ರೆಸ್ಟೋರೆಂಟ್ ಕೆಫೆ ಮೈಸೂರಿನಲ್ಲಿ ಸಿಗೋ ಈ ತಿಂಡಿ ಅಂಬಾನಿ ದಂಪತಿಯ ನೆಚ್ಚಿನ ಆಹಾರಗಳಲ್ಲೊಂದು!

Published : Nov 24, 2023, 02:56 PM ISTUpdated : Nov 24, 2023, 03:19 PM IST

ದೇಶದ ಆಗರ್ಭ ಶ್ರೀಮಂತರಾದ ಮುಖೇಶ್ ಮತ್ತು ನೀತಾ ಅಂಬಾನಿ ಬಗ್ಗೆ ತಿಳಿದುಕೊಳ್ಳಲು ಜನರು ತುಂಬಾನೆ ಇಷ್ಟಪಡ್ತಾರೆ. ಅವರ ಜೀವನ ಶೈಲಿ ಹೇಗಿರುತ್ತೆ? ಅವರು ಏನು ತಿನ್ನುತ್ತಾರೆ ಇತ್ಯಾದಿ. ಇಂದು ನಾವು ನಿಮಗೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಆಹಾರ ಕ್ರಮದ ಬಗ್ಗೆ ಹೇಳ್ತೀವಿ..  

PREV
18
ರೆಸ್ಟೋರೆಂಟ್ ಕೆಫೆ ಮೈಸೂರಿನಲ್ಲಿ ಸಿಗೋ ಈ ತಿಂಡಿ ಅಂಬಾನಿ ದಂಪತಿಯ ನೆಚ್ಚಿನ ಆಹಾರಗಳಲ್ಲೊಂದು!

ವಿಶ್ವದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ (Mukesh Ambani) ಹೆಸರು ಕೇಳಿದ ತಕ್ಷಣ, ಅವರ ಬಗ್ಗೆ ತಿಳಿದುಕೊಳ್ಳಲು ಜನರು ಇಷ್ಟ ಪಡ್ತಾರೆ. ಅವರು ಮನೆಯಲ್ಲಿ ಏನು ಮಾಡುತ್ತಾರೆ, ಮನೆಯಲ್ಲಿ ಎಷ್ಟು ಸೇವಕರು ಇದ್ದಾರೆ, ಮುಖೇಶ್ ಮತ್ತು ನೀತಾ ಅಂಬಾನಿ ಅವರ ನೆಚ್ಚಿನ ಕಾರು ಯಾವುದು, ನೀತಾ ಅಂಬಾನಿಯ ಸೀರೆ ಯಾವ ಬಣ್ಣದಲ್ಲಿದೆ ಇತ್ಯಾದಿ. ಆದರೆ ಜನರು ತಿಳಿದುಕೊಳ್ಳಲು ಬಯಸುವ ಮತ್ತೊಂದು ವಿಷಯವಿದೆ, ಹೌದು ಇವರ ನೆಚ್ಚಿನ ಆಹಾರದ ಬಗ್ಗೆ ತಿಳಿಯೋಣ. .
 

28

ಆಗರ್ಭ ಶ್ರೀಮಂತರಾಗಿರೋ (Richest person) ಮುಖೇಶ್ ಅಂಬಾನಿ ಒಬ್ಬ ಕಠಿಣ ಪರಿಶ್ರಮಿ ಅನ್ನೋದು ಮತ್ತೆ ಹೇಳಬೇಕಾಗಿಲ್ಲ. ಆದರೆ ಇವರ ಜೀವನಶೈಲಿ ಮತ್ತು ಆಹಾರ ಕ್ರಮ ತುಂಬಾನೆ ಸಿಂಪಲ್ ಆಗಿದೆ. ಲಕ್ಸುರಿಯಾದ ಬದುಕು ಇದ್ದರೂ ಅವರಿಗೆ ಸಿಂಪಲ್ ಆಗಿರುವ ಜೀವನಶೈಲಿ (Lifestyle) ಮತ್ತು ಆಹಾರ (Food) ಸೇವಿಸೋದು ತುಂಬಾ ಇಷ್ಟ. 
 

