು ಸಾಬೀತಾಗಿದೆ. ಮೀನು ಹೆಚ್ಚು ಸೇವಿಸುವವರಲ್ಲಿ ಮರ್ಕ್ಯುರಿ ಪ್ರಮಾಣ ಹೆಚ್ಚಿರುತ್ತದೆ ಎನ್ನುತ್ತಾರೆ ತಜ್ಞರು.
ಕಾರ್ಸಿನೋಜೆನ್ ಸೋಡಿಯಂ ಬೆನ್ಝೋಟ್‌ನ್ನು ಮೀನನ್ನು ಸಂರಕ್ಷಿಸಲು ಬಳಸಲಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕ ಬಳಸಿ ಮೀನು ರಕ್ಷಿಸುವುದು ಮಾಡಿದರೆ ಸಮಸ್ಯೆ ಇಲ್ಲ. ಆದರೆ ಭಾರೀ ಪ್ರಮಾಣದಲ್ಲಿ ರಾಸಾಯನಿಕ ಹಾಕಿ ಮೀನನ್ನು ಸಂರಕ್ಷಿಸುವುದು ಅದನ್ನು ಸೇವಿಸುವವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ಅಮೋನಿಯಾ ದೇಹ ಸೇರುವುದರಿಂದ ಗಂಟಲು, ಮೂಗಿನಲ್ಲಿ ಸಮಸ್ಯೆ ಆರಂಭವಾಗುತ್ತದೆ. ಉಸಿರಾಟದ ಸಮಸ್ಯೆಯೂ ಕಾಡುತ್ತದೆ. ನಾವು ಮಾರುಕಟ್ಟೆಯಿಂದ ಕೊಳ್ಳುವ ಮೀನು ಅಮೋನಿಯಾ ಇರುವ ಐಸ್ ವಾಟರ್‌ನಲ್ಲಿ ಸಂರಕ್ಷಿಸಲ್ಪಟ್ಟಿರುತ್ತದೆ. ಐಸ್ ನಿಧಾನವಾಗಿ ಕರುಗುವುದಕ್ಕಾಗಿ ಅಮೋನಿಯಾ ಬಳಸಲಾಗುತ್ತದೆ.
ಮೃತದೇಹವನ್ನು ಶವಾಗಾರದಲ್ಲಿ ಸಂರಕ್ಷಿಸಲು ಬಳಸುವ ಫಾರ್ಮಲಿನ್‌ನ್ನು ಮೀನನ್ನು ಸಂರಕ್ಷಿಸಲು ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಕೂಡಾ ಉಂಟಾಗುವ ಸಾಧ್ಯತೆ ಇದೆ.
ಮೀನಿನ ರುಚಿ ಹೋಗದಿರಲು ಹೈಡ್ರೋಜನ್ ಪೆರಾಕ್ಸೈಡ್ ಬಳಸಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಇಂಜೆಕ್ಷನ್ ಅಷ್ಟು ಅಪಾಯಕಾರಿಯಲ್ಲ. ಆದರೆ ಹೆಚ್ಚಾಗಿದ್ದರೆ ಗಂಟಲು ಉರಿ, ಹೊಟ್ಟೆ ಉರಿ, ವಾಂತಿ ಕಾಣಿಸಿಕೊಳ್ಳುತ್ತದೆ.