ಮೋದಿ ಅವರ ಫೇವರೇಟ್‌ ನುಗ್ಗೆ ಸೋಪ್ಪಿನ ಪರೋಟಾ ರೆಸಿಪಿ!

First Published | Sep 26, 2020, 4:53 PM IST

ಸೆಪ್ಟೆಂಬರ್ 24 ರಂದು ಮೋದಿಯ ಫಿಟ್ ಇಂಡಿಯಾ ಚಳುವಳಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಸಮಯದಲ್ಲಿ ಅವರು ವಿರಾಟ್ ಕೊಹ್ಲಿ  ಸೇರಿ ಅನೇಕ ಸೆಲೆಬ್ರೆಟಿಗಳ ಜೊತೆ ಆನ್‌ಲೈನ್‌ ಸಂವಾದ  ನಡೆಸಿದರು. ಈ ಸಮಯದಲ್ಲಿ ಮೋದಿ ಕೂಡ ಒಂದು ರಹಸ್ಯ ರಿವೀಲ್‌ ಮಾಡಿದರು. ಮೋದಿಗೆ ನುಗ್ಗೆ ಸೋಪ್ಪಿನ ಪರೋಟಾ ಫೇವರೇಟ್‌ ಅಂತೆ. ವಾರದಲ್ಲಿ ಎರಡು ದಿನ ತಪ್ಪದೇ ಈ ಪರೋಟಾ ತಿನ್ನುತ್ತಾರೆ ಎಂದು ಹೇಳಿದರು. ಆರೋಗ್ಯಕರ ಸೊಪ್ಪಿನ ಪರೋಟಾದ ರೆಸಿಪಿ ಇಲ್ಲಿದೆ.

ಮೋದಿಯವರ ನೆಚ್ಚಿನ ಪರೋಟಾ ಮಾಡಲು, ತಾಜಾ ನುಗ್ಗೆ ಎಲೆಗಳನ್ನುತೆಗೆದುಕೊಳ್ಳಿ.
ಎಲ್ಲೆಗಳನ್ನು ಚೆನ್ನಾಗಿ ನಾಲ್ಕು ಬಾರಿ ತೊಳೆದುಕೊಳ್ಳಿ.
Tap to resize

ಎಲೆಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಜೀರಿಗೆ, ಎಣ್ಣೆ, ಅರಿಶಿನ, ಖಾರದ ಪುಡಿ, ಗರಂ ಮಸಾಲ ಪುಡಿ ಸೇರಿಸಿ.
ಈಗ ಅಗತ್ಯಕ್ಕೆ ಅನುಗುಣವಾಗಿ ನೀರು ಸೇರಿಸಿ ಮತ್ತು ಹಿಟ್ಟನ್ನು ತುಂಬಾ ಮೃದುವಾಗಿ ಬೆರೆಸಿಕೊಳ್ಳಿ. ಸ್ವಲ್ಪ ಸಮಯ ಪಕ್ಕಕ್ಕೆ ಇಡಿ.
ಕಾವಲಿಯನ್ನು ಬಿಸಿ ಮಾಡಿ. ಕಲಿಸಿದ ಹಿಟ್ಟಿನಿಂದ ಪರೋಟಾ ಲಟ್ಟಿಸಿ ಕೊಳ್ಳಿ
ಪರೋಟಾವನ್ನು ಎರಡೂ ಕಡೆ ಎಣ್ಣೆಬೆಣ್ಣೆತುಪ್ಪ ಹಾಕಿಚೆನ್ನಾಗಿ ಬೇಯಿಸಿ.
ಮೋದಿಯವ ಫೇವರೇಟ್‌ ಮರೊಂಗಿ ಪರಾಥಾ ರೆಡಿ.
ಉಪ್ಪಿನಕಾಯಿ, ಮೊಸರು ಅಥವಾ ಪಲ್ಯಗಳೊಂದಿಗೆ ಸವಿಯಿರಿ.

Latest Videos

click me!