38

ಮುಕೇಶ್ ಅವರು ಹೆಚ್ಚಾಗಿ ತಮ್ಮ ಡಯಟ್ (Diet)ನಲ್ಲಿ ಪೌಷ್ಟಿಕಾಂಶ ತುಂಬಿದ ಆಹಾರವನ್ನು (Vitamin Rich Food) ಸೇವಿಸುತ್ತಾರೆ. ಅದರಲ್ಲಿ ದಾಲ್ (Dal), ಅನ್ನ (Rice), ರೋಟಿ (Roti), ಮೊದಲಾದ ಆಹಾರಗಳನ್ನು ಸೇವಿಸುತ್ತಾರೆ. ಅದಲ್ಲದೇ ಪಪ್ಪಾಯ ಜ್ಯೂಸ್ (papaya juice) ಪ್ರತಿದಿನ ಕುಡಿಯೋದನ್ನು ಸಹ ಇವರು ಇಷ್ಟಪಡ್ತಾರೆ. 
 

48

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಹೆಚ್ಚಾಗಿ ಇಷ್ಟ ಪಟ್ಟು ಸೇವಿಸುವಂತಹ ಆಹಾರಗಳು ಯಾವುವು? 
ಬೇಲ್ ಪುರಿ

ಸ್ಟ್ರೀಟ್ ಫುಡ್ ಗಳಲ್ಲಿ (street food) ಭೇಲ್ ಪುರಿ ತಿನ್ನುವ ಮೋಜು ಬೇರೆಲ್ಲಿಯೂ ಕಂಡುಬರುವುದಿಲ್ಲ. ಅಂಬಾನಿ ಬಗ್ಗೆ ಮಾತನಾಡುವುದಾದರೆ, ಇದು ಅವರ ನೆಚ್ಚಿನ ಆಹಾರ.  ಸ್ವಾತಿ ಸ್ನ್ಯಾಕ್ಸ್ ನಿಂದ ಅವರು ಹೆಚ್ಚಾಗಿ ಬೇಲ್ ಪುರಿ ತಿಂತಾರಂತೆ. ಮುಂಬೈ ಮೂಲದ ಈ ಸರಳ ಫಾಸ್ಟ್ ಫುಡ್ ಜಾಯಿಂಟ್ 1960 ರ ದಶಕದಿಂದ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರು ಸೇರಿದಂತೆ ಸೆಲೆಬ್ರಿಟಿಗಳಿಗೆ ನೆಚ್ಚಿನ ಸ್ನ್ಯಾಕ್ ಪಾಯಿಂಟ್ಗಳಲ್ಲಿ ಒಂದು. ಇದು ಮುಖ್ಯವಾಗಿ ಗುಜರಾತ್ ನಿಂದ ಹುಟ್ಟಿಕೊಂಡ ಸಾಂಪ್ರದಾಯಿಕ ಚಾಟ್ಸ್‌ನಲ್ಲೊಂದು. ಅಂಬಾನಿ ಈ ರೆಸ್ಟೋರೆಂಟ್ ನ ಭೇಲ್ಪುರಿಯನ್ನು (bhel puri) ಇಷ್ಟಪಡ್ತಾರಂತೆ. 
 

