ಗೋವಾ: ಗೋವಾದ ಆಹಾರದಲ್ಲಿ ಸೀಫುಡ್‌ಗೇ ಮುಖ್ಯಸ್ಥಾನ. ಸ್ಪೈಸಿ ಗೋವನ್ ಥಾಲಿಯಲ್ಲಿ ವಿಂದಾಲೂ, ಸೋಲ್ ಕಡೀ, ಬಾಳೆಹಣ್ಣಿನ ಹಲ್ವಾ, ಫ್ರೈಡ್ ಕೋರ್ಮೋಲಾಸ್ ಮುಂತಾದವು ಇರುತ್ತವೆ.
ಕರ್ನಾಟಕ: ಈ ಊಟವು ಅನ್ನ, ಅಕ್ಕಿ ರೋಟಿ, ದಾಲ್, ಸಾಂಬಾರ್, ರಸಂ, ಪಲ್ಯ, ಕೋಸಂಬರಿ, ಕೇಸರಿ ಬಾತ್, ಹಪ್ಪಳದ ಸಮೃದ್ಧಿಯನ್ನು ಹೊಂದಿದೆ.
ಕೇರಳ: ಕೇರಳದ ಅಡುಗೆಯ ವಿಶೇಷತೆ ಎಂದರೆ ಅವುಗಳನ್ನು ಕೊಬ್ಬರಿ ಎಣ್ಣೆಯಲ್ಲಿಯೇ ತಯಾರಿಸಲಾಗುತ್ತದೆ ಎಂಬುದು. ಕೇರಳದ ಥಾಲಿಯು ಕೇರಳದ ಪರಂಪರೆ ಹಾಗೂ ಸಂಸ್ಕೃತಿಯನ್ನು ಚೆನ್ನಾಗಿ ಬಿಂಬಿಸುತ್ತದೆ.
ಮಧ್ಯಪ್ರದೇಶ: ಪೋಹಾ, ಸಬೂದಾನಾ ಕಿಚಡಿ, ಕೊರ್ಮಾ, ಸೀಕ್ ಕಬಾಬ್, ಉಪ್ಪಿನಕಾಯಿ, ರೋಘನ್ ಜೋಶ್ ಮುಂತಾದವನ್ನೊಳಗೊಂಡ ಮಧ್ಯಪ್ರದೇಶದ ಊಟ ಭೋಪಾಲಿ ಪಾನ್‌ನೊಂದಿಗೆ ಸಮಾಪ್ತಿಯಾಗುತ್ತದೆ.
ಮಹಾರಾಷ್ಟ್ರ: ಮಾವಿನ ರಸ, ಕೋಸಂಬರಿ, ಭಕ್ರಿ ರೋಟಿ, ಪಿಟ್ಲಾ, ಅಮ್ಟಿ, ಮಟನ್ ಕೊಲ್ಹಾಪುರಿ, ಸಬುದಾನಾ ವಡೆ ಹಾಗೂ ಪಾಯಸ ಬಾಸುಂದಿಗಳಂಥ ಸ್ವೀಟ್‌ಗಳಿಂದ ಶ್ರೀಮಂತಿಕೆಯ ರೂಪ ಹೊಂದಿದೆ.
ಹಿಮಾಚಲ ಪ್ರದೇಶ: ಅಕ್ಕಿ, ಸಿಹಿ ಅವಲಕ್ಕಿ, ಮಟರ್ ಪನೀರ್, ಮದ್ರಾ, ಮಾ ಕಿ ದಾಲ್, ಕಡ್ಡೂ ಕಾ ಕಟ್ಟಾ ಇತ್ಯಾದಿ ರುಚಿಯಾದ ತಿನಿಸುಗಳ ಸಂಗಮವಾಗಿರುತ್ತದೆ.
ಗುಜರಾತ್: ಇಲ್ಲಿನ ಆಹಾರವು ಸಿಹಿ ಹಾಗೂ ಹುಳಿಯನ್ನು ಮುಖ್ಯವಾಗಿ ಹೊಂದಿರುತ್ತದೆ. ಖಟ್ಟಾ ಮೀಟಾ ದಾಲ್, ಭಖ್ರಿ, ಥೇಪ್ಲಾ, ಆಲೂ ರಸೀಲಾ, ಸ್ಟೀಮ್ಡ್ ರೈಸ್, ಬಾದ್‌ಶಾಹಿ ಮುಂತಾದವು ಗುಜರಾತಿ ಥಾಲಿಯಲ್ಲಿರುತ್ತವೆ.
ಪಂಜಾಬ್: ಪಂಜಾಬಿ ಅಡುಗೆ ಎಂದರೆ ಬೆಣ್ಣೆ, ಹಾಲು, ಪನ್ನೀರ್‌ನಿಂದ ಸಮೃದ್ಧವಾಗಿರುತ್ತದೆ. ತಂದೂರಿ ರೋಟಿ, ಪೀಲಿ ದಾಲ್, ಅನ್ನ, ವಿವಿಧ ಮಾಂಸದಡುಗೆಗಳು, ಮಕ್ಕೆ ಕಿ ರೋಟಿ ಮುಂತಾದವಿರುತ್ತವೆ.
