'ಗಡ್ ಬಡ್ ಐಸ್ ಕ್ರೀಮ್' 33 ನೇ ಸ್ಥಾನದಲ್ಲಿದೆ
ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನಲ್ಲಿ, "ಗಡ್ ಬಡ್" ಕೇವಲ (gudbud icecream) ಐಸ್ ಕ್ರೀಮ್ ಅಲ್ಲ, ಅದು ಒಂದು ಇಮೋಷನ್ ಅಂತಾನೇ ಹೇಳಬಹುದು. ಪಬ್ಬಾಸ್ ರೆಸ್ಟೋರೆಂಟ್‌ನ ಈ ವಿಶೇಷ ಐಸ್ ಕ್ರೀಮ್ ಅನ್ನು ಗಾಜಿನ ಲೋಟದೊಳಗೆ ಸರ್ವ್ ಮಾಡಲಾಗುತ್ತದೆ. ಇದು ವೆನಿಲ್ಲಾ, ಸ್ಟ್ರಾಬೆರಿ, ಜೆಲ್ಲಿ, ಹಣ್ಣುಗಳು, ಒಣ ಹಣ್ಣುಗಳು ಮತ್ತು ಸಿರಪ್ ಲೇಯರ್ ಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಚಮಚ ತಿನ್ನುವಾಗಲೂ ವಿಭಿನ್ನ ರುಚಿಯನ್ನು ನೀಡುತ್ತದೆ. ಅದಕ್ಕಾಗಿಯೇ ಇದು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ ಮತ್ತು ಇದು 33 ನೇ ಸ್ಥಾನವನ್ನು ಪಡೆದುಕೊಂಡಿತು.