58

ಗುಜರಾತಿ ದಾಲ್ (Gujrati Dal)
ಈ ಬಿಲಿಯನೇರ್ ಕುಟುಂಬವು ಸಸ್ಯಾಹಾರಿ ಆಹಾರವನ್ನು (vegetable food) ಇಷ್ಟಪಡುತ್ತದೆ ಮತ್ತು ಯಾವಾಗಲೂ ಸಾಂಪ್ರದಾಯಿಕ ಆಹಾರವನ್ನು (Traditional Food) ಆಯ್ಕೆ ಮಾಡ್ತಾರೆ. ವರದಿಯ ಪ್ರಕಾರ, ಮುಖೇಶ್ ಅಂಬಾನಿ ರಾತ್ರಿ ಊಟಕ್ಕೆ ಗುಜರಾತಿ ಆಹಾರವನ್ನು ಸವಿಯುತ್ತಾರೆ, ಇದು ಪೌಷ್ಟಿಕ ಮತ್ತು ಸಾಂಪ್ರದಾಯಿಕವಾಗಿದೆ. ಅಂದಹಾಗೆ, ದಾಲ್ ಗುಜರಾತ್ ಮತ್ತು ಮುಂಬೈ ಮತ್ತು ದೆಹಲಿಯಲ್ಲಿ ಬಹಳ ಪ್ರಸಿದ್ಧ.
 

68

ರಾಜ್ಮಾ ರೋಟಿ (Rajma Roti)
ರಾಜ್ಮಾ ಚಾವಲ್ ಎಲ್ಲರಿಗೂ ಇಷ್ಟ. ದೆಹಲಿಯಲ್ಲಿ ರಾಜ್ಮಾ ಚಾವಲ್ ಇಷ್ಟಪಡದವರು ಯಾರೂ ಇರುವುದಿಲ್ಲ. ಆದರೆ ಅಂಬಾನಿ ದಂಪತಿ ರಾಜ್ಮಾ ರೊಟ್ಟಿಯನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ವೃತ್ತಿಪರ ಬಾಣಸಿಗರು ತಯಾರಿಸಿದ ಪೌಷ್ಟಿಕ ಮತ್ತು ಕಡಿಮೆ ಕ್ಯಾಲೊರಿ ರಾಜ್ಮಾವನ್ನು ತಿನ್ನುತ್ತಾರೆ. 
 

78

ದಹೀ ಆಲೂ (Dahi Aloo)
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡ ದಹೀ ಆಲೂ ತುಂಬಾ ಇಷ್ಟಪಡುತ್ತಾರೆ. ಅವರು ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಆಯ್ಕೆಯ ಈ ಸ್ಟ್ರೀಟ್ ಫುಡ್ ತಿನ್ನುತ್ತಾರೆ. ದಹಿ ಆಲೂಗಡ್ಡೆ ಕೂಡ ದೆಹಲಿಯಲ್ಲಿ ಬಹಳ ಪ್ರಸಿದ್ಧವಾಗಿದೆ. 

88

ಇಡ್ಲಿ ಸಾಂಬಾರ್ (Idli Sambar)
ಮುಖೇಶ್ ಅಂಬಾನಿ ದಕ್ಷಿಣ ಭಾರತದ ಆಹಾರವನ್ನು ಸಹ ಇಷ್ಟಪಡ್ತಾರೆ, ವಿಶೇಷವಾಗಿ ಇಡ್ಲಿ ಸಾಂಬಾರ್ ತಿನ್ನಲು ಇಷ್ಟ ಪಡ್ತಾರಂತೆ. ಮುಂಬೈನ ಮಾಟುಂಗಾದಲ್ಲಿ, ವಿಶೇಷವಾಗಿ ಕಿಂಗ್ಸ್ ಸರ್ಕಲ್‌ನಲ್ಲಿರುವ  ಪ್ರಸಿದ್ಧ ದಕ್ಷಿಣ ಭಾರತದ ರೆಸ್ಟೋರೆಂಟ್ ಕೆಫೆ ಮೈಸೂರು ಅವರ ನೆಚ್ಚಿನ ಊಟದ ಸ್ಥಳಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ರೆಸ್ಟೋರೆಂಟ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT) ಗೆ ಹತ್ತಿರದಲ್ಲಿದೆ, ಅಲ್ಲಿ ಮುಖೇಶ್ ಅಂಬಾನಿ ಹಿಂದೆ ರಾಸಾಯನಿಕ ಎಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದಿದ್ದರು.
 

Read more Photos on
click me!

Recommended Stories