ರಾಜಸ್ಥಾನ: ರಾಜಸ್ಥಾನಿ ಥಾಲಿ ಎಂದರೆ ಯಾರಿಗಾದರೂ ಬಾಯಲ್ಲಿ ನೀರೂರಲೇಬೇಕು. ಅಷ್ಟೊಂದು ವೈವಿಧ್ಯತೆ. ದಾಲ್ ಬಾಟಿ ಚುರ್ಮಾ, ಮಿಸ್ಸಿ ರೋಟಿ, ಗಟ್ಟೆ ಕಿ ಸಬ್ಜಿ, ಪಂಚ್‌ಮೇಲಾ ದಾಲ್, ಲಾಲ್ ಮಾಸ್, ಬಜ್ರಾ ರೋಟಿ, ಮಜ್ಜಿಗೆ, ಹಲ್ವಾ ಇತ್ಯಾದಿ ಇತ್ಯಾದಿ ಪದಾರ್ಥಗಳು ರಾಜಸ್ಥಾನಿ ಥಾಲಿಯ ವಿಶೇಷತೆ.
ಮೇಘಾಲಯ: ಮೋಮೋಸ್, ಸ್ಟೀಮ್ಡ್ ತರಕಾರಿಗಳು, ಕಳಲೆ ಉಪ್ಪಿನಕಾಯಿ, ಮಾಂಸ ಹಾಗೂ ಮೀನಿನ ಪದಾರ್ಥಗಳು, ಅನ್ನ ಮುಂತಾದವಿರುತ್ತವಾದರೂ, ಬುಡಕಟ್ಟು ಜನಾಂಗ ಬದಲಾದಂತೆ ಥಾಲಿಯ ವಿಶೇಷತೆಯೂ ಬದಲಾಗುತ್ತದೆ.
ಉತ್ತರಾಖಂಡ: ಆಲೂ ದಾಲ್ ಪಕೋಡಾ, ಎಳ್ಳಿನ ಚಟ್ನಿ, ಗಾಹಟ್ ಕಾ ಶೊರ್ಬಾ, ಕಪ್ಪಾ, ಫನು, ಝೋಲಿ, ಮೀಟಾ ಭಾಟ್, ಚೊಲ್ ರೋಟಿ, ಲೇಸು ಹಾಗೂ ಸಿಹಿ ತಿನಿಸನ್ನು ಒಳಗೊಂಡಿರುತ್ತದೆ.
ಅರುಣಾಚಲ ಪ್ರದೇಶ: ಟೋಮ್ಯಾಟೋ- ರೆಡ್ ಚಿಲ್ಲಿ ಚಟ್ನಿ, ಅನ್ನ, ಮಾಂಸದಡುಗೆ, ಸ್ಟೀಮ್ಡ್ ತರಕಾರಿಗಳು, ಚೀಸ್, ಸೋಯಾ ಬೀನ್ಸ್ ಮುಂತಾದ ಪದಾರ್ಥಗಳು ಈ ಥಾಲಿಯ ಆಕರ್ಷಣೆಯಾಗಿವೆ.
ಆಂಧ್ರಪ್ರದೇಶ: ರಸಂ, ಚಟ್ನಿ, ವಡಾ, ಅನ್ನ ಮುಂತಾದ ವೆರೈಟಿಗಳು ತುಂಬಿರುವ ಆಂಧ್ರದ ಥಾಲಿಯಲ್ಲಿ ಮೆಣಸು ಹಾಗೂ ಮಸಾಲೆಯ ಘಮ ಎದ್ದು ಹೊಡೆಯುತ್ತದೆ.
ತಮಿಳುನಾಡು: ಇದು ಸಿಹಿಯಿಂದ ಖಾರದವರೆಗೆ ವೆರೈಟಿ ಹೊಂದಿದ್ದು, ಕೂಟು, ಸಾಂಬಾರ್, ಮೊಸರು, ಅನ್ನ, ರಸಂ, ಪಾಯಸವನ್ನು ಹೊಂದಿರುತ್ತದೆ.
ಉತ್ತರಾಖಂಡ: ಆಲೂ ದಾಲ್ ಪಕೋಡಾ, ಎಳ್ಳಿನ ಚಟ್ನಿ, ಗಾಹಟ್ ಕಾ ಶೊರ್ಬಾ, ಕಪ್ಪಾ, ಫನು, ಝೋಲಿ, ಮೀಟಾ ಭಾಟ್, ಚೊಲ್ ರೋಟಿ, ಲೇಸು ಹಾಗೂ ಸಿಹಿ ತಿನಿಸನ್ನು ಒಳಗೊಂಡಿರುತ್ತದೆ.
ಉತ್ತರ ಪ್ರದೇಶ: ಸಸ್ಯಾಹಾರ ಹಾಗೂ ಮಾಂಸಾಹಾರದ ಮಿಶ್ರಣವಿದು. ಚಿಕನ್ ಪಸಂದ, ಮಟನ್ ಕೋಫ್ತಾ, ಆಲೂ ರಸೇದಾರ್, ಖೀಮಾ ದಮ್, ನಾನ್‌ಗಳು ಹಾಗೂ ಪೇಡಾ, ಬಾಲುಶಾಹಿ ಮುಂತಾದ ಸಿಹಿ ಪದಾರ್ಥಗಳಿರುತ್ತವೆ.