ಆರೋಗ್ಯಕರವಾಗಿ ಬೊಜ್ಜು ಕರಗಿಸ್ಬೇಕು ಅಂದರೆ ನಾವು ಸೇವಿಸೋ ಆಹಾರದಲ್ಲೇ ಅಲ್ಪಸ್ವಲ್ಪ ಬದಲಾವಣೆ ಮಾಡಿದರೆ ಸಾಕು.
ವೇಯಿಟ್ ಲಾಸ್ ಮಾಡಿ ಫಿಟ್ ಆಗಿರೋದ್ರಿಂದ ಬಹಳಷ್ಟು ರೋಗಗಳಿಂದ ದೂರ ಉಳಿಯದಬಹುದು. ರೋಗಗಳ ರಿಸ್ಕ್ ಕಡಿಮೆ ಮಾಡಬಹುದು.
ವ್ಯಾಯಾಮ, ಜಿಮ್ ತೂಕ ಇಳಿಸಿಕೊಳ್ಳೋಕೆ ಹೇಗೆ ಪ್ರಧಾನವೋ ಹಾಗೆಯೇ ಆಹಾರವೂ ಮುಖ್ಯ ಪಾತ್ರ ವಹಿಸುತ್ತದೆ.ss
ಅಡುಗೆ ಮನೆಯಲ್ಲೇ ಸಿಗೋ ಕರಿಮೆಣಸು ಮತ್ತು ಲವಂಗದಿಂದ ಆರೋಗ್ಯಕರ ಡಿಟಾಕ್ಸ್ ವಾಟರ್ ತಯಾರಿಸಬಹುದು.
ತೂಕ ಇಳಿಸಿಕೊಳ್ಳೋಕೆ ಕರಿಮೆಣಸು: ಕರಿಮೆಣಸಿನಲ್ಲಿ ಪೈಪರಿನ್ ಎಂಬ ಅಂಶವಿರುತ್ತದೆ.
ಇದು ದೇಹದಲ್ಲಿ ಬೊಜ್ಜಿನ ಅಂಶವನ್ನು ಕಡಿಮೆ ಮಾಡುತ್ತದೆ.
ಲವಂಗ: ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳುವಾಗ ಸರಿಯಾಗಿ ಆಹಾರ ಜೀರ್ಣವಾಗೋದು ಬಹಳ ಮುಖ್ಯ.
ಆಹಾರ ಜೀರ್ಣವಾಗುವಾಗ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಉಳಿದುಕೊಳ್ಳುತ್ತದೆ.
ಜೀರ್ಣವಾಗುವುದೇ ಅಡಚಣೆಯಾದರೆ ಇದು ತೂಕ ಇಳಿಸಿಕೊಳ್ಳುವ ನಿಮ್ಮ ಪ್ರಯತ್ನವನ್ನು ಪ್ರಯಾಸ ಮಾಡಬಹುದು.
ಕರಿಮೆಣಸು-ಲವಂಗ ಡಿಟಾಕ್ಸ್ ವಾಟರ್: 1 ಗ್ಲಾಸ್ ನೀರು, 4 ಕರಿಮೆಣಸು ಕಾಳು, 2 ಲವಂಗ
ಮಾಡುವ ವಿಧಾನ: ಒಂದು ದಿನ ರಾತ್ರಿ ಕರಿಮೆಣಸು, ಲವಂಗ ನೆನೆಸಿಡಿ. ಬೆಳಗ್ಗೆ ಇದನ್ನು ಕುದಿಸಿ ಸೋಸಿಕೊಳ್ಳಿ. ನಂತರ ಲಿಂಬೆ ಮತ್ತು ಉಪ್ಪು ಸೇರಿಸಿ ಕುಡಿಯಬಹುದು.
ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆ, ಸ್ಟಾಮಿನಾ ಹೆಚ್ಚುತ್ತದೆ.